ETV Bharat / state

ಸಂಸದರಿಗೆ ಗ್ರಾಮ ಪ್ರವೇಶ ನಿರಾಕರಣೆ: ಸಮುದಾಯದ ಪರವಾಗಿ ಕ್ಷಮೆ ಯಾಚಿಸಿದ ಹಿರಿಯೂರು ಶಾಸಕಿ - ಹಿರಿಯೂರು ಶಾಸಕಿ

ಸಂಸದ ನಾರಾಯಣಸ್ವಾಮಿಯವರಿಗೆ ತುಮಕೂರು ಜಿಲ್ಲೆಯ ಗೊಲ್ಲರಹಟ್ಟಿ ಗ್ರಾಮ ಪ್ರವೇಶ ನಿರಾಕರಣೆ ವಿಚಾರವಾಗಿ ಹಿರಿಯೂರು ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್, ಕಾಡುಗೊಲ್ಲರ ಸಮುದಾಯದ ಪರವಾಗಿ ಸಂಸದರಲ್ಲಿ ಕ್ಷಮೆ ಕೋರಿದ್ದಾರೆ.

ಹಿರಿಯೂರು ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್
author img

By

Published : Sep 17, 2019, 9:45 PM IST

ಚಿತ್ರದುರ್ಗ: ಸಂಸದ ನಾರಾಯಣಸ್ವಾಮಿಯವರಿಗೆ ಗೊಲ್ಲರಹಟ್ಟಿ ಗ್ರಾಮ ಪ್ರವೇಶಕ್ಕೆ ಅಡ್ಡಿಪಡಿಸಿ, ಅಮಾನವೀಯವಾಗಿ ನಡೆದುಕೊಂಡದ್ದನ್ನು ಸಮಾಜ ಸಹಿಸುವುದಿಲ್ಲ ಎಂದಿರುವ ಹಿರಿಯೂರು ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್​ ಅವರು ತಮ್ಮ ಸಮುದಾಯದ ಪರವಾಗಿ ಸಂಸದರಲ್ಲಿ ಕ್ಷಮೆ ಯಾಚಿಸಿದ್ದಾರೆ.

ಹಿರಿಯೂರು ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್

ಹಿರಿಯೂರಿನಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಕಾಡುಗೊಲ್ಲರ ಸಮುದಾಯದಲ್ಲಿ ಶಿಕ್ಷಣದ ಕೊರತೆ ಎದ್ದು ಕಾಣುತ್ತಿದದೆ. ಅರಿವಿನ ಕೊರತೆಯಿಂದ ಕೆಲ ಮೂಢನಂಬಿಕೆಗಳಿಗೆ ಅವರೆಲ್ಲ ಜೋತು ಬಿದ್ದಿದ್ದಾರೆ. ಈ ಸಂಪ್ರದಾಯಗಳು ಬದಲಾವಣೆ ಆಗಬೇಕಿದೆ. ನಾನು ಹೋದ ಕಡೆಗಳಲ್ಲಿ ನಮ್ಮ ಸಮುದಾಯದವರಿಗೆ ಮೂಢನಂಬಿಕೆಯಿಂದ ಹೊರ ಬನ್ನಿ ಎಂದು ಜಾಗೃತಿ ಮೂಡಿಸುತ್ತಿದ್ದೇನೆ. ಕೆಲವು ಕಡೆ ಮಾತ್ರ ಈ ಸಂಪ್ರದಾಯ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ಗೊಲ್ಲರಹಟ್ಟಿಗಳಲ್ಲಿ ಜಾಗೃತಿ ಕಾರ್ಯಕ್ರಮಗಳ ಮೂಲಕ ನಾವು ಬದಲಾವಣೆ ತರಬೇಕಿದೆ ಎಂದಿದ್ದಾರೆ.

ಹಲವಾರು ವರ್ಷಗಳಿಂದ ಸಾಕಷ್ಟು ಸೌಲಭ್ಯಗಳಿಂದ ವಂಚಿತವಾಗಿರುವ ಈ ಸಮಾಜಕ್ಕೆ ಸರ್ಕಾರಗಳು ಕೂಡ ಹೆಚ್ಚಿನ ಒತ್ತು ಕೊಡಬೇಕು. ಸರ್ಕಾರ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಗೊಲ್ಲರಹಟ್ಟಿಯ ಅಭಿವೃದ್ಧಿ ಕಡೆ ಗಮನ ಹರಿಸಿದಾಗ ಜನರ ಮನಸ್ಥಿತಿ ಸಹ ಬದಲಾವಣೆ ಆಗುತ್ತದೆ. ಸಮಾಜದ ಮುಖಂಡರು, ಯುವಕರು, ವಿದ್ಯಾವಂತರು ಎಲ್ಲರೂ ಸೇರಿ ಮುಂದಿನ ದಿನಗಳಲ್ಲಿ ಮೂಢನಂಬಿಕೆ ಹೋಗಲಾಡಿಸಲು ಪ್ರಯತ್ನಿಸಬೇಕಿದೆ ಎಂದು ಶಾಸಕಿ ಪೂರ್ಣಿಮಾ ಸಲಹೆ ನೀಡಿದ್ದಾರೆ.

Intro:ಸಂದಸರಿಗೆ ಹಟ್ಟಿ ಪ್ರವೇಶ ನಿರಾಕರಣೆ ವಿರುದ್ಧ ಗುಡುಗಿದ ಶಾಸಕಿ ಪೂರ್ಣಿಮಾ ಶ್ರೀನಿವಾಸ್

ಆ್ಯಂಕರ್ : - ಸಂಸದ ನಾರಾಯಣಸ್ವಾಮಿಯವರಿಗೆ ಗೊಲ್ಲರಹಟ್ಟಿ ಪ್ರವೇಶ ನಿರಾಕರಣೆ ಮಾಡಿ ಜನಾಗಂದವರು ನಡೆಸಿಕೊಂಡಿದನ್ನು ಸಮಾಜ ಸಹಿವುದಿಲ್ಲ ಹಾಗೂ ಸಂಸದರಲ್ಲಿ ಸಮಾಜದ ಪರವಾಗಿ ಕ್ಷಮೆ ಕೋರುತ್ತೆನೆಂದು ಎಂದು ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಕ್ಷಮೆ ಯಾಚಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಪ್ರತಿಕ್ರಿಯಿಸಿದ ಅವರು ಅ ಸಮುದಾಯದಲ್ಲಿ ಶಿಕ್ಷಣದ ಕೊರತೆ ಏದ್ದು ಕಾಣುತ್ತಿದ್ದು, ಕಾಡುಗೊಲ್ಲರಲ್ಲಿ ಅರಿವಿನ ಜ್ಞಾನ ಕಡಿಮೆ ಇರುವುದರಿಂದ ಮೂಢನಂಬಿಕೆಗಳಿಗೆ ಜೋತುಬಿದ್ದಿದ್ದಾರೆ. ಈ ಸಂಪ್ರದಾಯಗಳು ಬದಲಾವಣೆ ಆಗಬೇಕಿದೆ, ನಾನು ಹೋದ ಕಡೆಗಳಲ್ಲಿ ನಮ್ಮ ಸಮುದಾಯದವರಿಗೆ ಮೊದಲು ಹೇಳುವುದು ಮೂಢನಂಬಿಕೆಯಿಂದ ಹೊರ ಬನ್ನಿ ಎಂದು ಹೇಳುತ್ತಾ ಜಾಗೃತಿ ಮೂಡಿಸುತ್ತಿದ್ದೇನೆ. ಕೆಲವು ಕಡೆ ಮಾತ್ರ ಈ ಸಂಪ್ರದಾಯ ಮುಂದುವರಿದಿದ್ದು ಮುಂದಿನ ದಿನಗಳಲ್ಲಿ ಗೊಲ್ಲರಹಟ್ಟಿಗಳಲ್ಲಿ ಜಾಗೃತಿ ಕಾರ್ಯಕ್ರಮಗಳ ಮೂಲಕ ನಾವು ಬದಲಾವಣೆ ತರಬೇಕಿದೆ. ಇದಕ್ಕೆಲ್ಲ ಕಾರಣ ಹಲವಾರು ವರ್ಷಗಳಿಂದ ಸಾಕಷ್ಟು ಸೌಲಭ್ಯದಿಂದ ವಂಚಿತವಾಗಿರುವ ಈ ಸಮಾಜಕ್ಕೆ ಸರ್ಕಾರಗಳು ಕೂಡ ಹೆಚ್ಚಿನ ಹೊತ್ತು ಕೊಡಬೇಕು ಎಂದು ಸರ್ಕಾರದ ಕಡೆ ಬೆರಳು ಮಾಡಿ ತೋರಿಸಿದರು.ಇನ್ನೂ
ಸರ್ಕಾರ ಶೈಕ್ಷಣಿಕವಾಗಿ, ಸಮಾಜಿಕವಾಗಿ ಗೊಲ್ಲರಹಟ್ಟಿಯ ಕಡೆ ಅಭಿವೃದ್ದಿಯತ್ತ ಗಮನ ಕೊಟ್ಟಾಗ ಜನರ ಮನಸ್ಥಿತಿ ಬದಲಾವಣೆ ಆಗುತ್ತದೆ. ಸಮಾಜದ ಮುಖಂಡರು, ಯುವಕರು, ವಿದ್ಯಾವಂತರು ಎಲ್ಲರು ಸೇರಿ ಮುಂದಿನ ದಿನಗಳಲ್ಲಿ ಮೂಢನಂಬಿಕೆ ಹೊಗಲಾಡಿಸಲು ಸಾಕಷ್ಟು ಪ್ರಯತ್ನ ಮಾಡುತ್ತೇನೆ ಎಂದು ಈ ಘಟನೆ ಬಗ್ಗೆ ಸಂಸದರಿಗೆ ಸಮಾಜದ ಪರವಾಗಿ ಕ್ಷಮೆ ಕೋರಿದರು..

ಫ್ಲೋ.....

ಬೈಟ್ 01:- ಪೂರ್ಣಿಮಾ ಶ್ರೀನಿವಾಸ್, ಹಿರಿಯೂರು ಶಾಸಕಿBody:Mla kshame yachaneConclusion:Avb
ETV Bharat Logo

Copyright © 2024 Ushodaya Enterprises Pvt. Ltd., All Rights Reserved.