ETV Bharat / state

ಮಳೆರಾಯನ ಮುನಿಸಿನಿಂದ ಕಂಗೆಟ್ಟ ಕೋಟೆನಾಡಿನ ಜನ - kannadanews

ಚಿತ್ರದುರ್ಗ ಜಿಲ್ಲೆಯಲ್ಲಿ ಈ ಬಾರಿಯೂ ಬರ ಆವರಿಸಿದ್ದು, ಕೃಷಿ ಮಾಡಲಾಗದೇ ಅನ್ನದಾತರು ಕಂಗಾಲಾಗಿದ್ದಾರೆ.

ಮಳೆರಾಯನ ಮುನಿಸಿಂದ ಕಂಗೆಟ್ಟ ಕೋಟೆನಾಡ ಜನ
author img

By

Published : Jul 9, 2019, 10:39 PM IST

ಚಿತ್ರದುರ್ಗ : ಕೋಟೆನಾಡಿನ ರೈತರು ಈ ಬಾರಿ ನಿರೀಕ್ಷೆಯಷ್ಟು ಮಳೆಯಾಗದ ಕಾರಣ ಹೈರಾಣಾಗಿದ್ದಾರೆ. ಏಪ್ರಿಲ್ ಮತ್ತು ಮೇ ತಿಂಗಳು ಬಂತದ್ರೆ ಜಿಲ್ಲೆಯ ಎಲ್ಲಾ ಭಾಗಗಳಲ್ಲಿ ಬಿತ್ತನೆ ಕಾರ್ಯ ಜೋರಾಗಿರ್ತಿತ್ತು. ಆದ್ರೆ ಈ ಬಾರಿ ವರುಣನ ಹಾವು ಏಣಿ ಆಟದಿಂದ ಜೂನ್ ತಿಂಗಳು ಮುಗಿದರೂ ಬಿತ್ತನೆ ಕಾರ್ಯ ಮಂದಗತಿಯಲ್ಲಿ ಸಾಗುತ್ತಿದೆ. ಸಕಾಲಕ್ಕೆ ಮಳೆರಾಯ ಕೃಪೆ ತೋರಿದ್ರೆ ಈ ಹೊತ್ತಿಗೆ ರೈತರ ಜಮೀನುಗಳಲ್ಲಿ ಈರುಳ್ಳಿ, ಮೆಕ್ಕೆಜೋಳ, ಶೇಂಗಾ, ಸೇರಿದಂತೆ ಅನೇಕ ಬೆಳೆ ಪೈರು ಮೊಳಕೆಯೊಡೆಯಬೇಕಿತ್ತು.

ಮಳೆರಾಯನ ಮುನಿಸಿಂದ ಕಂಗೆಟ್ಟ ಕೋಟೆನಾಡ ಜನ

ಇನ್ನೂ ಜಿಲ್ಲೆಯಲ್ಲಿ ಪ್ರತಿ ಮುಂಗಾರು ಹಂಗಾಮಿನಲ್ಲಿ ಒಟ್ಟು 3,58,340 ಹೆಕ್ಟೇರ್ ಬಿತ್ತನೆಯ ಗುರಿ ಇದ್ದು, ಜೂನ್ ಅಂತ್ಯದವರೆಗೆ 44,000 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಬೇಕಾಗಿತ್ತು. ಆದ್ರೆ ಕೇವಲ 14,000 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಜಿಲ್ಲೆಯ ಕೃಷಿ ಇಲಾಖೆಯಲ್ಲಿ ಒಟ್ಟು 11,000 ದಷ್ಟು ಬಿತ್ತನೆ ಬೀಜಗಳ ದಾಸ್ತಾನಿದ್ದು, ಈಗಾಗಲೇ 8,000 ದಷ್ಟು ಮಾರಾಟ ಆಗಿದೆಯಂತೆ. ರಸಗೊಬ್ಬರ 17,000 ಮೆಟ್ರಿಕ್ ಟನ್ ರಷ್ಟು ರಸಗೊಬ್ಬರ ದಾಸ್ತಾನಿದ್ದರೂ ಕೂಡ ಮಳೆ ಕೊರೆತಿಯಿಂದ ರೈತರು ಬಿತ್ತನೆ ಮಾಡಲು ಹಿಂಜರಿಯುತ್ತಿದ್ದಾರಂತೆ.

ಒಟ್ಟಾರೆ ಕೋಟೆನಾಡಿನ ರೈತರು ಕಳೆದ ಏಳೆಂಟು ವರ್ಷಗಳಿಂದ ವರುಣನ ಮುನಿಸಿಗೆ ರೋಸಿ ಹೊಗಿದ್ದಾರೆ. ಬಿತ್ತನೆ ಕಾರ್ಯವನ್ನ ಶುರು ಮಾಡಲಿಕ್ಕೆ ಮಳೆರಾಯ ಯಾವಾಗ ಆಗಮಿಸುತ್ತಾನೋ ಎಂದು ಕಾದು ಕುಳಿತಿದ್ದಾರೆ.ಅಷ್ಟೋ ಎಷ್ಟೋ ಮಳೆಗೆ ಬಿತ್ತನೆ ಕಾರ್ಯ ಆರಂಭಿಸಿದ ರೈತರಂತು ಕುಂತ್ರು ನಿಂತ್ರು ವರುಣ ದೇವನ ಜಪ ಮಾಡ್ತಿದ್ದಾರೆ. ಈ ವರ್ಷವಾದರೂ ವರುಣದೇವ ಕೃಪೆ ತೋರಿದ್ರೆ ಬರದಿಂದ ಬಸವಳಿದ ಜಿಲ್ಲೆಯ ಅನ್ನದಾತರು ನೆಮ್ಮದಿಯ ನಿಟ್ಟುಸಿರು ಬಿಟ್ಟಾರು.

Intro:ಮುಂಗಾರ ಆಗಮಿಸಿದ್ರೂ ಆಗಿಲ್ಲ ಪೂರ್ಣ ಪ್ರಮಾಣದ ಬಿತ್ತನೆ : ಮಳೆಗಾಗಿ ಕಾದು ಕೂತ ಕೋಟೆನಾಡಿನ ರೈತರು
ವಿಶೇಷ ವರದಿ….
ಆ್ಯಂಕರ್:- ಬರದ ನಾಡು ಎಂದು ಖ್ಯಾತಿ ಗಳಿಸಿರುವ ಚಿತ್ರದುರ್ಗದಲ್ಲಿ ಬರ ಮುಂದುವರೆದಿದೆ. ಸದಾ ಬರದಿಂದ ಬಳಲುವ ಜಿಲ್ಲೆಯ ಅನ್ನದಾತ ಈ ಬಾರಿಯಾದ್ರೂ ಮಳೆರಾಯ ಕೃಪೆ ತೋರುತ್ತಾನೆ ಎಂದು ಕಾದು ಕೂತಿದ್ದ ರೈತರಿಗೆ ವರುಣ ನಿರಾಸೆ ಮೂಡಿಸಿದ್ದಾನೆ. ಅದ್ರೇ ಕೆಲ ದಿನಗಳಿಂದ ಅಲ್ಪಸ್ವಲ್ಪ ಮುಂಗಾರು ಮಳೆ ಜಿಲ್ಲೆಗೆ ಕೃಪೆ ತೋರಿದ್ದರಿಂದ ರೈತ ಮತ್ತೆ ಕೃಷಿ ಚಟುವಟಿಕೆ ಆರಂಭಿಸಿದ್ದಾನೆ, ಆದ್ರೆ ಈ ಬಾರಿಯೂ ಬಿತ್ತಿದ ಬೆಳೆ ಕೈಗೆ ಸಿಗುವ ನಿರೀಕ್ಷೆ ಮಾತ್ರ ಅನ್ನಧಾತನ ಮೊಗದಲ್ಲಿಲ್ಲ. ಬಿತ್ತುವುದನ್ನೇ ಕಾಯಕ ಅಂದುಕೊಂಡಿರುವ ರೈತರು ಸಮೃದ್ಧಿ ಬೆಳೆಗೆ ಕಾದು ಕೂತಿದ್ದಾರೆ.
ಲುಕ್,,,,,
ಫ್ಲೋ,,,,,
ವಾಯ್ಸ್01:- ಜೂನ್ ತಿಂಗಳು ಬಂತು ಅಂದ್ರೆ ಸಾಕು ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಬಿಡ್ತಿದ್ರು. ಆದ್ರೆ ಈ ಬಾರಿ ಮಳೆರಾಯ ನಿರಾಸೆ ಮೂಡಿಸಿದ್ದು, ರೈತರು ಹೈರಾಣಾಗಿದ್ದಾರೆ. ಸರಿಯಾಗಿ ಮಳೆ ಬಾರದೇ ಕೋಟೆನಾಡಿನ ರೈತರು ಕಂಗಾಲಾಗಿದ್ದಾರೆ. ಏಪ್ರಿಲ್ ಮತ್ತು ಮೇ ತಿಂಗಳು ಬಂತದ್ರೆ ಜಿಲ್ಲೆಯ ಎಲ್ಲಾ ಭಾಗಗಳಲ್ಲಿ ಬಿತ್ತನೆ ಕಾರ್ಯ ಬಲು ಜೋರಾಗಿರುತ್ತತ್ತು. ಇದರ ತದ್ವಿರುದ್ಧವಾಗಿ ಈ ಬಾರಿ ವರುಣನ ಹಾವು ಏಣಿ ಆಟದಿಂದ ಜೂನ್ ತಿಂಗಳು ಮುಗಿದರೂ ಬಿತ್ತನೆ ಕಾರ್ಯ ಈಗಷ್ಟೇ ಆರಂವಾಗಿದೆ. ಜಿಲ್ಲೆಯಲ್ಲಿ ಮೊನ್ನೆ ಸುರಿದ ಅಷ್ಟೋ ಇಷ್ಟೋ ಮಳೆಯನ್ನೇ ನಂಬಿದ ಬೆರಳಣಿಕೆಯಷ್ಟು ರೈತರು ಬಿತ್ತನೆ ಕಾರ್ಯಕ್ಕೆ ಮುಂದಾಗಿದ್ದಾರೆ. ಕಾಲಕ್ಕೆ ಸರಿಯಾಗಿ ವರಣ ಕೃಪೆ ತೋರಿದ್ರೆ ಈ ಹೊತ್ತಿಗೆ ರೈತರ ಜಮಿನುಗಳಲ್ಲಿ ಈರುಳ್ಳಿ, ಮೆಕ್ಕೆಜೋಳ, ಶೇಂಗಾ, ಸೇರಿದಂತೆ ಅನೇಕ ಬೆಳೆ ಪೈರು ಮೊಳಕೆಯೊಡೆದಿರಬೇಕಿತ್ತು. ಜೂನ್ ಅಂತ್ಯದ ವರೆಗೂ ಮಳೆಯಾಗದ ಪರಿಣಾಮ ಒಲ್ಲದ ಮನಸ್ಸಿನಿಂದ ರೈತ ಬಿತ್ತನೆಗೆ ಮುಂದಾಗಿದ್ರೆ, ಮುಂದೆ ಮಳೆಯಾಗದೇ ಇದ್ದರೆ ಕೃಷಿ ಅವಲಂಬಿತ ಕೂಲಿ ಕಾರ್ಮಿಕರು ಎತ್ತುಗಳನ್ನ ಮಾರಿ, ಬೇರೆ ಕಡೆ ಕೂಲಿ ಕೆಲಸಕ್ಕೆ ಹೋಗೋದೆ ವಾಸಿ ಅಂತಿದ್ದಾರೆ..
ಫ್ಲೋ,,,,,,
ಬೈಟ್01:- ಶಂಕರಪ್ಪ, ರೈತ ಮುಖಂಡ
ವಾಯ್ಸ್02:- ಇನ್ನೂ ಜಿಲ್ಲೆಯಲ್ಲಿ ಪ್ರತಿ ಮುಂಗಾರು ಹಂಗಾಮಿನಲ್ಲಿ ಒಟ್ಟು 3,58,340 ಹೆಕ್ಟೇರ್ ಬಿತ್ತನೆಯ ಗುರಿ ಇದ್ದು, ಜೂನ್ ಅಂತ್ಯದವರೆಗೆ 44,000 ಹೆಕ್ಟೇರ್ ನಲ್ಲಿ ಬಿತ್ತನೆಯಾಗಬೇಕಾಗಿತ್ತು, ಅದ್ರೇ ಕೇವಲ 14,000 ಹೆಕ್ಟೇರ್ ನಲ್ಲಿ ಬಿತ್ತನೆಯಾಗಿದೆ. ಅದ್ರೇ ಇನ್ನೂ ಕೆಲ ರೈತರು ಮಳೆಗಾಗಿ ಕಾದು ಕೂತಿದ್ದು, ಮಳೆರಾಯ ಕೃಪೆ ತೋರುತ್ತಿಲ್ಲ. ಜಿಲ್ಲೆಯ ಕೃಷಿ ಇಲಾಖೆಯಲ್ಲಿ ಒಟ್ಟು 11,000 ದಷ್ಟು ಬಿತ್ತನೆ ಬೀಜಗಳ ದಾಸ್ತಾನಿದ್ದು, ಈಗಾಗಲೇ 8,000 ದಷ್ಟು ಮಾರಾಟ ಆಗಿದೆಯಂತೆ. ರಸಗೊಬ್ಬರ 17,000 ಮೆಟ್ರಿಕ್ ಟನ್ ರಷ್ಟು ರಸಗೊಬ್ಬರ ದಾಸ್ತಾನಿದ್ದರೂ ಕೂಡ ರೈತರು ಬಿತ್ತನೆ ಮಾಡಲು ಹಿಂಜಹರಿಯುತ್ತಿದ್ದಾರಂತೆ. ಇದರ ಬಗ್ಗೆ ಜಂಟಿ ಕೃಷಿ ಉಪನಿರ್ದೇಶಕರನ್ನ ಕೇಳಿದ್ರೆ ಸರ್ಕಾರ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆ ಮಾಡಿದ್ದು, ರೈತರಿಗೆ ಅನುಕೂಲವಾಗಲೆಂದು ಕೃಷಿ ಯಂತ್ರಧಾರೆಗಳನ್ನ ರೈತರಿಗೆಂದೆ 20% ಕಡಿಮೆ ದರದ ಬಾಡಿಗೆಗೆ ಕೊಡುವ ವ್ಯವಸ್ಥೆಯನ್ನು ಮಾಡಿದೆ. ಹೀಗಾಗಿ ರೈತರು ಮುಂದಿನ ದಿನಗಳಲ್ಲಿ ತಮಗೆ ಅಗತ್ಯವಿದ್ದಷ್ಟು ಬಿತ್ತನೆ ಬೀಜ, ರಸಗೊಬ್ಬರ ಹಾಗು ಕೃಷಿ ಯಂತ್ರಗಳನ್ನ ಪಡೆದುಕೊಳ್ಳಬಹುದಾಗಿದೆ ಎಂದರು.
ಫ್ಲೋ,,,,
ಬೈಟ್03:- ಲಕ್ಷ್ಮಣ್ ಕಳ್ಳಣ್ಣವರ್, ಜಂಟಿ ನಿರ್ದೇಶಕರು ಕೃಷಿ ಇಲಾಖೆ.
ವಾಯ್ಸ್03: - ಒಟ್ಟಾರೆ ಕೋಟೆನಾಡಿನಲ್ಲಿ ರೈತರು ಕಳೆದ ಏಳೆಂಟು ವರ್ಷಗಳಿಂದ ಮಳೆರಾಯನ ಹಾವು ಏಣಿ ಆಟಕ್ಕೆ ಬೇಸತ್ತು ಹೋಗಿದ್ದಾರೆ. ಮಳೆಯಿಲ್ಲದೇ ಕಂಗಾಲಾಗಿರುವ ರೈತರು ಬಿತ್ತನೆ ಕಾರ್ಯವನ್ನ ಶುರು ಮಾಡಲಿಕ್ಕೆ ಮಳೆರಾಯ ಯಾವಾಗ ಆಗಮಿಸುತ್ತಾನೋ ಎಂದು ಕಾದು ಕುಳಿತಿದ್ರೆ, ಕೆಲವು ರೈತರು ಮಾತ್ರ ಇತ್ತೀಚೆಗೆ ಸುರಿದ ಅಷ್ಟೋ ಇಷ್ಟೋ ಮಳೆಯನ್ನ ನಂಬಿ ಕೃಷಿ ಕಾಯಕದಲ್ಲಿ ತೊಡಗಿದ್ದಾರೆ. ಈ ವರ್ಷವಾದರೂ ವರುಣದೇವ ಕೃಪೆ ತೋರಿದ್ರೆ ಬರದಿಂದ ಬಸವಳಿದ ಜಿಲ್ಲೆಯ ಅನ್ನದಾತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗುತ್ತದೆ..
ಡಿ ನೂರುಲ್ಲಾ ಈಟಿವಿ ಭಾರತ ಚಿತ್ರದುರ್ಗ
Body:mungaruConclusion:pkg
ETV Bharat Logo

Copyright © 2025 Ushodaya Enterprises Pvt. Ltd., All Rights Reserved.