ಚಿತ್ರದುರ್ಗ : ನೀನು ಯಾವ ಸೀಮೆ ಎಕ್ಸಿಕ್ಯೂಟಿವಿ ಎಂಜಿನಿಯರ್ , ಇರೋಬರೊ ದುಡ್ಡು ಯುಜಿಡಿಯವರಿಗೆ ನೀಡಿದ್ರೇ ಯಾರು ನಿಮಗೆ ಬೆಲೆ ನೀಡ್ತಾರೆ, ಬಿಲ್ಗಳಿಗೆ ಸಹಿ ಮಾಡ್ಬೇಡ ಆಗಾ ಅ ಯುಜಿಡಿಯವರು ನಿಮ್ಮ ಮನೆ ಬಾಗಿಲಿಗೆ ಬಂದು ನಿಂತುಕೊಳ್ತಾರೇ, ಎಕ್ಸಿಕ್ಯೂಟ್ ಎಂಜಿನಿಯರ್ ಅಂದ್ರೇ ಒಂದು ಗತ್ತು ಇರ್ಬೇಕು ಎಂದು ಚಿತ್ರದುರ್ಗ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಕೆಂಡಾಮಂಡಲಾರದರು.
ಕುಡಿಯುವ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕೆಲಸ ಮಾಡದೆ ಇರುವ ಅಧಿಕಾರಿಗಳಿಗೆ ಶಾಸಕರು ನೀರಿಳಿಸಿದರು. ಅಮೃತ್ ಯೋಜನೆಯಡಿ ಚಿತ್ರದುರ್ಗ ನಗರದಲ್ಲಿ ಕೈಗೊಂಡಿರುವ ಕುಡಿಯುವ ನೀರು ಸರಬರಾಜು ಕಾಮಗಾರಿ ಪ್ರಗತಿ ಸಭೆಯಲ್ಲಿ ಶಾಸಕರು ಅಧಿಕಾರಿಗಳನ್ನು ತರಾಟೆಗೆ ತೆಗದುಕೊಂಡರು.
ಎಕ್ಸಿಕ್ಯೂಟಿವ್ ಇಂಜಿನಿಯರ್ ಹನುಮಂತಪ್ಪ, ಪ್ರಾಜೆಕ್ಟ್ ಮ್ಯಾನೇಜರ್ ಮಹೇಶ್ ವಿರುದ್ಧ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದು, ನೀರಿನ ಪೈಪ್ ಹಾಕಲು ರಸ್ತೆಗಳನ್ನು ಅಗೆದಿರುವುದು ಹಾಗೂ ಯುಜಿಡಿ ಕಾಮಗಾರಿ ಮುಗಿಸದ ಕಾರಣ ಅಧಿಕಾರಗಳ ವಿರುದ್ಧ ಕೆಂಡಾಮಂಡಲರಾದರು. ಎಕ್ಸಿಕ್ಯೂಟಿವ್ ಎಂಜಿನಿಯರ್ ಹನುಮಂತಪ್ಪನವರನ್ನು ತರಾಟೆಗೆ ತೆಗೆದುಕೊಂಡ ಶಾಸಕ ತಿಪ್ಪಾರೆಡ್ಡಿ ಕಾಮಗಾರಿಗಳ ಕುರಿತು ಚೀಫ್ ಎಂಜಿನಿಯರ್ ಕೇಶವ್ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು.