ಚಿತ್ರದುರ್ಗ: ಮುಖ್ಯಮಂತ್ರಿಗಳ ಕೊರೊನಾ ಪರಿಹಾರ ನಿಧಿಗೆ ಚಿತ್ರದುರ್ಗದ ಹೊಳಲ್ಕೆರೆ ವಿಧಾಸಭಾ ಕ್ಷೇತ್ರದ ಶಾಸಕ ಎಂ.ಚಂದ್ರಪ್ಪ 50 ಲಕ್ಷ ರೂ.ಗಳನ್ನು ಚೆಕ್ ಮೂಲಕ ದೇಣಿಗೆ ನೀಡಿದ್ದಾರೆ.
ಬೆಂಗಳೂರಿಗೆ ತೆರಳಿದ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಶ್ರೀ ರಾಮುಲು ಸಮ್ಮುಖದಲ್ಲಿ ಐವತ್ತು ಲಕ್ಷ ರೂಪಾಯಿಯ ಚೆಕ್ ಹಸ್ತಾಂತರಿಸಿದರು. ಈ ಬಗ್ಗೆ ಮಾತನಾಡಿದ ಅವರು, ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದೆ. ಶಾಸಕರಾದ ಮೇಲೆ ನಮ್ಮ ಕೈಲಾದಷ್ಟು ಸರ್ಕಾರಕ್ಕೆ ಧನಸಹಾಯ ಮಾಡಬೇಕು ಎಂದರು.
ಇನ್ನು ಕಳೆದ ವರ್ಷ ರಾಜ್ಯದಲ್ಲಿ ಎದುರಾಗಿದ್ದ ನೆರೆ ಹಾವಳಿಯಿಂದ ಕೆಲ ಜಿಲ್ಲೆಗಳು ನಲುಗಿ ಹೋಗಿದ್ದವು. ಆಗ ಕೂಡ ಶಾಸಕ ಎಂ.ಚಂದ್ರಪ್ಪ ವೈಯಕ್ತಿಕವಾಗಿ ಒಂದು ಕೋಟಿ ನಲವತ್ತೆರಡು ಲಕ್ಷ ರೂ. ಹಣವನ್ನು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಗೆ ನೀಡಿದ್ದರು.