ಚಿತ್ರದುರ್ಗ: ಮಹಾರಾಷ್ಟ್ರದಲ್ಲಿ ಸಿಎಂ ಉದ್ಧವ್ ಠಾಕ್ರೆ ಪ್ರಭಾವ ಕುಗ್ಗಿದೆ. ಹೀಗಾಗಿ, ಅವರು ಇಂಥ ಉದ್ದಟತನದ ಹೇಳಿಕೆ ನೀಡುತ್ತಿದ್ದಾರೆ ಎಂದು ವಸತಿ ಸಚಿವ ವಿ. ಸೋಮಣ್ಣ ಕಿಡಿ ಕಾರಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉದ್ಧಟತನದ ಪರಮಾವಧಿಯಿಂದ ಠಾಕ್ರೆ ಈ ಹೇಳಿಕೆ ನೀಡುತ್ತಿದ್ದಾರೆ. ಈಗಾಗಲೇ ಸಿ ಎಂ ಬಿ.ಎಸ್. ಯಡಿಯೂರಪ್ಪ, ಡಿಸಿಎಂ ಲಕ್ಷ್ಮಣ ಸವದಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ರಾಜ್ಯದ ಅಭಿವೃದ್ಧಿಗೆ ಯಾರ ಮಾತನ್ನೂ ಕೇಳುವ ಅಗತ್ಯವಿಲ್ಲ. ಮಹಾಜನ ಆಯೋಗದ ವರದಿಯೇ ಅಂತಿಮವಾಗಿದೆ. ಒಬ್ಬ ಮುಖ್ಯಮಂತ್ರಿಯಾಗಿ ಈ ರೀತಿ ಮಾತನಾಡುವುದು ಅವರ ದಡ್ಡತನ ಎಂದು ಕಿಡಿಕಾರಿದರು.
ಓದಿ: ಜನಪ್ರಿಯತೆ ಪಡೆಯಲು ಗಡಿ ಕುರಿತು ಹೇಳಿಕೆ ನೀಡುತ್ತಿದ್ದಾರೆ: ಠಾಕ್ರೆಗೆ ಸಚಿವ ಈಶ್ವರಪ್ಪ ಟಾಂಗ್
ರಾಜ್ಯದಲ್ಲಿ ಸಿಎಂ ಬಿ.ಎಸ್.ವೈ ಎರಡೂವರೆ ವರ್ಷಗಳ ಕಾಲ ಅವಧಿ ಪೂರ್ಣಗೊಳಿಸುತ್ತಾರೆ. ವೈಯಕ್ತಿಕವಾಗಿ ಯಾರೂ ಮಾತಾಡದಂತೆ ಹೈಕಮಾಂಡ್ ಸೂಚನೆ ನೀಡಿದೆ. ವಿಜಯಪುರ ನಗರ ಶಾಸಕ ಯತ್ನಾಳ್ ಮಾತನಾಡುತ್ತಿರುವ ಕುರಿತಾಗಿ ಹೈಕಮಾಂಡ್ ತೀರ್ಮಾನಿಸಲಿದೆ ಎಂದು ತಿಳಿಸಿದರು.