ಚಿತ್ರದುರ್ಗ: ಲಾಕ್ಡೌನ್ನಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದರಿಂದ ಸಮಸ್ಯೆಗಳನ್ನು ಅರಿತು ಪರಿಹಾರ ಕಂಡುಕೊಳ್ಳಲು ಚಳ್ಳಕೆರೆ ಕೈ ಶಾಸಕ ರಘುಮೂರ್ತಿ ಮುಂದಾಗಿದ್ದಾರೆ.
ತಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ತುರುವನೂರು ಹೋಬಳಿಯ ಬೆಳಗಟ್ಟ, ತುರುವನೂರು, ಕೂನಬೇವು ಗ್ರಾಮಗಳ ರೈತರ ಜಮೀನುಗಳಿಗೆ ಭೇಟಿ ನೀಡಿದರು. ಬೆಳೆದ ಬೆಳೆ ಮಾರುಕಟ್ಟೆಗೆ ಸಾಗಿಸಲಾಗದೆ ಹೈರಾಣಾದ ರೈತರಿಗೆ ಧೈರ್ಯ ತುಂಬಿ, ಸರ್ಕಾರದೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು.
ಈ ವೇಳೆ ತಾಲೂಕು ಪಂಚಾಯತ್ ಅಧ್ಯಕ್ಷ ಲಿಂಗರಾಜು, ತಾಲೂಕು ಕೃಷಿ ಅಧಿಕಾರಿ ಭಾರತಿ, ತೋಟಗಾರಿಕೆ ಇಲಾಖೆಯ ಸಹಾಯಕ ಅಧಿಕಾರಿ ಸುಧಾಕರ್ ಶಾಸಕರಿಗೆ ಸಾಥ್ ನೀಡಿದರು.