ETV Bharat / state

ಲೀಲಾಜಾಲವಾಗಿ ಬಂಡೆಗಳನ್ನು ಏರುವ ಈತನೇ ಕರ್ನಾಟಕದ 'ಕೋತಿರಾಜ್'

ರಾಜ್ಯ- ಹೊರ ರಾಜ್ಯದ ಬೃಹತ್ ಬಂಡೆಗಳು, ಬೆಟ್ಟ ಹಾಗೂ ಜೋಗ ಜಲಪಾತ ಏರಿ ಕೋತಿರಾಜ್ ಸಾಹಸ ಪ್ರದರ್ಶನ ಮಾಡಿದ್ದಾರೆ. ಕಣ್ಣು ಮಿಟುಕಿಸುವಷ್ಟರಲ್ಲಿಯೇ ಎತ್ತರದ ಗೋಡೆ ಏರುವ ಛಲದಂಕ ಮಲ್ಲನೀತ..

Karnataka's Monkey Man
ಈತನೇ ಕರ್ನಾಟಕದ 'ಕೋತಿರಾಜ್'
author img

By

Published : Jan 5, 2021, 6:03 AM IST

ಚಿತ್ರದುರ್ಗ : ಕೋತಿರಾಜ್ ಎಂದೇ ಖ್ಯಾತಿ ಪಡೆದ ಜ್ಯೋತಿರಾಜ್ ಕರ್ನಾಟಕದಲ್ಲಿರುವ ಬಂಡೆ, ಗೋಡೆ, ಬೆಟ್ಟಗಳನ್ನು ಸರಸರನೇ ಏರಿ ನೋಡುಗರನ್ನ ನಿಬ್ಬೆರಗಾಗಿಸುತ್ತಾರೆ. ಕಣ್ಣು ಮಿಟುಕಿಸುವಷ್ಟರಲ್ಲಿಯೇ ಎತ್ತರದ ಗೋಡೆ ಏರುವ ಛಲದಂಕ ಮಲ್ಲನೀತ.

ನಿತ್ಯ ದೊಡ್ಡ ದೊಡ್ಡ ಬಂಡೆಗಳ ಜೊತೆಗೆ ತಾಲೀಮು ಮಾಡುತ್ತಾರೆ. ಅಮೆರಿಕದ ಪ್ರಸಿದ್ಧ ಏಂಜಲ್ಸ್ ಫಾಲ್ಸ್ ಏರಬೇಕು ಎಂಬ ಕನಸು ಕಂಡಿದ್ದ ಕೋತಿರಾಜ್​ಗೆ ಕೊರೊನಾ ತಡೆಯೊಡ್ಡಿದೆ. ರಾಜ್ಯ- ಹೊರ ರಾಜ್ಯದ ಬೃಹತ್ ಬಂಡೆಗಳು, ಬೆಟ್ಟ ಹಾಗೂ ಜೋಗ ಜಲಪಾತ ಏರಿ ಕೋತಿರಾಜ್ ಸಾಹಸ ಪ್ರದರ್ಶನ ಮಾಡಿದ್ದಾರೆ. ಕಠಿಣ ಪರಿಶ್ರಮದಿಂದ ಈ ಸಾಹಸಿ ಕಲೆ ಕರಗತ ಮಾಡಿಕೊಂಡಿರುವ ಕೋತಿರಾಜ್​ ಸ್ವಂತ ಖರ್ಚಿನಲ್ಲಿ 15 ಯುವಕರಿಗೆ ತರಬೇತಿ ಸಹ ನೀಡುತ್ತಿದ್ದಾರೆ.

ಕರ್ನಾಟಕದ ಜನರ ಮನಸ್ಸು ಗೆದ್ದಿರುವ ಹಾಗೂ ಚಿತ್ರದುರ್ಗ ಕೋಟೆಯಲ್ಲಿ ಕೋತಿಯಂತೆ ಲೀಲಾಜಾಲವಾಗಿ ಬಂಡೆಗಳನ್ನು ಏರುವ ಜ್ಯೋತಿರಾಜ್ ತನ್ನೊಂದಿಗೆ ಕಲೆ ಮರೆಯಾಗಬಾರದು ಎಂದು 15 ಯುವಕರಿಗೆ ತರಬೇತಿ ನೀಡುತ್ತಿದ್ದಾರೆ‌.

ಈಗ ತರಬೇತಿ ಪಡೆದ ಯುವಕರು ಈಗಾಗಲೇ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ, ಚಿನ್ನದ ಪದಕ ಪಡೆದಿದ್ದಾರಂತೆ. ಪ್ರತಿ ಭಾನುವಾರ ಚಿತ್ರದುರ್ಗದ ಕೋಟೆಯ ಬಂಡೆಗಳನ್ನು ಏರಿ ಜನರಿಗೆ ಸಾಹಸ ಪ್ರದರ್ಶನ ಮಾಡುತ್ತಾರೆ. ಈ ವೇಳೆ ಪ್ರವಾಸಿಗರು ನೀಡುವ ಹಣವನ್ನು ತರಬೇತಿಗಾಗಿ ಖರ್ಚು ಮಾಡುತ್ತಿದ್ದಾರೆ ಜ್ಯೋತಿರಾಜ್‌.

ಸರ್ಕಾರದ ಯಾವುದೇ ಸಹಾಯವಿಲ್ಲದೇ ಬದುಕುತ್ತಿರುವ ಇವರು, ಅಮೆರಿಕಕ್ಕೆ ತೆರಳಲು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಇದರಿಂದ ಸರ್ಕಾರ ಕೋತಿರಾಜ್​ ಸಹಾಯಕ್ಕೆ ಬಂದ್ರೆ, ಕೋಟೆನಾಡಿನ ಯುವಕನ ಕಲೆ ವಿಶ್ವವಿಖ್ಯಾತವಾಗಲಿದೆ ಎಂಬುದು ಸ್ಥಳೀಯರ ಮಾತು. ಕೋತಿಯಂತೆ ಬೆಟ್ಟ, ಗುಡ್ಡ ಏರುವ ಕೋತಿರಾಜ್​ನ ಏಂಜಲ್ಸ್ ಫಾಲ್ಸ್ ಏರಬೇಕು ಎಂಬ ಕನಸು ಆದಷ್ಟು ಬೇಗ ಈಡೇರಲಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.