ಚಿತ್ರದುರ್ಗ : ಲೋಡ್ಗಟ್ಟಲೇ ಮಣ್ಣು ಸಾಗಿಸಿ ರಸ್ತೆ ಹದಗೆಡಿಸಿರುವ ಕುರಿತು ಈಟಿವಿ ಭಾರತ ವರದಿ ಬಿತ್ತರಿಸುತ್ತಿದಂತೆ ಶಾಸಕ ಜಿ ಹೆಚ್ ತಿಪ್ಪಾರೆಡ್ಡಿ ಇಂಗಳದಾಳ್ ಗ್ರಾಮಕ್ಕೆ ಭೇಟಿ ನೀಡಿ ಮಣ್ಣು ಸರಬರಾಜು ಮಾಡಿದ ಕಂಪನಿಯ ಎಂಡಿಯನ್ನು ತರಾಟೆಗೆ ತಗೆದುಕೊಂಡ ಘಟನೆ ನಡೆದಿದೆ.
ಕಳೆದ ಎರಡು ದಿನಗಳ ಹಿಂದಷ್ಟೇ ಇಂಗಳದಾಳ್ ಮತ್ತು ಲಂಬಾಣಿಹಟ್ಟಿ ಗ್ರಾಮದ ರಸ್ತೆಯಲ್ಲಿ ಲಾರಿಗಳ ಮೂಲಕ ಹೆದ್ದಾರಿ ನಿರ್ಮಾಣಕ್ಕೆ ಮಣ್ಣು ಸಾಗಿದ ಪರಿಣಾಮ ರಸ್ತೆ ಹಾಳಾಗಿದೆ ಎಂದು ಗ್ರಾಮಸ್ಥರು ಆರೋಪ ಮಾಡಿದರು. ಈ ಕುರಿತು ಈಟಿವಿ ಭಾರತ ವರದಿ ಮಾಡಿತ್ತು.
ಇದರಿಂದ ಎಚ್ಚೆತ್ತ ಶಾಸಕ ತಿಪ್ಪಾರೆಡ್ಡಿ, ಇಂಗಳದಾಳ ಗ್ರಾಮಕ್ಕೆ ಮಣ್ಣು ಸರಬರಾಜು ಮಾಡಿದ ಕಂಪನಿಯ ಎಂಡಿ ಚಂದ್ರಶೇಖರ್ ಅವರನ್ನು ಕರೆಯಿಸಿ, ರಸ್ತೆ ಸರಿ ಪಡಿಸುವಂತೆ ಕೆಲ ಕಾಲ ತರಾಟೆಗೆ ತೆಗೆದುಕೊಂಡರು.
ಎಂಡಿ ಜೊತೆಗೆ ಬಂದಿದ್ದ ಅಂಗ ರಕ್ಷಕರನ್ನು ನೋಡಿದ ಶಾಸಕರು, ರೌಡಿಗಳನ್ನು ಕರೆದುಕೊಂಡು ಬರುತ್ತಿದ್ದೀಯಾ ಎಂದು ಕೆಂಡಕಾರಿದರು. ಅಷ್ಟೇ ಅಲ್ಲ, ಅಂಗರಕ್ಷಕನನ್ನು ಬಂಧಿಸುವಂತೆ ಪೊಲೀಸರಿಗೆ ಸೂಚಿಸಿದರು.
ಬಳಿಕ ಇಂಗಳದಾಳ್ ಹಾಗೂ ಲಂಬಾಣಿಹಟ್ಟಿ ಗ್ರಾಮಸ್ಥರು ಮಣ್ಣು ಸಾಗಾಣಿಕೆಯಿಂದ ಆಗುತ್ತಿರುವ ತೊಂದರೆ ಕುರಿತಾಗಿ ಶಾಸಕರಿಗೆ ಮನವರಿಕೆ ಮಾಡಿಕೊಟ್ಟು, ಹೊಸ ರಸ್ತೆ ನಿರ್ಮಿಸಲು ಆಗ್ರಹಿಸಿದರು. ಈ ವೇಳೆ ಶಾಸಕರು ಮತ್ತು ಚಂದ್ರಶೇಖರ್ ಹೊಸ ರಸ್ತೆ ನಿರ್ಮಿಸುವ ಭರವಸೆ ನೀಡಿದರು.
ಇದನ್ನೂ ಓದಿ: ಲೋಡ್ಗಟ್ಟಲೇ ಮಣ್ಣು ಸಾಗಿಸಿ ರಸ್ತೆ ಹದಗೆಡಿಸಿದ ಆರೋಪ : ಕಂಪನಿ ವಿರುದ್ಧ ಗ್ರಾಮಸ್ಥರ ಆಕ್ರೋಶ