ETV Bharat / state

ತಿಪ್ಪಾರೆಡ್ಡಿಗೆ ಮತ್ತೆ ಕೈ ಕೊಟ್ಟ ಅದೃಷ್ಟ.. ಬೊಮ್ಮಾಯಿ ಸಂಪುಟದಲ್ಲೂ ದಕ್ಕದ ಸ್ಥಾನ - ಸಿಎಂ ಬಸವರಾಜ ಬೊಮ್ಮಾಯಿ ನೂತನ ಸಚಿವ ಸಂಪುಟ

ಚಿತ್ರದುರ್ಗದ ಶಾಸಕ ಜಿ ಹೆಚ್​ ತಿಪ್ಪಾರೆಡ್ಡಿಗೆ ಮತ್ತೆ ನಿರಾಸೆ ಆಗಿದೆ. ಒಂದೆಡೆ ಹಿರಿತನ, ಪಕ್ಷ ನಿಷ್ಠೆ, ಚಿತ್ರದುರ್ಗ ನಗರಸಭೆಯಲ್ಲಿ ಪ್ರಥಮ ಬಾರಿಗೆ ಬಿಜೆಪಿಗೆ ಅಧಿಕಾರ ತಂದುಕೊಟ್ಟ ಹೆಗ್ಗಳಿಕೆ, ಲೋಕಸಭಾ ಕ್ಷೇತ್ರದಲ್ಲಿ ಎ.ನಾರಾಯಣಸ್ವಾಮಿ ಅವರ ಗೆಲುವಿಗೆ ಪ್ರಮುಖ ಪಾತ್ರ. ಹೀಗೆ ಪಕ್ಷದ ಬಲವರ್ಧನೆಗೆ ಬಹಳಷ್ಟು ಶ್ರಮಿಸಿದವರಿಗೆ ಬೊಮ್ಮಾಯಿ ಸಂಪುಟದಲ್ಲೂ ಯಾವುದೇ ಸ್ಥಾನ ಸಿಕ್ಕಿಲ್ಲ.

MLA Thippareddy
ಶಾಸಕ ಜಿ ಹೆಚ್ ತಿಪ್ಪಾರೆಡ್ಡಿ
author img

By

Published : Aug 4, 2021, 4:05 PM IST

Updated : Aug 4, 2021, 7:11 PM IST

ಚಿತ್ರದುರ್ಗ : ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಆರು ಬಾರಿ ಆಯ್ಕೆಯಾದ ಏಕೈಕ ವ್ಯಕ್ತಿ ಎಂದರೆ ಅದು ಶಾಸಕ ಜಿ ಹೆಚ್ ತಿಪ್ಪಾರೆಡ್ಡಿ. ಅವರು ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಸಿಗುವ ವಿಶ್ವಾಸದಲ್ಲಿದ್ದರು. ಆದರೆ, ಈ ಬಾರಿಯೂ ತಿಪ್ಪಾರೆಡ್ಡಿಗೆ ಯಾಕೋ ಮಂತ್ರಿಯಾಗುವ ಸೌಭಾಗ್ಯ ಇಲ್ಲದಂತಾಗಿದೆ.

ಶಾಸಕ ಜಿ ಹೆಚ್ ತಿಪ್ಪಾರೆಡ್ಡಿ ಅವರು ಬಿಜೆಪಿ ಪಕ್ಷದಲ್ಲಿಯೇ ಹಿರಿಯ‌ ವ್ಯಕ್ತಿ. ಬಿಜೆಪಿ ಸರ್ಕಾರ ರಚನೆ ಆರಂಭದಲ್ಲಿ ಮಂತ್ರಿ ಸ್ಥಾನ ಸಿಗುತ್ತದೆ ಎಂಬ ಭರವಸೆ, ವಿಶ್ವಾಸ ಕೈಕೊಟ್ಟಿತ್ತು. ಬಳಿಕ ನಿಗಮವೊಂದರ ಅಧ್ಯಕ್ಷ ಸ್ಥಾನ ನೀಡಿದ್ದನ್ನು ನಯವಾಗಿ ತಿರಸ್ಕರಿಸಿ, ನಾನು ಹಿರಿಯನಿದ್ದೇನೆ. ಮಂತ್ರಿ ಸ್ಥಾನಕ್ಕೆ ಅರ್ಹನಿದ್ದೇನೆ ಎಂಬ ಸಂದೇಶವನ್ನು ರಾಜ್ಯ ನಾಯಕರಿಗೆ ರವಾನಿಸಿದ್ದರು.

ದೆಹಲಿ ಮಟ್ಟದಲ್ಲಿ ಲಾಬಿ : ಬಿ ಎಸ್‌ ಯಡಿಯೂರಪ್ಪ ಅವರು ಸಚಿವ ಸಂಪುಟ ಪುನಾರಚನೆ ವೇಳೆ ಅವಕಾಶ ಕಲ್ಪಿಸಿಕೊಡುವುದಾಗಿ ಖಚಿತಪಡಿಸಿದ್ದರು. ಬಿಎಸ್‌ವೈ ಸಚಿವ ಸಂಪುಟ ಪುನಾರಚನೆ ಆಗಬೇಕು ಎನ್ನುವಷ್ಟರಲ್ಲಿ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆಗಳಾಗಿ ಬಿಎಸ್‌ವೈ ಸಿಎಂ ಸ್ಥಾನದಿಂದ ಇಳಿದರು. ಆದರೂ ಪಟ್ಟು ಬಿಡದ ತಿಪ್ಪಾರೆಡ್ಡಿ, ಈ ಬಾರಿ ಮಂತ್ರಿ ಆಗಲೇಬೇಕೆಂದು ಮೊದಲ ಬಾರಿಗೆ ದೆಹಲಿ ಮಟ್ಟದಲ್ಲಿ ಲಾಬಿಗೆ ಮುಂದಾಗಿದ್ದು, ಈ ಬಾರಿ ಸಚಿವ ಸ್ಥಾನ ಪಕ್ಕಾ ಸಿಗುತ್ತದೆ ಎಂಬ ಭರವಸೆಯಲ್ಲಿದ್ದರು.

ಈಡೇರದ ಆಸೆ : ಒಂದೆಡೆ ಹಿರಿತನ, ಪಕ್ಷ ನಿಷ್ಠೆ, ಚಿತ್ರದುರ್ಗ ನಗರಸಭೆಯಲ್ಲಿ ಪ್ರಥಮ ಬಾರಿಗೆ ಬಿಜೆಪಿಗೆ ಅಧಿಕಾರ ತಂದುಕೊಟ್ಟ ಹೆಗ್ಗಳಿಕೆ, ಲೋಕಸಭಾ ಕ್ಷೇತ್ರದಲ್ಲಿ ಎ.ನಾರಾಯಣಸ್ವಾಮಿ ಅವರ ಗೆಲುವಿಗೆ ಪ್ರಮುಖ ಪಾತ್ರ. ಹೀಗೆ ಪಕ್ಷದ ಬಲವರ್ಧನೆಗೆ ಬಹಳಷ್ಟು ಶ್ರಮಿಸಿದ್ದರು.

ತನಗೆ ಅವಕಾಶ ಸಿಗಲಿದೆ ಎಂದು ವಿಶ್ವಾಸ ಹೊಂದಿದ್ದರು. ಆದರೆ, ಅದೆಲ್ಲವೂ ಉಲ್ಟಾ ಹೊಡೆದಿದೆ. ಶಾಸಕರ ಅಣ್ಣ ಜಿ.ಹೆಚ್‌. ಅಶ್ವತ್ಥರೆಡ್ಡಿ ಹಲವು ಬಾರಿ ಮಂತ್ರಿಯಾಗಿದ್ದರು. ನನಗೆ ಒಮ್ಮೆ ಮಂತ್ರಿ ಸ್ಥಾನ ಸಿಕ್ಕರೆ ಸಾಕು ಎಂದು ತಪ್ಪಾರೆಡ್ಡಿ ಮನದಾಸೆ ವ್ಯಕ್ತಪಡಿಸುತ್ತಿದ್ದರು. ಆದರೆ, ಅವರ ಆಸೆ ಬಸವರಾಜ ಬೊಮ್ಮಾಯಿ ಸಂಪುಟದಲ್ಲೂ ಈಡೇರಿಲ್ಲ.

Last Updated : Aug 4, 2021, 7:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.