ETV Bharat / state

ಗಗನಕ್ಕೇರಿದ ತರಕಾರಿ ಬೆಲೆ, ಬರದನಾಡಿನಲ್ಲಿ ಗ್ರಾಹಕರಿಗೆ ಬರೆ! - ತರಕಾರಿ

ಚಿತ್ರದುರ್ಗದಲ್ಲಿ ತರಕಾರಿ, ಸೊಪ್ಪುಗಳ ಬೆಲೆ ಗಗನಕ್ಕೇರಿದ್ದು, ಜನರನ್ನು ಹೈರಾಣಾಗಿಸಿದೆ. ಇದರಿಂದ ಮಾರುಕಟ್ಟೆ ಬಳಿ ಗ್ರಾಹಕರು ಸುಳಿಯದಂತಾಗಿದೆ. ಮಳೆ ಕೊರತೆಯೇ ಇದಕ್ಕೆಲ್ಲಾ ಕಾರಣ.

ಗಗನಕ್ಕೇರಿದ ತರಕಾರಿ ಬೆಲೆ
author img

By

Published : May 3, 2019, 4:45 PM IST

Updated : May 3, 2019, 4:53 PM IST

ಚಿತ್ರದುರ್ಗ: ಜಿಲ್ಲೆಯಲ್ಲಿ ಭೀಕರ ಕ್ಷಾಮ ಆವರಿಸಿದ್ದು, ಮಳೆ ಇಲ್ಲದೆ ರೈತರು ತರಕಾರಿಗಳನ್ನು ಬೆಳೆಯಲು ಹಿಂಜರಿಯುತ್ತಿದ್ದಾರೆ. ಆದರೆ ಅವಶ್ಯಕವಾಗಿರುವ ತರಕಾರಿಯನ್ನು ನೆರೆಯ ದಾವಣಗೆರೆ, ತುಮಕೂರು ಹಾಗೂ ಬೆಂಗಳೂರು ಜಿಲ್ಲೆಗಳಿಂದ ದಳ್ಳಾಳಿಗಳು ಆಮದು ಮಾಡಿಕೊಳ್ಳುತ್ತಿರುವ ಪರಿಣಾಮ ತರಕಾರಿಗಳ ಬೆಲೆ ಹೆಚ್ಚಾಗಿದೆ. ಇದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ.

ಬರಗಾಲದಿಂದ ಬಳಲುತ್ತಿರುವ ಕೋಟೆನಾಡಿನಲ್ಲಿ ಈ ಬಾರಿ ಕೂಡ ಮಳೆ ಕಡಿಮೆಯಾಗಿದ್ದು, ರೈತರು ಬೆಳೆ ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ. ಜಿಲ್ಲೆಯ ಪ್ರಮುಖ ಬೆಳೆಗಳಾದ ಈರುಳ್ಳಿ, ಶೇಂಗಾ, ಕಡಲೆ ಬೆಳೆಗಳಲ್ಲಿ ಇಳುವರಿ ಗಣನೀಯವಾಗಿ ಇಳಿಮುಖವಾಗಿದೆ.

ಗಗನಕ್ಕೇರಿದ ತರಕಾರಿ ಬೆಲೆ

ತರಕಾರಿಗಳಲ್ಲಿ ಕೆಜಿ ಬೀನ್ಸ್ 120 ರಿಂದ 130 ರೂ, ಟೊಮ್ಯಾಟೊ 30 ರಿಂದ 40, ಮೆಣಸಿನ ಕಾಯಿ ಕೂಡ 60 ರಿಂದ 70 ರೂ ಬೆಲೆ ಇದ್ದು, ಗ್ರಾಹಕರು ಸುಸ್ತಾಗಿದ್ದಾರೆ. ಕ್ಯಾರೆಟ್ ಇಳುವರಿಗೂ ಹೊಡೆತ ಬಿದ್ದಿದ್ದು ಕೆಜಿಗೆ 20 ರಿಂದ 35 ರೂ ಇದೆ. ಹಾಗಲ ಕಾಯಿ, ಹೀರೆ ಕಾಯಿ ಬೆಲೆಯಲ್ಲೂ ಏರಿಕೆಯಾಗಿದೆ. ಇನ್ನೂ ಬದನೆ ಕಾಯಿ, ನವಿಲು ಕೋಸು, ಎಲೆ ಕೋಸು, ಬೆಲೆ ಸ್ವಲ್ಪ ಮಟ್ಟಿಗೆ ಕಡಿಮೆ ಇದೆ ಎನ್ನುತ್ತಾರೆ ತರಕಾರಿ ಮಾರಾಟಗಾರರಾದ ಮಧು.

ಸೊಪ್ಪು ಪ್ರಿಯರಿಗೆ ಶಾಕ್

ತರಕಾರಿಗಳ ಬೆಲೆ ಗಗನಕ್ಕೇರಿದ ಬೆನ್ನಲ್ಲೇ ಸೊಪ್ಪುಗಳ ಬೆಲೆಯಲ್ಲೂ ಏರುಪೇರಾಗಿದ್ದು, ದುಬಾರಿಯಾಗಿದೆ. ಅರಿವೆ, ಪಾಲಕ್, ಚಕ್ಕೋತಾ, ಸಬ್ಬಸಿಗೆ, ಮೆಂತೆ, ಕೀರೆ ಹೀಗೆ ಯಾವುದೇ ಸೊಪ್ಪು ಕೊಂಡರೂ ಒಂದು ಕಟ್ಟಿಗೆ 30 ರಿಂದ 40 ರೂಪಾಯಿಗಿಂತ ಕಡಿಮೆ ಇಲ್ಲ. ಕೊತ್ತಂಬರಿ ಸೊಪ್ಪು ಕೂಡ ಒಂದು ಕಟ್ಟಿಗೆ 50-60 ರೂಪಾಯಿ ಇದೆ.

Intro:ಬರದನಾಡು ಚಿತ್ರದುರ್ಗದಲ್ಲಿ ಗಗನಕ್ಕೇರಿದ ತರಕಾರಿ ಬೆಲೆ : ಕೊಳ್ಳಲು ಗ್ರಾಮಹಕರಿಲ್ಲದೆ ಭಣಗುಡುತ್ತಿದೆ ತರಕಾರಿ ಮಾರುಕಟ್ಟೆ
ಚಿತ್ರದುರ್ಗ:- ಬರದನಾಡು ಚಿತ್ರದುರ್ಗದಲ್ಲಿ ಭೀಕರ ಕ್ಷಾಮ ಆವರಿಸಿದೆ. ಮಳೆ ಇಲ್ಲದೆ ರೈತರು ತರಹೆವಾರಿ ತರಕಾರಿಗಳನ್ನು ಬೆಳೆಯಲು ಹಿಂಜರಿಯುತ್ತಿದ್ದಾರೆ, ಅದ್ರೇ ಜಿಲ್ಲೆಗೆ ಅವಶ್ಯಕವಾಗಿರುವ ತರಕಾರಿಯನ್ನು ನೆರೆಯ ದಾವಣಗೆರೆ, ತುಮಕೂರು ಬೆಂಗಳೂರು ಜಿಲ್ಲೆಗಳಿಂದ ದಳ್ಳಾಳಿಗಳು ಆಮದು ಮಾಡಿಕೊಳ್ಳಲಾಗುತ್ತಿರುವ ಪರಿಣಾಮ ತರಕಾರಿಗಳ ಬೆಲೆ ಕೂಡ ಗಗನಕ್ಕೇರಿದೆ. ಇದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳುವಂತಾಗಿದೆ.
ಹೌದು ಸದಾ ಬರಗಾಲದಿಂದ ಬಳಲುತ್ತಿರುವ ಕೋಟೆನಾಡು ಚಿತ್ರದುರ್ಗದಲ್ಲಿ ಈ ಬಾರಿ ಕೂಡ ಮಳೆ ಬೆಳೆ ಇಲ್ಲದೆ ಅದೇಷ್ಟೋ ರೈತರು ತರಹೆವಾರಿ ಬೆಳೆಗಳನ್ನು ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ. ಜಿಲ್ಲೆಯ ಪ್ರಮುಖ ಬೆಳೆಗಳಾದ ಈರುಳ್ಳಿ, ಶೇಂಗಾ, ಕಡಲೆ ಬೆಳೆಯಲ್ಲಿ ಗಣನೀಯ ಪ್ರಮುಣ ಇಳಿಮುಖವಾಗಿದೆ. ಇನ್ನೂ ಈ ಬಾರಿ ಮಳೆರಾಯ ಕೈಕೊಟ್ಟ ಪರಿಣಾಮ ತರಕಾರಿ ಬೆಳೆಯನ್ನು ಬೆಳೆಯಲು ಮುಂದಾದ ರೈತರು ಕೈ ಸುಟ್ಟುಕೊಂಡಿರುವ ಉದಾಹರಣೆ ಕಾಣಸಿಗುತ್ತದೆ. ತರಕಾರಿ ಸಿಗದೆ ಹೈರಾಣಾದ ಮಾರುಕಟ್ಟೆಯ ದಳ್ಳಾಳಿಗಳು ಜಿಲ್ಲೆಗೆ ಪೂರಕವಾದ ತರಕಾರಿಯನ್ನು ನೇರೆಯ ದಾವಣಗೆರೆ ತುಮಕೂರು ಬೆಂಗಳೂರು ಜಿಲ್ಲೆಗಳಿಂದ ಆಮದು ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣ ಆಗಿದೆ. ಇನ್ನೂ ಬೇರೆ ಜಿಲ್ಲೆಗಳಿಂದ ಆಮದು ಮಾಡಿಕೊಂಡಿರುವ ತರಹೇವಾರಿ ತರಕಾರಿಗಳ ಬೆಲೆ ಗಗನಕ್ಕೇರಿದ್ದು, ಗ್ರಾಹಕರು ಮಾರುಕಟ್ಟೆ ಬಳಿ ಸುಳಿಯದಂತೆ ಮಾಡಿದೆ. ಇನ್ನೂ ದೂರದ ಊರುಗಳಿಂದ ದಳ್ಳಾಳಿಗಳು ಆಮದು ಮಾಡಿಕೊಳ್ಳುತ್ತಿರುವ ತರಕಾರಿ ಮಾರಾಟವಾಗದೆ ದಿನನಿತ್ಯ ಕೆಟ್ಟುಹೋಗುತ್ತಿರುವುದು ಮಾರಾಟಗಾರರಿಗೆ ಸಂಕಷ್ಠಕ್ಕೀಡು ಮಾಡಿದೆ.
ಬೈಟ್ 01:- ಮಧು, ತರಕಾರಿ ಮಾರಾಟಗಾರರು.
ಇನ್ನೂ ಚಿತ್ರದುರ್ಗದ ನಗರದಲ್ಲಿರುವ ಮಾರುಕಟ್ಟೆಯಲ್ಲಿ ಪ್ರತಿಯೊಂದು ತರಕಾರಿಗಳ ಬೆಲೆ ಗಗನಕ್ಕೇರಿದ್ದು, ದುರ್ಗದ ಜನ್ರನ್ನು ಹೈರಾಣಾಗಿಸಿದೆ. ಜಿಲ್ಲೆಯಲ್ಲಿ ಮಳೆ ಕೈಕೊಟ್ಟ ಪರಿಣಾಮ ಇದೀಗ ತರಕಾರಿ ಕೊಳ್ಳುವರ ಮೇಲೆ ಬೀರುತ್ತಿದ್ದು, ಇಡೀ ಮಾರುಕಟ್ಟೆ ಬಿಕೋ ಎನ್ನುತ್ತಿದೆ. ಸೊಪ್ಪಿನ ಬೆಲೆ ಕೂಡ ಹೆಚ್ಚಾಗಿದ್ದು, ದಳ್ಳಾಳಿಗಳಿಗೆ ಚಿಂತೆಗೀಡು ಮಾಡಿದೆ. ತರಕಾರಿಗಳಲ್ಲಿ ಕೆಜಿಗೆ ಬೀನ್ಸ್ 120 ರಿಂದ 130 ರೂ, ಟೊಮ್ಯಾಟೊ 30 ರಿಂದ 40, ಮೆಣಸಿನ ಕಾಯಿ ಕೂಡ 60 ರಿಂದ 70 ರೂ ಬೆಲೆ ಇದ್ದು, ಗ್ರಾಹಕರು ಹೈರಾಣಾಗುವಂತೆ ಮಾಡಿದೆ. ಕ್ಯಾರೆಟ್ ಬೆಳೆ ಇಳುವರಿಯಲ್ಲಿ ಹೊಡೆತ ಬಿದ್ದಿದ್ದು, ಕೆಜಿಗೆ 20 ರಿಂದ 35 ರೂ ಬೆಲೆ ಇದ್ದು, ಹಗಲ ಕಾಯಿ, ಹೀರೆ ಕಾಯಿ ಬೆಲೆ ಕೂಡ ಏರಿಕೆಯಾಗಿದೆ. ಇನ್ನೂ ಬದನೆ ಕಾಯಿ, ನವಿಲು ಕೋಸು, ಎಲೆ ಕೋಸು, ಬೆಲೆ ಸ್ವಲ್ಪ ಮಟ್ಟಿಗೆ ಕಡಿಮೆ ಇದೆ.
ಬೈಟ್ 02:- ಸಿತರಾ, ಗ್ರಾಹಕಿ.
ಸೊಪ್ಪು ಪ್ರೀಯರಿಗೆ ಶಾಕ್….ಬೆಲೆ ಕೇಳಿದ್ರೇ ಬೆಚ್ಚಿ ಬೀಳ್ತೀರಾ..!
ಹೌದು ತರಕಾರಿಗಳ ಬೆಲೆ ಗಗನಕ್ಕೇರಿದ ಬೆನ್ನಲೇ ಸೊಪ್ಪುಗಳ ಬೆಲೆಯಲ್ಲೂ ಕೂಡ ಏರುಪೇರಾಗಿದ್ದು, ದುಬಾರಿಯಾಗಿದೆ. ಹರಿವೆ, ಪಾಲಕ್, ಚಕ್ಕೋತಾ, ಸಬ್ಬಸಿಗೆ, ಮೆಂತೆ, ಕೀರೆ, ಯಾವುದೇ ಸೊಪ್ಪು ಕಂಡರು ಒಂದು ಕಟ್ಟಿಗೆ 30 ರಿಂದ 40 ರೂಪಾಯಿಗೆ ಕಡಿಮೆ ಇಲ್ಲ ಎಂಬತಾಗಿದೆ. ಕೊತ್ತಂಬರಿ ಸೊಪ್ಪು ಕೂಡು ಒಂದು ಕಟ್ಟಿಗೆ 50-60 ರೂಪಾಯಿ ಬೆಲೆ ಏರಿಕೆಯಾಗಿದೆ.
ಒಟ್ಟಾರೆ ಕೋಟೆನಾಡು ಚಿತ್ರದುರ್ಗದಲ್ಲಿ ತರಕಾರಿ ಹಾಗೂ ಸೊಪ್ಪುಗಳ ಬೆಲೆ ಗಗನಕ್ಕೇರಿದ್ದು, ದುರ್ಗದ ಜನ್ರನ್ನು ಹೈರಾಣಾಗಿಸಿದೆ. ಇದರಿಂದ ಮಾರುಕಟ್ಟೆ ಬಳಿ ಗ್ರಾಹಕರು ಸುಳಿಯದಂತಾಗಿದೆ. ಇದಕ್ಕೆ ಇಳುವರಿಯ ಕುಸಿತ ಎಂಬ ಭೂತ ಕಾಡತೊಡಗಿದ್ದು, ಮಳೆ ಇಲ್ಲದೆ ರೈತರು ನಿತ್ಯ ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿರುವುದಂತೂ ಸುಳ್ಳಲ್ಲ.
ಡಿ ನೂರುಲ್ಲಾ ಈಟಿವಿ ಭಾರತ್ ಚಿತ್ರದುರ್ಗ…

Body:vegConclusion:pkg
Last Updated : May 3, 2019, 4:53 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.