ETV Bharat / state

ಧೀಮಂತ ರಾಜಕಾರಣಿ ಎಸ್.‌ನಿಜಲಿಂಗಪ್ಪನವರ ಮನೆ ಅಭಿವೃದ್ಧಿಗೆ ಸರ್ಕಾರದ ನಿರ್ಲಕ್ಷ್ಯ! - late S Nijalingappa Residence

ರಾಜ್ಯದ ಮಾಜಿ ಮುಖ್ಯಮಂತ್ರಿ ದಿ.ಎಸ್.ನಿಜಲಿಂಗಪ್ಪ ಅವರ ಮನೆ‌ ಅಭಿವೃದ್ಧಿಗೆ 2020ನೇ ಬಜೆಟ್‌ನಲ್ಲಿ 5 ಕೋಟಿ ರೂ ಹಣವನ್ನು ಸರ್ಕಾರ ಮೀಸಲಿಡುವುದಾಗಿ ಘೋಷಣೆ ಮಾಡಿತ್ತು. ಆದರೆ, ಇನ್ನೂ ಮನೆಯನ್ನು ಅಭಿವೃದ್ಧಿ ಪಡಿಸುತ್ತಿಲ್ಲವೆಂದು ಚಿತ್ರದುರ್ಗ ಜಿಲ್ಲೆಯ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

chitradurga
ದಿ.ಎಸ್ ನಿಜಲಿಂಗಪ್ಪ ನಿವಾಸ
author img

By

Published : Feb 2, 2021, 8:47 AM IST

ಚಿತ್ರದುರ್ಗ: ಕರ್ನಾಟಕ ರತ್ನ, ಮಾಜಿ ಸಿಎಂ ಎಸ್.ನಿಜಲಿಂಗಪ್ಪನವರ ಕೊಡುಗೆ ಕರ್ನಾಟಕಕ್ಕೆ ಅಪಾರವಾಗಿದೆ. ಅವರು ಬದುಕಿ ಬಾಳಿದ ನಿವಾಸದ ಅಭಿವೃದ್ಧಿಗೆ ಸರ್ಕಾರ ಕಳೆದ ವರ್ಷವೇ ಮುಂದಾಗಿತ್ತು. ಆದರೆ ಇನ್ನೂ ನಿವಾಸ ಅಭಿವೃದ್ಧಿಯಾಗದೇ ಇರುವುದಕ್ಕೆ ಜಿಲ್ಲೆಯ ಜನತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದ ಜಿಲ್ಲಾಧಿಕಾರಿಯ ನಿವಾಸದ ಹಿಂಭಾಗದಲ್ಲಿರುವ ನಿಜಲಿಂಗಪ್ಪನವರ ಮನೆ‌ ಸ್ಮಾರಕವಾಗಬೇಕು ಅನ್ನೋದು ಜಿಲ್ಲೆಯ ಜನತೆಯ ಕನಸಾಗಿತ್ತು‌. ಈ ನಿಟ್ಟಿನಲ್ಲಿ ಕಳೆದ ಬಜೆಟ್‌ನಲ್ಲಿ 5 ಕೋಟಿ ರೂ ಹಣವನ್ನು ಸರ್ಕಾರ ಮೀಸಲಿಡುವುದಾಗಿ ಘೋಷಣೆ ಕೂಡ ಮಾಡಿತ್ತು.

ದಿ.ಎಸ್.ನಿಜಲಿಂಗಪ್ಪನವರ ನಿವಾಸದ ಅಭಿವೃದ್ಧಿಗೆ ಚಿತ್ರದುರ್ಗದ ಜನತೆ ಒತ್ತಾಯ

ಈ ಕುರಿತು ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಮಾತನಾಡಿ, ಮನೆ ಅಭಿವೃದ್ಧಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಆದರೆ ಇದುವರೆಗೂ ಹಣ ಬಿಡುಗಡೆಯಾಗಿಲ್ಲ. ಸರ್ಕಾರ ಜಿಲ್ಲಾಧಿಕಾರಿ ಮಟ್ಟದಲ್ಲಿ ಅಭಿವೃದ್ಧಿ ಮಾಡಲು ಅನುಮತಿ ನೀಡಿದರೆ ಕ್ರಮಕ್ಕೆ ಮುಂದಾಗುತ್ತೇವೆ. ಮನೆ ನವೀಕರಣಕ್ಕೆ 4.50 ಕೋಟಿ ರೂ ಹಣ ತಗುಲುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಸಿಎಂ ಬಿಎಸ್​ವೈ ಭೇಟಿ ಮಾಡಿದ‌ ರೇಣುಕಾಚಾರ್ಯ ಟೀಂ..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.