ಚಿತ್ರದುರ್ಗ: ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಶವ ಮೀರಸಾಬಿಹಳ್ಳಿ ರಾಣಿಕೆರೆ ಏರಿಯಲ್ಲಿ ಪತ್ತೆಯಾಗಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಮೀರಸಾಬಿಹಳ್ಳಿಯ ರಾಣಿಕೆರೆ ಏರಿ ಪಕ್ಕದ ಜಾಲಿಮುಳ್ಳಿನ ಪೊದೆಯಲ್ಲಿ ಶವ ಪತ್ತೆಯಾಗಿದ್ದು, ಅದೇ ಗ್ರಾಮದ ನಿವಾಸಿ ರಾಜಣ್ಣ(55) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಪಿಡ್ಸ್ ರೋಗದಿಂದ ಬಳಲುತ್ತಿದ್ದ ರಾಜಣ್ಣಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಇದರ ಸಂಬಂಧ ಪರಶುರಾಮಪುರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.