ಚಿತ್ರದುರ್ಗ : ರಾಜಕಾರಣ ಸಾರ್ವಜನಿಕರ ಮತ್ತು ರಾಜಕಾರಣಿಗಳ ನಿದ್ದೆ ಕೆಡಿಸುತ್ತದೆ. ಕಾರಣ ರಾಜಕೀಯ ಅಸ್ಥಿರತೆ. ಇದು ರಾಜಕಾರಣವನ್ನು ಅಸ್ತವ್ಯಸ್ತಗೊಳಿಸುತ್ತದೆ. ಇಲ್ಲಿ ಸ್ಥಿರತೆ ಬೇಕಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಮಾಧ್ಯಮಳೊಂದಿಗೆ ಮಾತನಾಡಿದ ಅವರು, ಮೊನ್ನೆ ಅರಮನೆ ಮೈದಾನದಲ್ಲಿ ನೂರಾರು ಸ್ವಾಮಿಗಳು ರಾಜಕೀಯ ಅಸ್ಥಿರತೆ ಸರಿಯಾಗಲೆಂದು ನಮ್ಮ ಅಭಿಪ್ರಾಯ ವ್ಯಕ್ತಪಡಿಸಿದೆವು. ಬಸವರಾಜ ಬೊಮ್ಮಾಯಿಯವರು ಈಗ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಇದು ರಾಜಕೀಯ ಅಸ್ಥಿರತೆಯನ್ನು ಹೋಗಲಾಡಿಸಿದೆ. ಸರ್ವ ಜನಾಂಗವನ್ನು ಅವರು ಸರಿದೂಗಿಸಿಕೊಂಡು ಹೋಗಲಿ ಎಂಬ ಆಶಯ ವ್ಯಕ್ತಪಡಿಸಿದರು.
ಬೊಮ್ಮಾಯಿಯವರ ತಂದೆ ಹೋರಾಟದ ಮೂಲಕ ಬಂದವರು. ವೈಚಾರಿಕ ಚಿಂತನೆಯುಳ್ಳವರು. ಅವರ ತಂದೆಯ ರಾಜಕೀಯ ಜೀವನವನ್ನು ನಾವು ನೋಡಿದ್ದೇವೆ. ಅವರ ದಾರಿಯಲ್ಲಿ ಇವರು ಉತ್ತಮ ಸೇವೆ ನೀಡಲಿ. ರಾಜಕೀಯ ಅಸ್ಥಿರತೆಯನ್ನು ಶಾಶ್ವತವಾಗಿ ನಿವಾರಿಸಲಿ. ಬಿಎಸ್ ಯಡಿಯೂರಪ್ಪ ಅವರ ಗರಡಿಯಲ್ಲಿ ಪಳಗಿದ್ದಾರೆ. ಹಾಗಾಗಿ, ಅವರು ಉತ್ತಮ ಸರ್ಕಾರ ನೀಡುತ್ತಾರೆಂಬ ಆಶಯವಿದೆ ಎಂದರು.
ಮುಖ್ಯಮಂತ್ರಿಸ್ಥಾನ ಯಾವ ಮಠದ್ದೂ ಅಲ್ಲ. ರಾಜ್ಯದ ಪ್ರಜೆಗಳು ಆ ಸ್ಥಾನವನ್ನು ನಿರ್ಧರಿಸುತ್ತಾರೆ. ಯಡಿಯೂರಪ್ಪನವರ ನಿಕಟವರ್ತಿಗಳಾದ ಬೊಮ್ಮಾಯಿಯವರನ್ನು ಆಯ್ಕೆ ಮಾಡಿರುವುದು ಹೈಕಮಾಂಡ್‍ನ ಪ್ರಬುದ್ಧ ನಡೆಯಾಗಿದೆ ಎಂದರು.
ಓದಿ: ರಾಜ್ಯದ ಜನತೆಗೆ ನೂತನ ಸಿಎಂ ಭರ್ಜರಿ ಕೊಡುಗೆ: ರೈತರ ಮಕ್ಕಳು, ವಿಧವೆಯರು, ಹಿರಿಯ ನಾಗರಿಕರಿಗೆ ಬಂಪರ್