ಚಿತ್ರದುರ್ಗ: ಹಿರಿಯೂರು ತಾಲೂಕಿನ ಗುಯಿಲಾಳು ಟೋಲ್ ಸಮೀಪ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವ ಸಿ.ಸಿ.ಪಾಟೀಲ್ ಅವರ ಬೆಂಗಾವಲು ವಾಹನಕ್ಕೆ ಲಾರಿ ಡಿಕ್ಕಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಓದಿ: ಮಣಿಪಾಲ್ ಆಸ್ಪತ್ರೆಯಲ್ಲಿ ರೆಡಿಯಾಯ್ತು ಸ್ಪುಟ್ನಿಕ್ ವಿ ಪೈಲಟ್ ವ್ಯಾಕ್ಸಿನ್ : ಜೂನ್ ಅಂತ್ಯದಲ್ಲಿ ಲಭ್ಯ
ಸಚಿವರು ಬೆಳಗಾವಿಯಿಂದ ಬೆಂಗಳೂರಿಗೆ ಹೋಗುತ್ತಿರುವಾಗ, ಸಚಿವರ ಬೆಂಗಾವಲು ವಾಹನಕ್ಕೆ ಲಾರಿ ಚಾಲಕನ ಅಜಾಗರೂಕತೆಯಿಂದ ಡಿಕ್ಕಿಯಾಗಿದೆ.
ದಾರಿಯಲ್ಲಿ ಲಾರಿ ಅಡ್ಡ ಬಂದಿದ್ದು, ಈ ವೇಳೆ ಬೆಂಗಾವಲು ವಾಹನದ ಚಾಲಕನ ಸಮಯ ಪ್ರಜ್ಞೆಯಿಂದ ವಾಹನ ನಿಯಂತ್ರಿಸಲು ಸಾಧ್ಯವಾಗಿ ವಾಹನದ ಬಾನೆಟ್ ಮಾತ್ರ ಜಖಂ ಆಗಿದೆ.
ಸಚಿವರ ಬೆಂಗಾವಲು ವಾಹನ ಅಪಘಾತವಾದ ಹಿನ್ನೆಲೆ, ಇನ್ನೊಂದು ಬೆಂಗಾವಲು ವಾಹನದ ವ್ಯವಸ್ಥೆ ಮಾಡಿ ಸಚಿವರನ್ನು ಕಳುಹಿಸಿಕೊಡಲಾಯಿತು. ಈ ಕುರಿತು ಹಿರಿಯೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾನೂನು ಕ್ರಮ ಕೈಗೊಂಡಿದ್ದಾರೆ.