ಚಿತ್ರದುರ್ಗ: ವಾರಾಂತ್ಯದ ಲಾಕ್ಡೌನ್ ಘೋಷಣೆ ಮಾಡಿದ್ರೂ, ಮಾಂಸ ಖರೀದಿಗಾಗಿ ನಿರ್ಭೀತಿಯಿಂದ ಮಾಂಸದಂಗಡಿ ಮುಂದೆ ಜನರು ಸೇರಿದ್ದಾರೆ.
ಚಿತ್ರದುರ್ಗ ನಗರದಲ್ಲಿ ಮೀನು ಮಾಂಸ ಕೊಳ್ಳಲು ಜನರು ಮುಗಿಬಿದ್ದಿದ್ದು, ನಗರದಾದ್ಯಂತ ಮಾಂಸದಂಗಡಿಗಳಲ್ಲಿ ಜನದಟ್ಟಣೆ ಕಂಡುಬಂತು.
ಲಾಕ್‌ಡೌನ್‌ಗೆ ಕ್ಯಾರೇ ಎನ್ನದವವರಿಗೆ ಬಿತ್ತು ದಂಡ:
ಲಾಕ್ಡೌನ್ ನಡುವೆ ಅನಗತ್ಯವಾಗಿ ವಾಹನಗಳನ್ನು ರಸ್ತೆಗಿಳಿಸಿದವರಿಗೆ ಪೊಲೀಸರು ಶಾಕ್ ನೀಡುತ್ತಿದ್ದಾರೆ. ಸುಮಾರು 30ಕ್ಕೂ ಅಧಿಕ ವಾಹನ ಸವಾರರಿಂದ ದಂಡ ವಸೂಲಿ ಮಾಡಿ ಬಿಸಿ ಮುಟ್ಟಿಸಿದ್ದಾರೆ.
ನಗರದ ಮಾರಮ್ಮ ದೇವಸ್ಥಾನದ ಬಳಿ ವಾಹನ ಸವಾರರಿಂದ ಪೊಲೀಸರು ದಂಡ ವಸೂಲಿ ಮಾಡಿ ರಸ್ತೆಗಿಳಿಯದಂತೆ ಎಚ್ಚರಿಕೆ ನೀಡಿದ್ದಾರೆ.