ಚಿತ್ರದುರ್ಗ:ಪೊಲೀಸ್ ಪೇದೆ ಮೇಲೆ ಜೆಡಿಎಸ್ ಅಧ್ಯಕ್ಷನ ಪುತ್ರ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.
ಜಿಲ್ಲೆಯ ಚಳ್ಳಕೆರೆ ತಾಲೂಕಿನ ಜೆಡಿಎಸ್ ಅಧ್ಯಕ್ಷ ಪಿಟಿ ತಿಪ್ಪೇಸ್ವಾಮಿಯವರ ಪುತ್ರ ಭುವನ್ ಹಲ್ಲೆ ಮಾಡಿದ್ದಾನೆಂದು ಪೇದೆ ಕೆ. ಪರುಶುರಾಮ್ ದೂರಿದ್ದಾರೆ.
ಚಳ್ಳಕೆರೆ ನಗರದಲ್ಲಿರುವ ಸುಧಾಕರ ಕ್ರೀಡಾಂಗಣ ಬಳಿ ಘಟನೆ ಜರುಗಿದ್ದು, ಚಳ್ಳಕೆರೆ ಐಟಿಐ ವಿಧ್ಯಾರ್ಥಿಗಳಾದ ಪ್ರೀತಮ್ ಹಾಗೂಆಕಾಶ್ ಜೊತೆ ಭುವನ್ ಪಾನಮತ್ತನಾಗಿ ಜಗಳವಾಡುತ್ತಿದ್ದಈ ವೇಳೆ ಪೇದೆ ಜಗಳ ಬಿಡಿಸಲು ಮಧ್ಯೆ ಪ್ರವೇಶಿಸಿದಾಗ ಹಲ್ಲೆ ಮಾಡಿದ್ದಾರೆಂದು ಆರೋಪ ಮಾಡಿದ್ದಾನೆ.
ಪೇದೆ ಮೇಲೆ ಭುವನ್ ಹಲ್ಲೆ ಮಾಡಿದ್ದಾನೆಂದು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆ ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಭುವನ್ನನ್ನುಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.