ETV Bharat / state

ಗೋಡೆ ಮೇಲೆ ''ನನ್ನ ಸಾವಿಗೆ ಪೊಲೀಸರೇ ಕಾರಣ'' ಎಂದು ಬರೆದು ವ್ಯಕ್ತಿ ನೇಣಿಗೆ ಶರಣು! - ವೆಂಕಟೇಶ್ ಆತ್ಮಹತ್ಯೆ ಪ್ರಕರಣ

ಬೊಮ್ಮನಹಳ್ಳಿ ಗ್ರಾಮದ ನಿವಾಸಿ ವೆಂಕಟೇಶ್ ಗೋಡೆ ಮೇಲೆ ನನ್ನ ಸಾವಿಗೆ ಪೊಲೀಸರೇ ಕಾರಣ ಎಂದು ಬರೆದು ನೇಣಿಗೆ(Chitradurga suicide case) ಶರಣಾಗಿದ್ದಾನೆ.

chitradurga suicide case
ಚಿತ್ರದುರ್ಗ ಆತ್ಮಹತ್ಯೆ ಪ್ರಕರಣ
author img

By

Published : Nov 16, 2021, 4:45 PM IST

ಚಿತ್ರದುರ್ಗ: ವ್ಯಕ್ತಿಯೋರ್ವ ಗೋಡೆ ಮೇಲೆ ''ನನ್ನ ಸಾವಿಗೆ ಪೊಲೀಸರೇ ಕಾರಣ'' ಎಂದು ಬರೆದು ಲುಂಗಿಯಿಂದ ನೇಣು ಬಿಗಿದುಕೊಂಡು ನೇಣು ಹಾಕಿಕೊಂಡಿರುವ ಘಟನೆ (Chitradurga suicide case) ಜಿಲ್ಲೆಯ ಹಿರಿಯೂರು ನಗರದ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣ ಮುಂಭಾಗದ ಕಟ್ಟಡದಲ್ಲಿ ನಡೆದಿದೆ.

chitradurga suicide case
ಚಿತ್ರದುರ್ಗ ಆತ್ಮಹತ್ಯೆ ಪ್ರಕರಣ

ಮೃತ ವ್ಯಕ್ತಿಯನ್ನು ಚಿತ್ರದುರ್ಗ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ನಿವಾಸಿ ವೆಂಕಟೇಶ್ (30) ಎಂದು ಗುರುತಿಸಲಾಗಿದೆ. ಮೃತ ವೆಂಕಟೇಶ್ ಗ್ಯಾರೇಜ್​ನಲ್ಲಿ ಕೆಲಸ ಮಾಡಿಕೊಂಡಿದ್ದನು. ಆತ ಕುಡಿತದ ದುಶ್ಚಟಕ್ಕೆ ಒಳಗಾಗಿ ರಾತ್ರಿ ವೇಳೆ ಬಸ್ ನಿಲ್ದಾಣ ಸೇರಿದಂತೆ ಎಲ್ಲೆಂದರಲ್ಲಿ ತಂಗುತ್ತಿದ್ದ. ಕಳೆದ ಎರಡು ತಿಂಗಳಿನಿಂದ ಮನೆಗೆ ಬಂದಿರಲಿಲ್ಲ. ಆತನಿಗೆ ಮದುವೆ ಮಾಡಲು ಹುಡುಗಿ ನೋಡುತ್ತಿದ್ದೆವು ಎಂದು ಮೃತನ ಸಂಬಂಧಿಕರು ತಿಳಿಸಿದ್ದಾರೆ.

ಇದನ್ನೂ ಓದಿ: 401 ನಕ್ಷತ್ರ ಆಮೆ ಅಕ್ರಮ ಸಾಗಾಟ : ತಮಿಳುನಾಡು ಮೂಲದ ಆರೋಪಿ ಅರೆಸ್ಟ್

ವೆಂಕಟೇಶ​ನ ಮೃತ ದೇಹವನ್ನು ಹಿರಿಯೂರು ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಹಿರಿಯೂರು ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.