ETV Bharat / state

ಚಿತ್ರದುರ್ಗದಲ್ಲಿ ನೀರಿನ ಸಮಸ್ಯೆ... ಕ್ರಮ ಕೈಗೊಳ್ಳದ ಅಧಿಕಾರಿಗಳಿಗೆ ಶಾಸಕರಿಂದ ಕ್ಲಾಸ್​ - ಗೂಳಿಹಟ್ಟಿ ಶೇಖರ್​

ಚಿತ್ರದುರ್ಗ ಜಿಲ್ಲೆಯಲ್ಲಿ ಭೀಕರ ಬರದಿಂದ ಜನ‌ ಜಾನುವಾರುಗಳಿಗೆ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಲ್ಲಿ ಎಡವಿದ ಅಧಿಕಾರಿಗಳಿಗೆ ಜಿಲ್ಲೆಯ ಶಾಸಕರು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಧಿಕಾರಿಗಳ ಮೇಲೆ ಜನಪ್ರತಿನಿಧಿಗಳು ಗರಂ
author img

By

Published : Jun 25, 2019, 6:33 AM IST

ಚಿತ್ರದುರ್ಗ: ಜಿಲ್ಲೆಯಲ್ಲಿ ಭೀಕರ ಬರ ತಾಂಡವಾಡುತ್ತಿದೆ. ಜಿಲ್ಲೆಯಾದ್ಯಂತ ಜನ‌ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಈ ನಡುವೆ ಲೋಕಸಭಾ ಚುನಾವಣೆ ಬಂದಿದ್ದರಿಂದ ನೀತಿ ಸಂಹಿತೆ ನೆಪವೊಡ್ಡಿ ಬೇಜವಾಬ್ದಾರಿ ಮೆರೆದಿದ್ದ ಅಧಿಕಾರಿಗಳಿಗೆ ಜಿಲ್ಲೆಯ ಶಾಸಕರು ಫುಲ್​ ಕ್ಲಾಸ್​​ ತೆಗೆದುಕೊಂಡಿದ್ದಾರೆ.

ಅಧಿಕಾರಿಗಳ ಮೇಲೆ ಜನಪ್ರತಿನಿಧಿಗಳು ಗರಂ

ಚಿತ್ರದುರ್ಗದಲ್ಲಿ ನಡೆದ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಸಭೆಯಲ್ಲಿ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಮಾತನಾಡಿ, ನನ್ನ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಕುಡಿಯುವ ನೀರಿಗಾಗಿ ಬೋರ್​ವೆಲ್ ಕೊರೆಸಿದ್ರೆ ಯಾರ ಅನುಮತಿ ಪಡೆದು ಕಾಮಗಾರಿ ಮಾಡಿದ್ದೀರಾ ಎಂದು‌ ಅಧಿಕಾರಿಗಳು ಎಲ್ಲಾ ಕೆಲಸಗಳಿಗೂ ಅಡ್ಡಿಪಡಿಸುತ್ತಿದ್ದಾರೆ. ಇದರಿಂದ ಜನಪ್ರತಿನಿಧಿಗಳ ಮಾತಿಗೆ ಮನ್ನಣೆ ಸಿಗ್ತಿಲ್ಲ ಎಂದು ಗಂಭೀರ ಆರೋಪ ಮಾಡಿದರು.

ಇದಕ್ಕೆ ಧ್ವನಿಗೂಡಿಸಿದ ಮೊಳಕಾಲ್ಮೂರು ಶಾಸಕ ಶ್ರೀರಾಮುಲು, ನನ್ನ ಕ್ಷೇತ್ರದಲ್ಲೂ ಅಧಿಕಾರಿಗಳು ಕಾಮಗಾರಿಗಳನ್ನೇ ನಿಲ್ಲಿಸಿದ್ದಾರೆ. ಮತ ಹಾಕಿದ ಜನರಿಗಾಗಿ ನಾವು ಏನೂ ಕೆಲಸ ಮಾಡಿಸೋಕೆ ಆಗ್ತಿಲ್ಲ. ನೀವು ರಾಜಕೀಯ ಮಾಡೋಕೆ ಬಂದಿದ್ದೀರಾ ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ್ರು.

ಇನ್ನು ಲೋಕಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಬಳಿಕ ಮೊದಲ ತ್ರೈಮಾಸಿಕ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ ಮಾತನಾಡಿ, ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನಗಳು ಎಲ್ಲೂ ಸದುಪಯೋಗ ಆಗಿಲ್ಲ. ಎಲ್ಲದಕ್ಕೂ ಮಿಗಿಲಾಗಿ ‌ಕುಡಿಯುವ ನೀರಿಗೆ ಆದ್ಯತೆ ಕೊಡಬೇಕು. ಕೆಲವೆಡೆ ಜನರ ಒತ್ತಾಯಕ್ಕೆ ಮಣಿದು ಜನಪ್ರತಿನಿಧಿಗಳು ಕಾಮಗಾರಿ ಮಾಡಲು ಹೇಳಿರುತ್ತಾರೆ. ಆದರೆ ಅಧಿಕಾರಿಗಳು ನೀವೇ ಸುಪ್ರೀಂ ಅನ್ನೋ ತರ ನಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಜನಪ್ರತಿನಿಧಿಗಳು ಹೇಳಿರುವ ಕಾಮಗಾರಿಗಳಿಗೆ ಎದುರು ಮಾತನಾಡದೆ ಹಣ ಮಂಜೂರು ಮಾಡಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿದರು.

Intro:ಚುನಾವಣೆ ಬಳಿಕ ಉಸ್ತುವಾರಿ ಸಚಿವರ ಮೊದಲ ಸಭೆ : ಕೆಲಸ ಮಾಡದೆ ಇರುವ ಅಧಿಕಾರಿಗಳ ಚಳಿ ಬಿಡಿಸಿದ ಸಚಿವರು

ಆ್ಯಂಕರ್:- ಲೋಕಸಭಾ ಚುನಾವಣೆ ಬಳಿಕ ಆಡಳಿತ ಯಂತ್ರಕ್ಕೆ ಸಚಿವರು ಚುರುಕು ಮುಟ್ಟಿಸಿದ್ದಾರೆ. ಲೋಕ ಸಮರದ ಬೆನ್ನಲ್ಲೇ ನೀತಿ ಸಂಹಿತೆಯ ಅಡ್ಡಿಯಿಂದಾಗಿ‌ ನೆನೆಗುದಿಗೆ ಬಿದ್ದಿದ್ದ ಜಿಲ್ಲೆ ಅಭಿವೃದ್ಧಿ ಕುರಿತ ಚರ್ಚೆ ಇಂದು ಸುಗಮವಾಗಿ ನೆರವೇರಿದೆ. ನಮಗೆ ಹೇಳೋರು ಕೇಳೋರೆ ಇಲ್ಲ ಅಂತ ಕಾರ್ಯನಿರ್ವಹಿಸದೆ ಬೀಗುತ್ತಿದ್ದ ಅಧಿಕಾರಿ ವರ್ಗಕ್ಕೆ ಜನಪ್ರತಿನಿಧಿಗಳು ಇಂದು ಭರ್ಜರಿಯಾಗಿ ಚಳಿ ಬಿಡಿಸಿದ್ದಾರೆ.....

ಲುಕ್...

ಫ್ಲೋ....

ವಾಯ್ಸ್01:- ಚಿತ್ರದುರ್ಗ ಜಿಲ್ಲೆಗೆ ಭೀಕರ ಬರ ತಾಂಡವಾಡುತ್ತಿದೆ. ಜಿಲ್ಲೆಯಾದ್ಯಂತ ಜನ‌ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಹೇಳತೀರದಾಗಿದೆ. ಈ ನಡುವೆ ಲೋಕಸಭಾ ಚುನಾವಣೆ ಬಂದಿದ್ರಿಂದ ನೀತಿ ಸಂಹಿತೆ ನೆಪವೊಡ್ಡಿ ತಾವು ಆಡಿದ್ದೇ ಆಟ ಎಂದುಕೊಂಡಿದ್ದ ಅಧಿಕಾರಿಗಳನ್ನ‌ ತರಾಟೆಗೆ ತೆಗೆದುಕೊಂಡ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ನನ್ನ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ, ಕುಡಿಯುವ ನೀರಿಗಾಗಿ ನಾವು ಬೋರ್ ವೆಲ್ ಕೊರೆಸಿದ್ರೆ ಅಧಿಕಾರಿಗಳು ಯಾರ ಅನುಮತಿ ಪಡೆದು ಕಾಮಗಾರಿ ಮಾಡಿದ್ದೀರ ಎಂದು‌ ಎಲ್ಲಾ ಕೆಲಸಗಳಿಗೂ ಅಡ್ಡಿ ಪಡಿಸುತ್ತಿದ್ದಾರೆ, ಜನಪ್ರತಿನಿಧಿಗಳ ಮಾತಿಗೆ ಮನ್ನಣೆ ಸಿಗ್ತಿಲ್ಲ ಎಂದು ಗಂಭೀರ ಆರೋಪ ಮಾಡಿದ್ರೆ, ಇದಕ್ಕೆ ಧ್ವನಿ ಗೂಡಿಸಿದ ಮೊಳಕಾಲ್ಮೂರು ಶಾಸಕ ಶ್ರೀರಾಮುಲು ನನ್ನ ಕ್ಷೇತ್ರದಲ್ಲೂ ಕಾಮಗಾರಿಗಳನ್ನೇ ನಿಲ್ಲಿಸಿದ್ದಾರೆ, ಮತ ಹಾಕಿದ ಜನರಿಗಾಗಿ ನಾವು ಏನೂ ಕೆಲಸ ಮಾಡ್ಸೋಕೆ ಆಗ್ತಿಲ್ಲ, ನೀವು ರಾಜಕೀಯ ಮಾಡೋಕೆ ಬಂದಿದ್ದೀರಾ ಎಂದು ಅಧಿಕಾರಿಗಳಿಗೆ ಹಿಗ್ಗಾ ಮಗ್ಗಾ ತರಾಟೆಗೆ ತೆಗೆದುಕೊಂಡ್ರು..

ಫ್ಲೋ...

ಬೈಟ್1: ಗೂಳಿಹಟ್ಟಿ ಡಿ. ಶೇಖರ್, ಹೊಸದುರ್ಗ ಶಾಸಕ

ಬೈಟ್: ಬಿ.ಶ್ರೀರಾಮುಲು, ಮೊಳಕಾಲ್ಮೂರು ಶಾಸಕ.

ವಾಯ್ಸ್02:- ಲೋಕಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಬಳಿಕ ಮೊದಲ ತ್ರೈಮಾಸಿಕ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ, ಸರ್ಕಾರದಿಂದ ಬಿಡುಗಡೆಯಾಗಿರುವ ಅನುಧಾನಗಳು ಎಲ್ಲೂ ಸದುಪಯೋಗ ಆಗಿಲ್ಲ, ಎಲ್ಲಕ್ಕೂ ಮಿಗಿಲಾಗಿ ‌ಕುಡಿಯುವ ನೀರಿಗೆ ಆದ್ಯತೆ ಕೊಡಬೇಕು, ಕೆಲವೆಡೆ ಜನರ ಒತ್ತಾಯಕ್ಕೆ ಮಣಿದು ಜನಪ್ರತಿನಿಧಿಗಳು ಕಾಮಗಾರಿ ಮಾಡಲು ಹೇಳಿರುತ್ತಾರೆ, ಆದ್ರೆ ಅಧಿಕಾರಿಗಳು ನೀವೇ ಸುಪ್ರೀಂ ಅನ್ನೋ ತರ ನಡೆದುಕೊಳ್ಳುತ್ತಿರುವುದು ಕಂಡು ಬಂದಿದೆ. ಹೀಗಾಗಿ ಜನಪ್ರತಿನಿಧಿಗಳು ಹೇಳಿರುವ ಕಾಮಗಾರಿಗಳಿಗೆ ಎದುರು ಮಾತನಾಡದೆ ಹಣ ಮಂಜೂರು ಮಾಡಬೇಕು ಎಂದು ಆದೇಶಿಸಿದ್ರು..

ಫ್ಲೋ...

ಬೈಟ್02: ವೆಂಕಟರಮಣಪ್ಪ, ಜಿಲ್ಲಾ ಉಸ್ತುವಾರಿ ಹಾಗು ಕಾರ್ಮಿಕ ಸಚಿವ.

ವಾಯ್ಸ್03: ಒಟ್ಟಾರೆ ಜಿಲ್ಲೆ ಅಭಿವೃದ್ದಿಗೆ ನೀತಿ ಸಂಹಿತೆ ಅಡ್ಡಿಬಂದಿತ್ತು. ಬರದ ಜಿಲ್ಲೆಯ ಹಣೆಪಟ್ಟಿಕೊಂಡಿರುವ ಚಿತ್ರದುರ್ಗ ಜಿಲ್ಲೆಗೆ ಮೇಜರ್ ಸರ್ಜರಿ ಮಾಡಲು ಜಿಲ್ಲೆಯ‌ ಎಲ್ಲಾ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಸಾಮೂಹಿಕವಾಗಿ ಧನಿಗೂಡಿಸುವ ಮೂಲಕ‌ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ್ದಾರೆ. ಅದೇನೆ ಆಗಲಿ ಇನ್ಮಂದೆಯಾದ್ರೂ ಅಧಿಕಾರಿಗಳು ಸರ್ಕಾರ ನೀಡಿರುವ ಕೋಟ್ಯಾಂತರ ರೂಪಾಯಿ ಅನುಧಾನವನ್ನ ಅಧಿಕಾರಿಗಳು ಸಮರ್ಪಕವಾಗಿ ಬಳಕೆ ಮಾಡುವ ಮೂಲಕ‌ ಜನರ ಸಮಸ್ಯೆಗೆ ಪರಿಹಾರ ದೊರಕಿಸಿಕೊಡಬೇಕಿದೆ.

ಡಿ ನೂರುಲ್ಲಾ ಈಟಿವಿ ಭಾರತ ಚಿತ್ರದುರ್ಗBody:MinisterConclusion:Mlas garam
ETV Bharat Logo

Copyright © 2025 Ushodaya Enterprises Pvt. Ltd., All Rights Reserved.