ಚಿತ್ರದುರ್ಗ : ಚಳ್ಳಕೆರೆ ನಗರಸಭೆಗೆ 2017-18 ನೇ ಸಾಲಿನ ಪ್ರಧಾನ ಮಂತ್ರಿ ಆವಾಸ್ ವಸತಿ ಯೋಜನೆಗೆ ರಾಷ್ಟ್ರೀಯ ಪ್ರಶಸ್ತಿ ದೊರತಿದೆ. ಚಳ್ಳಕೆರೆ ಪಟ್ಟಣ ಪಂಕಜಮ್ಮ ಎಂಬುವರು ಪ್ರಧಾನಮಂತ್ರಿ ಆವಾಸ್ ವಸತಿ ಯೋಜನೆಯಲ್ಲಿ ಮನೆ ನಿರ್ಮಾಣ ಮಾಡಿಕೊಂಡಿದ್ದರು. ಈ ಮನೆ ಅತ್ಯುತ್ತಮ ಮನೆ ನಿರ್ಮಾಣ ಎಂದು ಇಂದು ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಇನ್ನು, ಫಲಾನುಭವಿ ಪಂಕಜಮ್ಮ ಅವರಿಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಸಂವಾದ ಮೂಲಕವಾಗಿ ಪ್ರಶಸ್ತಿ ಪ್ರದಾನ ಮಾಡಲಿದ್ದು, ಚಳ್ಳಕೆರೆ ನಗರಸಭೆ ಅಧಿಕಾರಿಗಳು ಕೂಡ ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಅತ್ಯುತ್ತಮ ಮನೆ ನಿರ್ಮಾಣದ ರಾಷ್ಟ್ರೀಯ ಪ್ರಶಸ್ತಿಗೆ ಕರ್ನಾಟಕದಿಂದ ಮೂರು ಮನೆ ಆಯ್ಕೆಯಾಗಿದ್ದವು. ಈ ಪೈಕಿ ಚಳ್ಳಕೆರೆ ನಗರಸಭೆ ವ್ಯಾಪ್ತಿಯ ಪಂಕಜಮ್ಮ ಅವರ ಮನೆ ಅತ್ಯುತ್ತಮ ಮನೆ ಎಂದು ರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿದೆ.
ಓದಿ :ಚಿತ್ರದುರ್ಗ: ರಾಜಕೀಯ ದ್ವೇಷದ ಹಿನ್ನೆಲೆ ಹೋಟೆಲ್‌ಗೆ ಬೆಂಕಿ ಹಚ್ಚಿದ ಆರೋಪ!