ಚಿತ್ರದುರ್ಗ: ಅನ್ನಭಾಗ್ಯ ಅಕ್ಕಿ ಗೋಡಾನ್ ಮೇಲೆ ರಾಂಪುರ ಪೊಲೀಸರು ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಭಾರಿ ಪ್ರಮಾಣದ ಅಕ್ರಮ ಪಡಿತರ ಅಕ್ಕಿ ವಶಕ್ಕೆ ಪಡೆದಿರುವ ಘಟನೆ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕೋನಾಪುರ ಗ್ರಾಮದಲ್ಲಿ ನಡೆದಿದೆ.
ರಾಂಪುರದಿಂದ ಬೆಂಗಳೂರು ಕಡೆಗೆ ಅಕ್ರಮ ಅಕ್ಕಿ ಸಾಗಾಟದ ಶಂಕೆ ಬಂದ ಹಿನ್ನೆಲೆ ಮೊಳಕಾಲ್ಮೂರು ತಹಶೀಲ್ದಾರ್ ಬಸವರಾಜ್ ಹಾಗೂ ಪಿಎಸ್ಐ ಗುಡ್ಡಪ್ಪ ನೇತೃತ್ವದ ತಂಡ ದಾಳಿ ನಡೆಸಿದೆ. ಪಡಿತರ ಅಕ್ಕಿ ಹಾಗೂ ಶಾಲಾ ಬಿಸಿಯೂಟದ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹ ಮಾಡಿದ್ದ ಗೋಡಾನ್ ಮೇಲೆ ದಾಳಿ ನಡೆಸಿ 60 ಟನ್ ಅಕ್ಕಿ ವಶಕ್ಕೆ ಪಡೆದಿದ್ದಾರೆ.
ಆರೋಪಿಗಳಾದ ಚಿದಾನಂದಪ್ಪ, ಸಣ್ಣ ಮಾರಣ್ಣ ಸೇರಿ ಐವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.