ETV Bharat / state

ಸಂಸದೆಗೆ ಆಗಿರಲಿ, ಸಾಮಾನ್ಯ ಮಹಿಳೆಗೇ ಆಗಿರಲಿ ಪದ ಬಳಕೆ ಸರಿ ಇರಬೇಕು : ಶಾಸಕಿ ಪೂರ್ಣಿಮಾ ಶ್ರೀನಿವಾಸ್

ಮಾಜಿ ಸಿಎಂ ಕುಮಾರಸ್ವಾಮಿ ಸಿಂಪ್ಲಿಸಿಟಿಗೆ ರಾಜ್ಯದ ಹೆಚ್ಚು ಜನ ಅವರನ್ನು ಇಷ್ಟಪಡ್ತಾರೆ. ಕೆಲವೊಮ್ಮೆ ಸಿಟ್ಟಾಗಿ ಮಾತಾಡ್ತಾರೆ. ಆದರೆ, ಮಹಿಳೆಯರ ಬಗ್ಗೆ ಮಾತಾಡುವಾಗ ಒಳ್ಳೆಯ ಪದ ಬಳಸಬೇಕು..

mla poornima srinivas reacts to hdk controversial statement
ಪೂರ್ಣಿಮಾ ಶ್ರೀನಿವಾಸ್
author img

By

Published : Jul 7, 2021, 7:07 PM IST

ಚಿತ್ರದುರ್ಗ : ಸಂಸದೆ ಸುಮಲತಾ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ಕ್ಷೇತ್ರದ ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂಸದೆ ಆಗಿರಲಿ, ಸಾಮಾನ್ಯ ಮಹಿಳೆಯೇ ಆಗಿರಲಿ ಅವರ ಕೆಲಸಗಳನ್ನು ಟೀಕಿಸಲಿ. ಅವರ ಹೇಳಿಕೆಗಳು ತಪ್ಪಾಗಿದ್ದರೆ ಆ ಬಗ್ಗೆ ಮಾತಾಡಲಿ, ಒಬ್ಬ ಮಹಿಳೆ ಬಗ್ಗೆ ಮಾತಾಡುವಾಗ ಪದ ಬಳಕೆ ಸರಿ ಇರಬೇಕು.

ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಪ್ರತಿಕ್ರಿಯೆ

ಅವರ ಮೇಲೆ ಸಿಟ್ಟು ಇದೆ ಎಂದು ಹೇಗೆಂದರೆ ಹಾಗೇ ಪದ ಬಳಕೆ ಮಾಡುವುದು ಸರಿಯಲ್ಲ. ಸಿಟ್ಟಿನಲ್ಲಿದ್ದರೂ ಸಹ ಯಾರಿಗೂ ನೋವಾಗದಂತೆ, ಅಪಾರ್ಥ ಆಗದಂತೆ ಮಾತಾಡಬೇಕು.

ಮಾಜಿ ಸಿಎಂ ಕುಮಾರಸ್ವಾಮಿ ಸಿಂಪ್ಲಿಸಿಟಿಗೆ ರಾಜ್ಯದ ಹೆಚ್ಚು ಜನ ಅವರನ್ನು ಇಷ್ಟಪಡ್ತಾರೆ. ಕೆಲವೊಮ್ಮೆ ಸಿಟ್ಟಾಗಿ ಮಾತಾಡ್ತಾರೆ. ಆದರೆ, ಮಹಿಳೆಯರ ಬಗ್ಗೆ ಮಾತಾಡುವಾಗ ಒಳ್ಳೆಯ ಪದ ಬಳಸಬೇಕು ಎಂದು ಪೂರ್ಣಿಮಾ ಶ್ರೀನಿವಾಸ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.