ಚಿತ್ರದುರ್ಗ: ಜಿ.ಪಂ ಸದಸ್ಯನ ವಿರುದ್ಧ ಸ್ನೇಹಿತನ ಪತ್ನಿ ಜತೆ ಅನೈತಿಕ ಸಂಬಂಧದ ಆರೋಪ ಕೇಳಿಬಂದಿದೆ.
ತನ್ನ ಪತ್ನಿ ಜೊತೆ ಜಿ.ಪಂ ಸದಸ್ಯ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಎಂದು ಮಹಿಳೆಯ ಪತಿ ಗಂಭೀರ ಆರೋಪ ಮಾಡಿದ್ದಾರೆ. ಗೆಳೆಯನಾಗಿ ಮನೆಗೆ ಬಂದು ಕುಟುಂಬದಲ್ಲಿ ಹುಳಿ ಹಿಂಡಿದ್ದಾನೆ ಎಂದು ಪತಿ ಹೇಳಿಕೊಂಡಿದ್ದಾರೆ.
ಅನೈತಿಕ ಸಂಬಂಧದ ಬಗ್ಗೆ ಪ್ರಶ್ನಿಸಿದರೆ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿದ್ದಾರೆ. ತಾನು ಜಿ.ಪಂ. ಸದಸ್ಯನೆಂದೇ ಬಡವರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದು, ಇನ್ನೂ ಅನೇಕ ಮಹಿಳೆಯರ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಮಾನಸಿಕ ಕಿರುಕುಳ ನೀಡಿ, ದೌರ್ಜನ್ಯ ನಡೆಸುತ್ತಿದ್ದಾನೆಂದು ಮಾಧ್ಯಮಗಳ ಬಳಿ ಪತಿ ಅಳಲು ತೋಡಿಕೊಂಡಿದ್ದಾರೆ.