ಚಿತ್ರದುರ್ಗ: ರಾಷ್ಟ್ರ ಹಾಗೂ ರಾಜ್ಯಕ್ಕೂ ಕೊರೊನಾ ವೈರಸ್ ಕಾಲಿಟ್ಟಿದೆ. ಜೊತೆಗೆ ತನ್ನ ಕಬಂಧಬಾಹುಗಳನ್ನು ನಾವು ಊಹಿಸದ ರೀತಿಯಲ್ಲಿ ಚಾಚುತ್ತಾ ಮುನ್ನುಗ್ಗುತ್ತಿದೆ. ಇಂತಹ ಸನ್ನಿವೇಶದಲ್ಲಿ ನಗರದ ಜನರು ಸರ್ಕಾರದ ಸೂಚನೆಗಳಿಗೆ ಕೇರ್ ಮಾಡದೆ ಸಂತೆಯಲ್ಲಿ ತರಕಾರಿ ಹಾಗೂ ವಿವಿಧ ಪದಾರ್ಥಗಳನ್ನು ಖರೀದಿಸುವಲ್ಲಿ ಬ್ಯುಸಿಯಾಗಿದ್ದರು.
ಯುಗಾದಿ ಹಬ್ಬ ಇರುವ ಕಾರಣ ಜನರು ನಗರದ ಲಕ್ಷ್ಮೀ ಬಜಾರ್, ತರಕಾರಿ ಮಾರುಕಟ್ಟೆಗೆ ತೆರಳಿ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಲು ಮುಂದಾಗಿದ್ದರಿಂದ ಭಾರಿ ಜನ ಸಂದಣಿ ಕಂಡುಬಂತು. ಸಂತೆಯಲ್ಲಿ ಕೊರೊನಾ ಸೋಂಕು ಭೀತಿ ಇಲ್ಲಪ್ಪ ಎನ್ನುವಂತೆ ಜನರು ಖರೀದಿಯಲ್ಲಿ ತೊಡಗಿದ್ದರು.
ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ರೂ ಕೂಡ ನಿಯಮವನ್ನು ಗಾಳಿಗೆ ತೂರಲಾಗುತ್ತಿದೆ. ಈ ಕುರಿತು ಅಧಿಕಾರಿಗಳು ಏಕೆ ಸುಮ್ಮನ್ನಿದ್ದಾರೆ? ಅಂತ ಪ್ರಜ್ಞಾವಂತ ಜನರು ಪ್ರಶ್ನಿಸುತ್ತಿದ್ದಾರೆ.