ಚಿತ್ರದುರ್ಗ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಕೂಡಲಸಂಗಮದ ಜಯ ಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಕೈಗೊಂಡಿರುವ ಪಾದಯಾತ್ರೆ ಹಿನ್ನೆಲೆ ಶ್ರೀಗಳ ಭೇಟಿಗೆ ಸಚಿವ ಸಿ ಸಿ ಪಾಟೀಲ, ಮುರುಗೇಶ ನಿರಾಣಿ ನೇತೃತ್ವದ ನಿಯೋಗ ಪಾದಯಾತ್ರೆ ಸ್ಥಳಕ್ಕೆ ಬಂದಿದೆ.
ಶ್ರೀಗಳ ಭೇಟಿ ಮಾಡಿ ಪಾದಯಾತ್ರೆ ಕೈಬಿಡುವಂತೆ ಮನವಿ ಮೂಲಕ ಸಂಧಾನ ನಡೆಸಲಿದ್ದಾರೆ. ಜಿಲ್ಲೆಯ ಹಿರಿಯೂರು ತಾಲೂಕಿನ ಐಮಂಗಲ ಬಳಿಯಿರುವ ಶ್ರೀಗಳ ಪಾದಯಾತ್ರೆ ಸ್ಥಳಕ್ಕೆ ಈಗಾಗಲೇ ಸಚಿವ ಸಿ.ಸಿ. ಪಾಟೀಲ್, ನಿರಾಣಿ ನೇತೃತ್ವದ ನಿಯೋಗ ಜಯ ಮೃತ್ಯುಂಜಯ ಶ್ರೀ ಹಾಗೂ ವಚನಾನಂದ ಶ್ರೀಗಳ ಜತೆಗೆ ಸರ್ಕಾರದ ಪರವಾಗಿ ಸಂಧಾನಕ್ಕೆ ಆಗಮಿಸಿದ್ದಾರೆ.
ಈ ವೇಳೆ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರ ಒಬಿಸಿ ಮೀಸಲಾತಿ ಬೇಡಿಕೆ ಇಟ್ಟಿದ್ದಾರೆ. ನಿನ್ನೆ ಕೂಡಲ ಸಂಗಮದ ಪಂಚಮಸಾಲಿ ಪೀಠಾಧ್ಯಕ್ಷ ಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಮೀಸಲಾತಿ ನೀಡದಿದ್ದರೆ ಸರ್ಕಾರ ಮಠಕ್ಕೆ ನೀಡಿದ ಅನುದಾನ ವಾಪಸ್ ನೀಡುವುದಾಗಿ ಹೇಳಿದ್ದರು.
ಬಳಿಕ ಪಂಚಮಸಾಲಿ ಸಮುದಾಯದ ಮುಖಂಡೆ ವೀಣಾ ಕಾಶಪ್ಪನವರ ನೇತೃತ್ವದ ಮಹಿಳಾ ಸಂಘಟನೆ ಸರ್ಕಾರದ ವಿರುದ್ಧ ಒನಕೆ ಪ್ರದರ್ಶನ ಮಾಡಿ ಮೀಸಲಾತಿ ಬೇಡಿಕೆ ಇಟ್ಟಿದರು. ಇಂದು ಬಿಜೆಪಿ ಲಿಂಗಾಯತ ಸಚಿವರು ಮತ್ತು ಶಾಸಕರ ನೇತೃತ್ವ ನಿಯೋಗ ಪಾದಯಾತ್ರೆ ಕೈಬಿಡುವಂತೆ ಶ್ರೀಗಳ ಮನವೊಲಿಸಲು ಪಾದಯಾತ್ರೆ ಸ್ಥಳಕ್ಕೆ ಬಂದಿದ್ದಾರೆ.
ಇದನ್ನೂ ಓದಿ...ಇಂದು ಪಂಚಮಸಾಲಿ ಶ್ರೀಗಳನ್ನು ಭೇಟಿಯಾಗಲಿರುವ ಸಚಿವ ಸಿಸಿ ಪಾಟೀಲ