ಚಿತ್ರದುರ್ಗ: ಶತ್ರು ಸೈನ್ಯವನ್ನು ಹಿಮ್ಮೆಟ್ಟಿಸಿ ಕೋಟೆನಾಡನ್ನು ಸಂರಕ್ಷಣೆ ಮಾಡಿದ ರಾಜ ವೀರ ಮದಕರಿ ನಾಯಕನ ಜಯಂತಿಯನ್ನು ನಗರದಲ್ಲಿ ಆಚರಿಸಲಾಯಿತು.
ನಗರದಲ್ಲಿರುವ ರಾಜ ವೀರಮದಕರಿ ನಾಯಕನ ಕಂಚಿನ ಪುತ್ಥಳಿಗೆ ಅಭಿಮಾನಿಗಳು ಬೃಹತ್ ಗಾತ್ರದ ಹೂವಿನ ಹಾರ ಹಾಕಿದರು. ಈ ಸಂದರ್ಭದಲ್ಲಿ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಭಾಗಿಯಾಗಿ ವಂದನೆ ಸಲ್ಲಿಸಿದರು.
ಇದೇ ವೇಳೆ ಶಾಸಕ ತಿಪ್ಪಾರೆಡ್ಡಿಯವರು ಹಾಕಿದ ಹೂವಿನ ಹಾರ ಕಿತ್ತು ಹೋಗಿ ಎರಡು ಭಾಗ ಆಗಿದ್ದರಿಂದ, ಅದನ್ನು ಕುದುರೆಯ ಪ್ರತಿಮೆಯ ಮೇಲೆ ಹತ್ತಿ ಸರಿಪಡಿಸಲಾಯಿತು.