ETV Bharat / state

ಇಸ್ರೋ ಸಾಧನೆ: ಚಿತ್ರದುರ್ಗದಲ್ಲಿ ಮರುಬಳಕೆ ಉಡಾವಣಾ ವಾಹನದ ಲ್ಯಾಂಡಿಂಗ್ ಪ್ರಯೋಗ ಯಶಸ್ವಿ - ಉಡಾವಣಾ ವಾಹನ ಸ್ವಾಯತ್ತ ಲ್ಯಾಂಡಿಂಗ್ ಮಿಷನ್

ಚಿತ್ರದುರ್ಗದ ಚಳ್ಳಕೆರೆಯಲ್ಲಿರುವ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನದ ಲ್ಯಾಂಡಿಂಗ್ ಪ್ರಯೋಗವನ್ನು ಇಸ್ರೋ ಯಶಸ್ವಿಯಾಗಿ ನಡೆಸಿದೆ.

ಉಡಾವಣಾ ವಾಹನ ಸ್ವಾಯತ್ತ ಲ್ಯಾಂಡಿಂಗ್ ಮಿಷನ್
RLV
author img

By

Published : Apr 2, 2023, 11:48 AM IST

Updated : Apr 2, 2023, 12:05 PM IST

ಚಿತ್ರದುರ್ಗ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ), ಡಿಆರ್​ಡಿಒ ಮತ್ತು ಭಾರತೀಯ ವಾಯುಪಡೆಯ ಸಹಯೋಗದೊಂದಿಗೆ ಚಿತ್ರದುರ್ಗದಲ್ಲಿರುವ ಏರೋನಾಟಿಕಲ್ ಟೆಸ್ಟ್ ರೇಂಜ್ (ATR) ನಲ್ಲಿ ಇಂದು (ಭಾನುವಾರ) ಮುಂಜಾನೆ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನವಾದ ಸ್ವತಂತ್ರ ಲ್ಯಾಂಡಿಂಗ್ ಮಿಷನ್ (RLV LEX) ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿತು.

  • India 🇮🇳 achieved it!

    ISRO, joined by @DRDO_India @IAF_MCC, successfully conducted the Reusable Launch Vehicle Autonomous Landing Mission (RLV LEX)

    at the Aeronautical Test Range (ATR), Chitradurga, Karnataka in the early hours on April 2, 2023.

    — ISRO (@isro) April 2, 2023 " class="align-text-top noRightClick twitterSection" data=" ">

"ಭಾರತೀಯ ವಾಯುಪಡೆಯ ಚಿನೂಕ್ ಹೆಲಿಕಾಪ್ಟರ್‌ ಸಹಾಯದಿಂದ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನ (ಆರ್‌ಎಲ್‌ವಿ) ಯು ಬೆಳಗ್ಗೆ 7:10 ಕ್ಕೆ ಟೇಕ್ ಆಫ್ ಆಯಿತು. ಬಳಿಕ, 4.5 ಕಿ.ಮೀ ಎತ್ತರದಲ್ಲಿ ಹಾರಾಟ ನಡೆಸಿತು. ಆರ್‌ಎಲ್‌ವಿಯ ಮಿಷನ್ ಮ್ಯಾನೇಜ್‌ಮೆಂಟ್ ಮತ್ತು ಕಂಪ್ಯೂಟರ್ ಕಮಾಂಡ್‌ನ ಆಧಾರದ ಮೇಲೆ ಪೂರ್ವನಿರ್ಧರಿತವಾದಂತೆ ಆರ್‌ಎಲ್‌ವಿ 4.6 ಕಿಮೀ ಕಡಿಮೆ ವ್ಯಾಪ್ತಿಯಲ್ಲಿ ಮಧ್ಯ ಗಾಳಿಯನ್ನು ಬಿಡುಗಡೆ ಮಾಡಿದೆ. ಇಂಟಿಗ್ರೇಟೆಡ್ ನ್ಯಾವಿಗೇಷನ್, ಗೈಡೆನ್ಸ್ ಮತ್ತು ಕಂಟ್ರೋಲ್ ಸಿಸ್ಟಂ ಅನ್ನು ಬಳಸಿಕೊಂಡು ಅಪ್ರೋಚ್ ಮತ್ತು ಲ್ಯಾಂಡಿಂಗ್ ಮಾಡಲಾಯಿತು. ಬೆಳಗ್ಗೆ 7:40 ಕ್ಕೆ ಲ್ಯಾಂಡಿಂಗ್ ಆಗಿದ್ದು, ಏರ್‌ಸ್ಟ್ರಿಪ್‌ನಲ್ಲಿ ಸ್ವತಂತ್ರ ಲ್ಯಾಂಡಿಂಗ್ ಪ್ರಯೋಗವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು" ಎಂದು ಇಸ್ರೋ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ : ಬ್ರಿಟನ್‌ನ 36 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆ ಸೇರಿಸಿದ ಇಸ್ರೋ: ವಿಡಿಯೋ

RLV-TD ಯ ಸಂರಚನೆಯು ವಿಮಾನದಂತೆಯೇ ಇರುತ್ತದೆ. ಹೆಲಿಕಾಪ್ಟರ್ ಮೂಲಕ 4.5 ಕಿ.ಮೀ ಎತ್ತರಕ್ಕೆ (winged body) 'ರೆಕ್ಕೆಯ ದೇಹ'ವನ್ನು ಸಾಗಿಸಿ ರನ್‌ವೇಯಲ್ಲಿ ಸ್ವತಂತ್ರವಾಗಿ ಲ್ಯಾಂಡಿಂಗ್ ಮಾಡಿರುವುದು ವಿಶ್ವದಲ್ಲಿ ಇದೇ ಮೊದಲು ಎಂದು ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ : ಸಿಂಗಾಪುರದ 3 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆ ಸೇರಿಸಿದ ಇಸ್ರೋ: ವಿಡಿಯೋ

"ಪರೀಕ್ಷೆಯ ವೇಳೆಯಲ್ಲಿ ಪುನರ್‌ ಬಳಕೆಯ ಉಡಾವಣಾ ವಾಹನದ ಕವಚವನ್ನ ಹೆಲಿಕಾಪ್ಟರ್‌ ಮೂಲಕ 4 ರಿಂದ 5 ಕಿ.ಮೀ ಎತ್ತರದಿಂದ ಸಮತಲ ವೇಗದಲ್ಲಿ ರನ್‌ವೇಗೆ ಇಳಿಬಿಡಲಾಗುವುದು. ಹೀಗೆ ಇಳಿಬಿಟ್ಟ ಬಳಿಕ ಕವಚವು ರನ್‌ವೇಯಲ್ಲಿ ಜಾರಿಕೊಂಡು ಮುಂದೆ ಹೋಗಲಿದೆ" ಎಂದು ಈ ಹಿಂದೆ ಇಸ್ರೊ ಅಧಿಕಾರಿಗಳು ಮಾಹಿತಿ ನೀಡಿದ್ದರು. ಇಂದು ಯಶಸ್ವಿಯಾಗಿ ಪ್ರಯೋಗ ನಡೆಸಲಾಗಿದೆ.

ಇದನ್ನೂ ಓದಿ : ಇಸ್ರೋದಿಂದ ವರ್ಷದ ಮೊದಲ ಉಡ್ಡಯನ ಯಶಸ್ವಿ: ಕಕ್ಷೆ ಸೇರಿದ 3 ಉಪಗ್ರಹಗಳು

ಕಳೆದ ಮೇ 23 ರ 2016 ರಂದು ಇಸ್ರೋದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮೊದಲ RLV-TD HEX-01 (ಹೈಪರ್ಸಾನಿಕ್ ಫ್ಲೈಟ್ ಪ್ರಯೋಗ-01) ಮಿಷನ್ ಅನ್ನು ಪ್ರದರ್ಶಿಸಿತ್ತು. ಈ ವೇಳೆ ಮರು ವಿನ್ಯಾಸ ಮತ್ತು ಹಾರಾಟದ ವಾಹನಗಳ ವಿನ್ಯಾಸ ಮತ್ತು ಹಾರಾಟದ ಪರೀಕ್ಷೆಗಾಗಿ ನಿರ್ಣಾಯಕ ತಂತ್ರಜ್ಞಾನಗಳ ಕುರಿತು ತಿಳಿಸಿತ್ತು. ಇದೀಗ HEX ಕಾರ್ಯಾಚರಣೆಯ ಮುಂದುವರೆದ ಭಾಗವಾಗಿ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನಗಳನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಸಾಧನೆ ಮಾಡಿದೆ.

ಇದನ್ನೂ ಓದಿ : 36 ಉಪಗ್ರಹಗಳ ಉಡಾವಣೆಗೆ ಸಿದ್ಧವಾಗುತ್ತಿವೆ ಒನ್‌ವೆಬ್‌ ಮತ್ತು ಇಸ್ರೋ: ಐತಿಹಾಸಿಕ ಮಿಷನ್​ಗೆ ಕ್ಷಣಗಣನೆ

Last Updated : Apr 2, 2023, 12:05 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.