ಚಿತ್ರದುರ್ಗ : ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡದಿದ್ರೆ ಸಮುದಾಯಕ್ಕೆ ನೀಡಿದ ಅನುದಾನವನ್ನು ಸರ್ಕಾರಕ್ಕೆ ವಾಪಸ್ ನೀಡಲಾಗುವುದು ಎಂದು ಘೋಷಣೆ ಮಾಡಿದ ಕೂಡಲ ಸಂಗಮ ಪಂಚಮಸಾಲಿ ಗುರು ಪೀಠಾಧ್ಯಕ್ಷ ಜಯ ಬಸವ ಮೃತ್ಯುಂಜಯ ಸ್ವಾಮೀಜಿ ಬೆಂಗಳೂರಿನ ಆಡಳಿತ ಕಚೇರಿಗೆ ಹೋಗಿ ನೀಡಲು ನಿರ್ಧರಿಸಿದ್ದಾರೆ.
ಓದಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಒನಕೆ ಪ್ರದರ್ಶನ
ಇಂದು ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮಠಕ್ಕೆ ನೀಡಿದ ಅನುದಾನ ವಾಪಸ್ ನೀಡುವುದಾಗಿ ಚಿತ್ರದುರ್ಗ ನಗರದಲ್ಲಿ ನಡೆದ ಸಮಾವೇಶದಲ್ಲಿ ಸರ್ಕಾರಕ್ಕೆ ಜಯ ಮೃತ್ಯುಂಜಯ ಶ್ರೀಗಳು ಎಚ್ಚರಿಕೆ ನೀಡಿದರು.
ಬಳಿಕ ಇಂದು ಮಧ್ಯಾಹ್ನ 12 ಗಂಟೆಗೆ ಮಾಧ್ಯಮಗೋಷ್ಠಿ ನಡೆಸಿದ ಶ್ರೀಗಳು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಡಿಸಿ ಮೂಲಕವಾಗಿ ಅನುದಾನ ಆದೇಶ ಪ್ರತಿಗಳನ್ನ ಸಿಎಂಗೆ ನೀಡಿ ಮೀಸಲಾತಿ ಪಡೆಯುತ್ತೇವೆ ಎಂದು ಘೋಷಣೆ ಮಾಡಿದ್ದರು. ಪಾದಯಾತ್ರೆ ಆರಂಭವಾಗುವ ಅಂತಿಮ ಹಂತದಲ್ಲಿ ಶ್ರೀಗಳು ಹಾಗೂ ಪಂಚಮಸಾಲಿ ಸಮುದಾಯದ ಮುಖಂಡರು ಮುಂದೂಡಿದ್ದಾರೆ.
ಇನ್ನು, ಸಮುದಾಯ ಮುಖಂಡರ ನೇತೃತ್ವದಲ್ಲಿ ಬೆಂಗಳೂರಿನ ಆಡಳಿತ ಕಚೇರಿಯಲ್ಲಿ ಕೂಡಲ ಸಂಗಮ ಮಠಕ್ಕೆ ನೀಡಿದ ಅನುದಾನ ವಾಪಸ್ ನೀಡುವುದಾಗಿ ಸ್ವಾಮೀಜಿ ಪಾದಯಾತ್ರೆಯಲ್ಲಿ ಘೋಷಣೆ ಮಾಡಿದ್ದಾರೆ.