ETV Bharat / state

ಕೈ ಭದ್ರಕೋಟೆಯಲ್ಲಿ ಚುನಾವಣ ರಣಕಹಳೆ ಮೊಳಗಿಸಿದ ಪ್ರಧಾನಿ ಮೋದಿ - undefined

ಲೋಕಸಭೆ ಚುನಾವಣೆ ನಿಮಿತ್ತ ಕಾಂಗ್ರೆಸ್​ನ ಭದ್ರಕೋಟೆಗೆ ಪ್ರಧಾನಿ ನರೆಂದ್ರ ಮೋದಿ ವಿಜಯ ಸಂಕಲ್ಪ ರ‍್ಯಾಲಿ ನಡೆಸುವ ಮೂಲಕ ಭರ್ಜರಿ ಮತಬೇಟೆಯಾಡಿದರು.

ಚಿತ್ರದುರ್ಗದಲ್ಲಿ ಮೋದಿ ಪ್ರಚಾರ
author img

By

Published : Apr 10, 2019, 10:58 AM IST

ಚಿತ್ರದುರ್ಗ: ಕಾಂಗ್ರೆಸ್ ಭದ್ರಕೋಟೆ ಚಿತ್ರದುರ್ಗದಲ್ಲಿ ಪ್ರಧಾನಿ ಮೋದಿ ಚುನಾವಣ ರಣ ಕಹಳೆಯನ್ನು ಮೊಳಗಿಸಿದರು. ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಕಮಲವನ್ನು ಅರಳಿಸಲೇಬೇಕೆಂದು ಪಣತೊಟ್ಟಿರುವ ಬಿಜೆಪಿ ನಾಯಕರು ಮೋದಿ ಕರೆಸುವ ಮೂಲಕ ಚುನಾವಣೆಯನ್ನು ಗೆಲ್ಲಲು ರಣತಂತ್ರ ರೂಪಿಸಿದ್ದಾರೆ. ಕೋಟೆನಾಡಿನ ಮೇಲೆ ಕಣ್ಣಿಟ್ಟಿರುವ ಪ್ರಧಾನಿ ನರೇಂದ್ರ ಮೋದಿ ವಿಜಯ ಸಂಕಲ್ಪ ರ‍್ಯಾಲಿ ನಡೆಸುವ ಮೂಲಕ ಭರ್ಜರಿ ಮತಬೇಟೆಯಾಡಿದರು.

ಚಿತ್ರದುರ್ಗದಲ್ಲಿ ಮೋದಿ ಪ್ರಚಾರ

ಕೋಟೆನಾಡು ಚಿತ್ರದುರ್ಗ ಮಂಗಳವಾರ ಸಂಪೂರ್ಣ ಕೇಸರಿಮಯವಾಗಿತ್ತು. ಈ ಲೋಕಸಭಾ ಕ್ಷೇತ್ರದಲ್ಲಿ ಕಮಲವನ್ನು ಅರಳಿಸಲೇಬೇಕೆಂದು ಹಠ ತೊಟ್ಟಿರುವ ಜಿಲ್ಲಾ ಬಿಜೆಪಿ ನಾಯಕರು ಪ್ರಧಾನಿ ಮೋದಿಯನ್ನು ಕರೆಸಿ ಚುನಾವಣ ರಣಕಹಳೆ ಮೊಳಗಿಸಿದರು. ನಗರದ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಬಿಜೆಪಿಯಿಂದ ಬೃಹತ್ ವಿಜಯ ಸಂಕಲ್ಪ ರ‍್ಯಾಲಿ ಆಯೋಜಿಸುವ ಮೂಲಕ ತಮ್ಮ ಶಕ್ತಿ ಪ್ರದರ್ಶಿಸಿದರು. ಚಿತ್ರದುರ್ಗ, ದಾವಣಗೆರೆ ಮತ್ತು ತುಮಕೂರು ಜಿಲ್ಲೆಗಳಿಂದ ಆಗಮಿಸಿದ್ದ ಜನರು ಹಾಗೂ ಮೋದಿ ಅಭಿಮಾನಿಗಳು ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಹುಮ್ಮಸ್ಸನ್ನು ಹೊರಹಾಕಿದರು.

ಪ್ರಚಾರಕ್ಕಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನರು ಕಿಕ್ಕಿರಿದು ನೆರೆದಿದ್ದರು. ಮಧ್ಯಾಹ್ನ 2:45ರ ಸುಮಾರಿಗೆ ಸಭೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಎಲ್ಲರತ್ತ ಕೈಮುಗಿದು ವಂದಿಸುವ ಮೂಲಕ ಚಿತ್ರದುರ್ಗ ಅಭ್ಯರ್ಥಿ ಎ.ನಾರಾಯಣ ಸ್ವಾಮಿ, ದಾವಣಗೆರೆ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ್ ಹಾಗೂ ಬಸವರಾಜುಗೆ ಮತ ನೀಡಿ ಎಂದು ಮತ ಬೇಟೆಯಾಡಿದರು.

ಕನ್ನಡದಲ್ಲಿ ಭಾಷಣ ಆರಂಭಿಸಿದ ಅವರು, ಚಿತ್ರದುರ್ಗ, ತುಮಕೂರು ದಾವಣಗೆರೆಯ ಮಹಿಳೆಯರೇ ಮತ್ತು ಯುವಕರೇ ನಾನು ಯುಗಾದಿ ಹಬ್ಬವನ್ನ ಸಂತೋಷದಿಂದ ಆಚರಣೆ ಮಾಡಿದ್ದೇನೆ, ನಿಮಗೂ ಯುಗಾದಿ ಹಬ್ಬದ ಶುಭಾಶಯಗಳನ್ನು ಕೋರುತ್ತೇನೆ, ಇದು ಶಿವಶರಣರ ನಾಡು, ಹೀಗಾಗಿ ನಾನು ಈ ಭೂಮಿಗೆ ನಮಿಸುತ್ತೇನೆ. ಯುವಕರು ನೀಡುವ ಒಂದೊಂದು ಮತ ನನ್ನ ಜೋಳಿಗೆಗೆ ಬೀಳುತ್ತೆ ಎಂದು ಜನಸಾಮಾನ್ಯರ ಕಡೆ ಕೈ ಮಾಡಿ ಮತಯಾಚಿಸಿದರು.

ನಂತರ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು ಕಾಂಗ್ರೆಸ್​-ಜೆಡಿಎಸ್​ ಅಪವಿತ್ರ ಮೈತ್ರಿ ಮಾಡಿಕೊಂಡಿವೆ. ದೇಶದ ಭದ್ರತೆಗೆ ಧಕ್ಕೆ ಉಂಟು ಮಾಡಿದ ಕಾಂಗ್ರೆಸ್​ನ್ನು ಕಿತ್ತೆಸೆಯಬೇಕಾಗಿದೆ. ನನ್ನ ಪ್ರೀತಿಯ ಯುವಕರೇ ಮತದಾನ ಮಾಡುವ ವೇಳೆ ಯೋಚಿಸಿ ಮತ ನೀಡಿ, ಬಲಿಷ್ಠ ರಾಷ್ಟ್ರ ಕಟ್ಟುವ ನಾಯಕರಿಗೆ, ದೇಶದ ಯೋಧರಿಗೆ ನಿಮ್ಮ ಮತ ಸಲ್ಲಿಸಬೇಕು. ನೀವು ನೀಡುವ ಮೊದಲ ಮತವನ್ನು ಬಡವರಿಗೆ ಮನೆ, ರೈತರಿಗೆ ನೀರು, ಹಾಗೂ ಮುದ್ರ ಯೋಜನೆಯಿಂದ ಲೋನ್ ಸಿಗುವವರಿಗೆ ನೀಡಿ, ನಿಮ್ಮ ಒಂದೊಂದು ಓಟ್ ಅತ್ಯಂತ ಮುಖ್ಯವಾಗಿರುತ್ತದೆ, ನೀವು ನೀಡುವ ಒಂದೊಂದು ಮತ ನೇರವಾಗಿ ಈ ಚೌಕಿದಾರನ ಜೋಳಿಗೆಗೆ ಬೀಳುತ್ತದೆ, ದೇಶವನ್ನು ಕಾಂಗ್ರೆಸ್ ಮುಕ್ತ ಭಾರತವನ್ನಾಗಿ ಮಾಡುವ ಜವಾಬ್ದಾರಿ ನಿಮ್ಮದಾಗಿದೆ ಎಂದರು.

ಒಟ್ಟಾರೆ ಕೋಟೆನಾಡಿನಲ್ಲಿ ಬಿಜೆಪಿ ತನ್ನ ಮೊದಲ ಬೃಹತ್ ರ್ಯಾಲಿ ಮಾಡುವ ಮೂಲಕ ಕಾಂಗ್ರೆಸ್​ಗೆ ಸೆಡ್ಡು ಹೊಡೆದು ಚುನಾವಣ ರಣಕಹಳೆಯನ್ನು ಮೊಳಗಿಸಿದ್ದು, ಮೋದಿ ಆಗಮನದಿಂದ ಮೂರು ಜಿಲ್ಲೆಯ ಮೂರು ಜನ ಬಿಜೆಪಿ ಅಭ್ಯರ್ಥಿಗಳಿಗೆ ವರದಾನವಾಗುತ್ತ ಎಂಬುದು ಚುನಾವಣೆಯ ನಂತರ ತಿಳಿಯಲಿದೆ.

Intro:ಕೈ ಭದ್ರಕೋಟೆಯಲ್ಲಿ ಚುನಾವಣ ರಣಕಹಳೆ ಮೊಳಗಿಸಿದ ಪ್ರಧಾನಿ ಮೋದಿ

ಚಿತ್ರದುರ್ಗ:- ಕಾಂಗ್ರೆಸ್ ಭದ್ರಕೋಟೆಯಲ್ಲಿ ಪ್ರಧಾನಿ ಮೋದಿ ಚುನಾವಣ ರಣ ಕಹಳೆಯನ್ನು ಮೊಳಗಿಸಿದರು. ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಕಮಲವನ್ನು ಅರಳಿಸಲೇ ಬೇಕೆಂದು ಪಣತೊಟ್ಟಿರುವ ಬಿಜೆಪಿ ನಾಯಕರು ಮೋದಿ ಕರೆಸುವ ಮೂಲಕ ಚುನಾವಣೆಯನ್ನು ಗೆಲ್ಲಲು ರಣತಂತ್ರ ರೂಪಿಸಿದ್ದಾರೆ. ಕೋಟೆನಾಡಿನ ಮೇಲೆ ಕಣ್ಣಿಟ್ಟಿರುವ ಪ್ರಧಾನಿ ನರೇಂದ್ರ ಮೋದಿ ವಿಜಯ ಸಂಕಲ್ಪ ರ್ಯಾಲಿ ನಡೆಸುವ ಮೂಲಕ ಭರ್ಜರಿ ಮತಬೇಟೆಯಾಡಿದರು.

ಕೋಟೆನಾಡು ಚಿತ್ರದುರ್ಗ ಇಂದು ಸಂಪೂರ್ಣ ಕೇಸರಿಮಯವಾಗಿತ್ತು. ಈ ಲೋಕ ಸಭಾ ಕ್ಷೇತ್ರದಲ್ಲಿ ಕಮಲವನ್ನು ಅರಳಿಸಲೇ ಬೇಕೆಂದು ಜಿದ್ದು ಸಾಧಿಸಿರುವ ಜಿಲ್ಲಾ ಬಿಜೆಪಿ ನಾಯಕರು ಪ್ರಧಾನಿ ಮೋದಿ ವಿರುದ್ಧ ಚುನಾವಣ ರಣಕಹಳೆ ಮೊಳಗಿಸಿದರು. ನಗರದ
ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಬಿಜೆಪಿಯಿಂದ ಬೃಹತ್ ವಿಜಯ ಸಂಕಲ್ಪ ರ್ಯಾಲಿ ಆಯೋಜಿಸುವ ಮೂಲಕ ತಮ್ಮ ಶಕ್ತಿ ಪ್ರದರ್ಶಿಸಿದರು. ಚಿತ್ರದುರ್ಗ, ದಾವಣಗೆರೆ ಮತ್ತು ತುಮಕೂರು ಜಿಲ್ಲೆಗಳಿಂದ ಆಗಮಿಸಿದ್ದ ಜನ್ರು ಹಾಗೂ ಮೋದಿ ಅಭಿಮಾನಿಗಳು ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಹುಮ್ಮಸ್ಸನ್ನು ಹೊರಹಾಕಿದರು. ಪ್ರಚಾರಕ್ಕಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನರು ಕಿಕ್ಕಿರಿದು ನೆರೆದಿದ್ರು, ಮಧ್ಯಾಹ್ನ 2:45ರ ಸುಮಾರಿಗೆ ಸಭೆಗೆ ಹಾಜರಾದ ಪ್ರಧಾನಿ ನರೇಂದ್ರ ಮೋದಿ ಎಲ್ಲರತ್ತ ಕೈಮುಗಿದು ವಂದಿಸುವ ಮೂಲಕ ಚಿತ್ರದುರ್ಗ ಅಭ್ಯರ್ಥಿ ಎ ನಾರಾಯಣ ಸ್ವಾಮಿ, ದಾವಣಗೆರೆ ಅಭ್ಯರ್ಥಿ ಜಿಎಂ ಸಿದ್ದೇಶ್ವರ್ ಹಾಗೂ ಬಸವರಾಜುಗೆ ಮತ ನೀಡಿ ಎಂದು ಮತಬೇಟೆಯಾಡಿದರು. ಇನ್ನು ನಂತರ ಮಾತನಾಡಿದ ಅವರು ಕನ್ನಡದಲ್ಲಿ ಭಾಷಣ ಆರಂಭಸಿ ಚಿತ್ರದುರ್ಗ, ತುಮಕೂರು ದಾವಣಗೆರೆಯ ಮಹಿಳೆಯರೇ ಮತ್ತು ಯುವಕರೇ ನಾನು ಯುಗಾದಿ ಹಬ್ಬವನ್ನ ಸಂತೋಷದಿಂದ ಆಚರಣೆ ಮಾಡಿದ್ದೇನೆ, ನಿಮಗೂ ಯುಗಾದಿ ಹಬ್ಬದ ಶುಭಾಶಯಗಳನ್ನು ಕೋರುತ್ತೇನೆ, ಇದು ಶಿವಶರಣರ ನಾಡು, ಹೀಗಾಗಿ ನಾನು ಈ ಭೂಮಿಗೆ ನಮಿಸುತ್ತೇನೇ. ಯುವಕರು ನೀಡುವ ಓಂದೊಂದು ಮತ ನನ್ನ ಜೋಳಿಗೆಗೆ ಬೀಳುತ್ತೆ ಎಂದು ಜನಸಾಮಾನ್ಯರ ಕಡೆ ಕೈ ಮಾಡಿ ಮತಯಾಚಿಸಿದರು.

ಬೈಟ್1: ನರೇಂದ್ರ ಮೋದಿ, ಪ್ರಧಾನಿ.

ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು ಅಪವಿತ್ರ ಮೈತ್ರಿ ಮಾಡಿಕೊಂಡಿದ್ದು, ಒಂದು ದಿನ ರಾತ್ರಿ ಇಬ್ಬರು ಒಂದೊಂದು ಕಡೆ ಒಬ್ಬೊಬ್ಬರು ಓಡಿಹೋಗುವ ಮೂಲಕ ಬೇರ್ಪಡುತ್ತಾರೆ ಎಂದು ಭವಿಷ್ಯ ನುಡಿದರು. ನಿರಂತರವಾಗಿ ಕಾಂಗ್ರೆಸ್ ವಿರುದ್ದ ಹರಿಹಾಯ್ದ ಪ್ರಧಾನಿ ಮೋದಿ, ಕಾಂಗ್ರೆಸ್ ಮಾಡಿರುವ ಅನ್ಯಾಯದ ಬಗ್ಗೆ ಚೌಕಿದಾರ್ ಗೆ ನೀವು ಸಹಾಯ ಮಾಡ್ಬೇಕು, ದೇಶದ ಭದ್ರತೆಗೆ ದಕ್ಕೆ ಉಂಟು ಮಾಡಿದ ಕಾಂಗ್ರೆಸ್ ನ್ನು ಕಿತ್ತೆಸೆಯಬೇಕಾಗಿದೆ. ನನ್ನ ಪ್ರೀತಿಯ ಯುವಕರೇ ಮತದಾನ ಮಾಡುವ ವೇಳೆ ಯೋಚಿಸಿ ಮತನೀಡಿ, ಬಲಿಷ್ಠ ರಾಷ್ಟ್ರ ಕಟ್ಟುವ ನಾಯಕರಿಗೆ, ದೇಶದ ಯೋಧರಿಗೆ ನಿಮ್ಮ ಮತ ಸಲ್ಲಿಸಬೇಕು. ನಿವು ನೀಡುವ ಮೊದಲ ಮತವನ್ನು ಬಡವರಿಗೆ ಮನೆ, ರೈತರಿಗೆ ನೀರು, ಹಾಗೂ ಮುದ್ರ ಯೋಜನೆಯಿಂದ ಲೋನ್ ಸಿಗುವವರಿಗೆ ನೀಡಿ,
ನಿಮ್ಮ ಒಂದೊಂದು ಓಟ್ ಅತ್ಯಂತ ಮುಖ್ಯವಾಗಿರುತ್ತದೆ, ನೀವು ನೀಡುವ ಒಂದೊಂದು ಮತ ನೇರವಾಗಿ ಈ ಚೌಕಿದಾರನ ಜೋಳ್ಗಿಗೆ ಬೀಳುತ್ತದೆ, ಯುವಕರು ಬಿಜೆಪಿ ಪರ ಇದ್ದಾರೆ, ಅವರ ಮತಗಳು ನಮಗೆ ಬೀಳೊದು. ದೇಶದಲ್ಲಿ ಕಾಂಗ್ರೆಸ್ ಮುಕ್ತ ಭಾರತವನ್ನಾಗಿ ಮಾಡುವ ಜವಾಬ್ದಾರಿ ನಿಮ್ಮದಾಗಿದೆ.
ಬೈಟ್2: ನರೇಂದ್ರ ಮೋದಿ, ಪ್ರಧಾನಿ

ಒಟ್ಟಾರೆ ಕೋಟೆನಾಡಿನಲ್ಲಿ ಬಿಜೆಪಿ ತನ್ನ ಮೊದಲ ಬೃಹತ್ ರ್ಯಾಲಿ ಮಾಡುವ ಮೂಲಕ ಕಾಂಗ್ರೆಸ್ ಗೆ ಸೆಡ್ಡು ಹೊಡೆದು ಚುನಾವಣ ರಣಕಹಗಳೆಯನ್ನು ಮೊಳಗಿಸಿದ್ದು, ಮೋದಿ ಆಗಮನದಿಂದ ಮೂರು ಜಿಲ್ಲೆಯ ಮೂರು ಜನ ಬಿಜೆಪಿ ಅಭ್ಯರ್ಥಿಗಳಿಗೆ ವರದಾನವಾಗುತ್ತ ಎಂಬುದು ಚುನಾವಣೆಯ ನಂತರ ತಿಳಿಯಲಿದೆ.

ಡಿ ನೂರುಲ್ಲಾ ಈ ಟಿವಿ ಭಾರತ್ ಚಿತ್ರದುರ್ಗ

Body:modiConclusion:modi

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.