ಚಿತ್ರದುರ್ಗ: ಕೊರೊನಾ ಸೋಂಕು ತಡೆಗಟ್ಟಲು ಸರ್ಕಾರ ಘೋಷಣೆ ಮಾಡಿರುವ ಲಾಕ್ಡೌನ್ ಬಿಸಿ ವಕೀಲರಿಗೂ ತಟ್ಟಿದೆ. ಸತತ ನಾಲ್ಕು ಹಂತದ ಲಾಕ್ಡೌನ್ ಘೋಷಣೆಯಿಂದಾಗಿ ವಕೀಲರ ಬದುಕು ದುಸ್ತರವಾಗಿದೆ. ಲಾಕ್ಡೌನ್ನಿಂದಾಗಿ ನ್ಯಾಯಾಲಯದ ಕಲಾಪಗಳು ಸ್ಥಗಿತಗೊಳಿಸಿದ ಪರಿಣಾಮ ವಕೀಲರ ಸಮುದಾಯ ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿದೆ. ವಕೀಲರ ನೆರವಿಗೆ ಚಿತ್ರದುರ್ಗ ಜಿಲ್ಲಾ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಪ್ರತಾಪ್ ಜೋಗಿಯವರು ಧಾವಿಸಿದ್ದಾರೆ.
ಕಷ್ಟಕ್ಕೆ ಸ್ಪಂದಿಸಿರುವ ಪ್ರತಾಪ್ ಜೋಗಿಯವರು, ಇಂದು ಜೆಡಿಎಸ್ ಕಚೇರಿಯಲ್ಲಿ ನಗರದ ಕಿರಿಯ ವಕೀಲರಿಗೆ ದವಸ-ಧಾನ್ಯ ಸೇರಿದಂತೆ ಅಗತ್ಯ ವಸ್ತುಗಳ ಕಿಟ್ ವಿತರಣೆ ಮಾಡಿದರು.
ಸರ್ಕಾರ ವಕೀಲರನ್ನು ಕಡೆಗಣಿಸಿದೆ. ಕಲಾಪಗಳಿಲ್ಲದೆ ಕೆಲ ವಕೀಲರು ತೊಂದರೆಗೊಳಗಾಗಿದ್ದಾರೆ. ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ವಕೀಲರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಪ್ರತಾಪ್ ಜೋಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.