ETV Bharat / state

ಚಿತ್ರದುರ್ಗ ಜಿಪಂ ಅಧ್ಯಕ್ಷ ಸ್ಥಾನ ಗೆದ್ದ ಖುಷಿಯಲ್ಲಿ ಲಾಕ್​ಡೌನ್​ ನಿಯಮ ಮರೆತ ಕೈ ನಾಯಕರು! - ಚಿತ್ರದುರ್ಗ ಜಿಲ್ಲಾ ಪಂಚಾಯತ್​ ಚುನಾವಣೆ

ಚಿತ್ರದುರ್ಗ ಜಿಲ್ಲಾ ಪಂಚಾಯತ್​ ಅಧ್ಯಕ್ಷ ಗದ್ದುಗೆ ಏರಿದ ಕಾಂಗ್ರೆಸ್,​ ಲಾಕ್​ಡೌನ್​ ನಿಯಮ ಉಲ್ಲಂಘನೆ ಮಾಡುವ ಜೊತೆಗೆ ಸಮಾಜಿಕ ಅಂತರ ಪಾಲನೆ ಮಾಡದಿರುವುದು ಕಂಡು ಬಂದಿದೆ.

new-president-elected-for-chitradurga-district-panchayat
ಚಿತ್ರದುರ್ಗ ಜಿಲ್ಲಾ ಪಂಚಾಯತ್
author img

By

Published : May 23, 2020, 3:40 PM IST

ಚಿತ್ರದುರ್ಗ: ಜಿಲ್ಲಾ ಪಂಚಾಯತ್​ ಅಧ್ಯಕ್ಷ ಸ್ಥಾನ ಕಾಂಗ್ರೆಸ್​ ತೆಕ್ಕೆಗೆ ಬಂದಿದ್ದು, ಪಟ್ಟ ಹಿಡಿದ ಖುಷಿಯಲ್ಲಿ ಕೈ ಬಳಗ ಲಾಕ್​ಡೌನ್​ ಮತ್ತು ಸಾಮಾಜಿಕ ಅಂತರ ಮರೆತು ಸಂಭ್ರಮಾಚರಣೆಯಲ್ಲಿ ಮುಳುಗಿತ್ತು.

ಅಧ್ಯಕ್ಷ ಗಾದಿಯನ್ನು ಉಳಿಸಿಕೊಳ್ಳಲು ಸಾಕಷ್ಟು ಹರಸಾಹಸ ಪಟ್ಟ ಜಿಲ್ಲಾ ಕೈ ನಾಯಕರಾದ ಮಾಜಿ ಶಾಸಕ ಡಿ.ಸುಧಾಕರ್, ಗೋಂವಿದಪ್ಪ, ಹಾಲಿ ಶಾಸಕ ರಘುಮೂರ್ತಿ ಸೇರಿದಂತೆ ಮಾಜಿ ಸಚಿವ ಹೆಚ್.ಆಂಜನೇಯ ಭಾಗಿಯಾಗಿ ನೂತನ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು ಅವರನ್ನು ಅಭಿನಂದಿಸುವ ಭರದಲ್ಲಿ ಸಾಮಾಜಿಕ ಅಂತರ ಮರೆತಿದ್ದಾರೆ.

ಲಾಕ್​ಡೌನ್​ ನಿಯಮ ಗಾಳಿಗೆ ತೂರಿದ ಕೈ ನಾಯಕರು

ಜಿಲ್ಲೆಯಲ್ಲಿ 11 ಕೊರೊನಾ ಪ್ರಕರಣಗಳು ಕಂಡು ಬಂದಿದ್ದು, 144 ಸೆಕ್ಷನ್ ಜಾರಿಯಲ್ಲಿದ್ದರೂ ಕೂಡ ಕಾಂಗ್ರೆಸ್ ಕಚೇರಿಯ ಆವರಣದಲ್ಲಿ ನೂತನ ಅಧ್ಯಕ್ಷೆಯನ್ನು ಅಭಿನಂದಿಸಲು ಐನೂರಕ್ಕು ಹೆಚ್ಚು ಕಾರ್ಯಕರ್ತರು ಭಾಗಿಯಾಗಿ ಲಾಕ್​ಡೌನ್ ನಿಯಮವನ್ನು ಗಾಳಿಗೆ ತೂರಿದದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ನಂತರ ಪೊಲೀಸರು ಅನೌನ್ಸ್ ಮಾಡುವ ಮೂಲಕ ಗುಂಪು ಚದುರಿಸಿದ್ದಾರೆ.

ಅಲ್ಲದೆ ಸಂಭ್ರಾಮಾಚರಣೆ ಮಾಡಲು ಮುಂದಾದ ಕೆಲ ಕಾಂಗ್ರೆಸ್​ ಕಾರ್ಯಕರ್ತರ ನಡೆಗೆ ಪೊಲೀಸರು ಬ್ರೇಕ್​ ಹಾಕಿದ್ದಾರೆ. ಪಟಾಕಿ ಸಿಡಿಸಿ ಸಂಭ್ರಮಕ್ಕೆ ಸಿದ್ಧರಾಗಿದ್ದವರನ್ನು ಚದುರಿಸಿ ಮನೆಗಳಿಗೆ ತೆರಳುವಂತೆ ಮನವಿ ಮಾಡಿದರೂ ಕದಲಲೇ ಇಲ್ಲ.

ಈ ಬಗ್ಗೆ ನೂತನ ಅಧ್ಯಕ್ಷರನ್ನ ಕೇಳಿದ್ರೆ, ಜಿಲ್ಲೆಯಲ್ಲಿ ಕೊರೊನಾ ಬಂದಿದ್ದು ಜನ ಜಾಗೃತಿ ವಹಿಸಬೇಕಾಗಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.