ETV Bharat / state

ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ, ಆರೋಪಿಗಳು ಪರಾರಿ - ಚಿತ್ರದುರ್ಗ ಜಿಲ್ಲೆಯ ಹರವಿಗೊಂಡನಹಳ್ಳಿ

ಚಿತ್ರದುರ್ಗ ಜಿಲ್ಲೆಯ ಹರವಿಗೊಂಡನಹಳ್ಳಿ ಗ್ರಾಮದ ಚಂದ್ರಣ್ಣ ಎಂಬವರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಲಾಗಿದೆ.

murder in chitradurga district
ತಲೆ ಮೇಲೆ ಕಲ್ಲು ಹಾಕಿ ಕೊಲೆ
author img

By

Published : Dec 5, 2019, 3:18 PM IST

ಚಿತ್ರದುರ್ಗ : ತಲೆಯ ಮೇಲೆ ಕಲ್ಲು ಎತ್ತಿಹಾಕಿ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹರವಿಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹರವಿಗೊಂಡನಹಳ್ಳಿ ಗ್ರಾಮದ ಚಂದ್ರಣ್ಣ (55) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.

ಚಂದ್ರಣ್ಣ, ರಮೇಶ್ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಕಟ್ಟಿಗೆ ಇದ್ದಿಲು ತಯಾರಿಸುವ ಕೆಲಸ ಮಾಡುತ್ತಿದ್ದ. ರಾತ್ರಿ ಜಮೀನಿನಲ್ಲಿ ಇದ್ದಿಲು ತಯಾರಿಸಿ ಅಲ್ಲೇ ಕಾವಲು ಕಾಯುತ್ತ ಮಲಗಿದ್ದಾನೆ. ಈ ವೇಳೆ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.

ಕೇಸು ದಾಖಲಿಸಿಕೊಂಡಿರುವ ಪರಶುರಾಮಪುರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳಿಗೆ ಶೋಧಕಾರ್ಯ ನಡೆಯುತ್ತಿದೆ.

Intro:ಕಲ್ಲಿನಿಂದ ತಲೆ ಜಜ್ಜಿ ವ್ಯಕ್ತಿಯ ಬರ್ಬರ ಹತ್ಯೆ

ಆ್ಯಂಕರ್:- ತಲೆಯ ಮೇಲೆ ಕಲ್ಲನ್ನಹ ಎತ್ತಿ ಹಾಕಿ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹರವಿಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ಹರವಿಗೊಂಡನಹಳ್ಳಿ ಗ್ರಾಮದ ಚಂದ್ರಣ್ಣ (55) ಕೊಲೆಯಾದ ವ್ಯಕ್ತಿ. ರಮೇಶ್ ಎಂಬುವರಿಗೆ ಸೇರಿದ ಜಮೀನಿನಲ್ಲಿ ಕಟ್ಟಿಗೆ ಇದ್ದಿಲು ತಯಾರಿಸುವ ಕೆಲಸ ಮಾಡುತ್ತಿದ್ದ ಮೃತ ಚಂದ್ರಣ್ಣ ಎಂದು ಗ್ರಾಮಸ್ಥರು ಗುರುತಿಸಿದ್ದು, ರಾತ್ರಿ ಜಮೀನಿನಲ್ಲಿ ಇದ್ದಿಲು ತಯಾರಿಸಿ ಅಲ್ಲೇ ಕಾವಲು ಕಾಯುತ್ತ ಮಲಗಿದ್ದ ವೇಳೆ ಹತ್ಯೆ ಗೈಹಲಾಗಿದೆ. ತಡರಾತ್ರಿ ಯಾರೋ ಅಪರಿಚಿತರಿಂದ ಚಂದ್ರಣ್ಣ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದು, ಕೊಲೆಯನ್ನು ಯಾರು ಮಾಡಿದ್ದಾರೆಂಬುದು ತಿಳಿದುಬಂದಿಲ್ಲ. ಇದರ ಸಂಬಂಧ ಪರಶುರಾಮಪುರ ಪೊಲೀಸ್ ಠಾಣೆಯ ಪೋಲಿಸರು ಘಟನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ‌ನಡೆಸುವ ಮೂಲಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಫ್ಲೋ.......Body:MurderConclusion:Av
ETV Bharat Logo

Copyright © 2025 Ushodaya Enterprises Pvt. Ltd., All Rights Reserved.