ಚಿತ್ರದುರ್ಗ : ರಾಶಿ ಮಾಡಿ ಸಂಗ್ರಹಿಸಿಟ್ಟಿದ್ದ ಮೆಕ್ಕೆಜೋಳ ತೆನೆಗಳಿಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ಮೆಕ್ಕೆಜೋಳ ಸುಟ್ಟು ಕರಕಲಾದ ಸ್ಥಳಕ್ಕೆ ಚಳ್ಳಕೆರೆ ಶಾಸಕ ಟಿ ರಘುಮೂರ್ತಿ ಭೇಟಿ ನೀಡಿ ರೈತನಿಗೆ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.
ಚಿತ್ರದುರ್ಗ ತಾಲೂಕಿನ ಕೋನಬೇವು ಗ್ರಾಮದ ರೈತ ಟಿ ಎಸ್ ಮಲ್ಲಿಕಾರ್ಜುನ್ ಹಾಗೂ ಆತನ ಸಹೋದರರಿಗೆ ಸೇರಿದ ಅಂದಾಜು 10 ಟ್ರಾಕ್ಟರ್ನಷ್ಟು ಮೆಕ್ಕೆಜೋಳ ತೆನೆಗಳಿಗೆ ಕಿಡಿಗೇಡಿಗಳು ಹಳೇ ವೈಷಮ್ಯದ ಹಿನ್ನೆಲೆ ಬೆಂಕಿ ಹಾಕಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದರು.
ಸುಮಾರು 2 ಲಕ್ಷಕ್ಕೂ ಅಧಿಕ ಮೌಲ್ಯದ ಮೆಕ್ಕೆಜೋಳ ನಾಶವಾಗಿದೆ ಎಂದು ಹಾನಿಗೊಳಗಾದ ರೈತನ ಕುಟುಂಬಸ್ಥರು ಮಾಹಿತಿ ನೀಡಿದ್ದರು.
![MLA t raghumoorthy visited koonabevu village of chitradurga](https://etvbharatimages.akamaized.net/etvbharat/prod-images/10650862_erjhj4j.jpg)
ಈ ಕುರಿತು ಈಟಿವಿ ಭಾರತ ಸುದ್ದಿ ಬಿತ್ತರಿಸಿತ್ತು. ಈ ಹಿನ್ನೆಲೆ ಘಟನಾ ಸ್ಥಳಕ್ಕೆ ಶಾಸಕ ರಘುಮೂರ್ತಿ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ, ಕೋನಬೇವು ಗ್ರಾಮದ ರೈತರಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: ಮೆಕ್ಕೆಜೋಳದ ರಾಶಿಗೆ ಬೆಂಕಿಯಿಟ್ಟ ಕಿಡಿಗೇಡಿಗಳು : ಲಕ್ಷಾಂತರ ರೂ. ನಷ್ಟ
ಇನ್ನು, ಬೆಳೆ ಹಾನಿಗೆ ಸಂಬಂಧಿಸಿದಂತೆ ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕ್ಕೆ ಮುಂದಾಗುವುದಾಗಿ ಶಾಸಕ ಟಿ. ರಘುಮೂರ್ತಿ ರೈತನಿಗೆ ಭರವಸೆ ನೀಡಿದ್ದಾರೆ.