ಚಿತ್ರದುರ್ಗ : ಜಿಲ್ಲೆಯಲ್ಲಿ ಮತ್ತೋರ್ವ ಯುವಕನಿಗೆ ಕೊರೊನಾ ಸೋಂಕು ದೃಢವಾಗಿದ್ದು, ಕೊರೊನಾ ಸೋಂಕಿತರ ಸಂಖ್ಯೆ 11 ಕ್ಕೆ ಏರಿಕೆಯಾಗಿದೆ.
ಉತ್ತರಪ್ರದೇಶ ಮೂಲದ 25 ವರ್ಷದ ಪಿ-1630 ಗೆ ಕೊರೊನಾ ಸೋಂಕು ದೃಢವಾಗಿದ್ದು, ಈತನನ್ನು ಚಳ್ಳಕೆರೆ ಆದರ್ಶ ಹಾಸ್ಟೆಲ್ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಇದೀಗ ಯುವಕನಿಗೆ ಸೋಂಕು ಧೃಡವಾಗಿದ್ದು, ಜಿಲ್ಲೆಯ ಕೊವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ.
ಈತ ತಮಿಳುನಾಡಿನಿಂದ ಉತ್ತರ ಪ್ರದೇಶಕ್ಕೆ ತೆರಳಲು ಸಿದ್ದವಾಗಿದ್ದಾಗ ಚೆಕ್ ಪೋಸ್ಟ್ನಲ್ಲಿ ತಡೆದು ಕ್ವಾರಂಟೈನ್ ಮಾಡಲಾಗಿತ್ತು. ಇನ್ನೂ ಯುವಕನ ಸಂಪರ್ಕದಲ್ಲಿದ್ದ ಉತ್ತರಪ್ರದೇಶ ಮೂಲದ 25 ಜನರ ಮೇಲೆ ನಿಗಾ ಇಡಲಾಗಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಿಸಿದೆ.