ಚಿತ್ರದುರ್ಗ: ಸಚಿವ ಈಶ್ವರಪ್ಪನವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಬೇಕಿದೆ ಎಂದು ಭಗೀರಥ ಪೀಠದ ಜಗದ್ಗುರು ಶ್ರೀಪುರುಷೋತ್ತಮ ಸ್ವಾಮೀಜಿ ಎಂದು ಹೇಳಿದರು.
ಹೊಸದುರ್ಗ ತಾಲೂಕಿನ ಮಧುರೆಯಲ್ಲಿ ನಡೆದ 22ನೇ ಪೀಠಾರೋಹಣ ಸ್ವೀಕರಿಸಿ ಬಳಿಕ ಮಾತಾಡಿದ ಸ್ವಾಮೀಜಿಗಳು, ಸಚಿವ ಈಶ್ವರಪ್ಪನವರು ಹಿಂದುಳಿದ ಸಮುದಾಯಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಅವರನ್ನು ಮುಂದಿನ ಸಿಎಂ ಮಾಡಲು ಶ್ರಮಿಸಬೇಕಿದೆ. ಹಿಂದುಳಿದ, ದಲಿತ, ಅಲ್ಪಸಂಖ್ಯಾತ ಸಮುದಾಯಗಳ ಏಳಿಗೆ ಬಯಸುವ ಈಶ್ವರಪ್ಪನವರು ಸಿಎಂ ಆಗಬೇಕಿದೆ ಎಂದು ಹೇಳಿದರು.
ಬಳಿಕ ಭೋವಿ ಪೀಠದ ಇಮ್ಮಡಿ ಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಸರ್ಕಾರ ಎಲ್ಲಾ ಸಮುದಾಯ ಅಭಿವೃದ್ಧಿ ಕುರಿತು ವಿಶೇಷ ಚರ್ಚೆ ಮಾಡಿ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ಶ್ರಮಿಸಬೇಕಿದೆ. ಇಲ್ಲವಾದರೆ ಬರುವ ಚುನಾವಣೆ ಸಂದರ್ಭದಲ್ಲಿ ಮೀಸಲಾತಿ ಅಸ್ತ್ರ ಪ್ರಯೋಗಿಸಲು ಮುಂದಾಗುತ್ತಾರೆ ಎಂದರು.
ನಂತರ ಡಾ.ಶಾಂತವೀರ ಸ್ವಾಮೀಜಿ ಮಾತನಾಡಿ, ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಹಲವು ದಲಿತ ಅಲ್ಪಸಂಖ್ಯಾತ ಸಮುದಾಯಗಳಿಗೆ ಪ್ರಾತಿನಿಧ್ಯ ಸಿಗುತ್ತಿಲ್ಲ. ಈಡಿಗ, ಹೆಳವ ಸಮುದಾಯಗಳು ಸೇರಿದಂತೆ 150 ಕ್ಕೂ ಅಧಿಕ ಸಮುದಾಯಗಳಿಗೆ ಇಂದು ಸರಿಯಾದ ಸ್ಥಾನಮಾನ ಸಿಕ್ಕಿಲ್ಲ. ಅವರೆಲ್ಲ ಅಸಂಘಟಿತರಾಗಿದ್ದಾರೆ. ಹೀಗಾಗಿ ಜಿಲ್ಲಾ ಪಂಚಾಯತ್ ಚುನಾವಣೆಗೆ ಸ್ಪರ್ಧೆ ಮಾಡಲಾಗುತ್ತಿಲ್ಲ ಎಂದರು.
ಓದಿ: ಎಫ್ಡಿಎ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಮತ್ತೋರ್ವ ಆರೋಪಿ ಬಂಧನ
ಇಂದು ಎಲ್ಲಾ ಸಮುದಾಯಗಳು ಒಟ್ಟಾಗಿ ಸ್ಥಾನಮಾನಕ್ಕಾಗಿ ಹೋರಾಟ ಮಾಡಬೇಕಿದೆ. ಈ ನಿಟ್ಟಿನಲ್ಲಿ ಕಾಗಿನೆಲೆ ಗುರು ಪೀಠ ಮೀಸಲಾತಿ ಪಾದಯಾತ್ರೆಯ ಮೂಲಕ ಮಾರ್ಗ ತೋರಿದೆ. ಉಪ್ಪಾರ ಸಮುದಾಯಕ್ಕೂ ಮೀಸಲಾತಿಗೆ ಪಾದಯಾತ್ರೆ ನಡೆಸಲು ಪುರುಷೋತ್ತಮ ಶ್ರೀಗಳು ತಯಾರಿ ನಡೆಸುತ್ತಿದ್ದಾರೆ. ಎಲ್ಲರೂ ಪಾದಯಾತ್ರೆಗೆ ಬಲ ತುಂಬುವಂತೆ ವೇದಿಕೆಯಲ್ಲಿ ಮನವಿ ಮಾಡಿದರು.
ದಿ.ಎಸ್. ನಿಜಲಿಂಗಪ್ಪ ಸಿಎಂ ಆಗಿದ್ದಾಗ ಉಪ್ಪಾರ ಸಮುದಾಯಕ್ಕೆ 500 ಎಕರೆ ಜಾಗ ನೀಡಿದ್ದರು. ಅದು ಮಠದ ಹೆಸರಿನಲ್ಲಿ ಇಲ್ಲ. ಸಚಿವ ಈಶ್ವರಪ್ಪ ಸರ್ಕಾರಕ್ಕೆ ಒತ್ತಡ ತಂದು ಮಠಕ್ಕೆ ಅನುಕೂಲ ಮಾಡಬೇಕು ಎಂದರು.