ಚಿತ್ರದುರ್ಗ: ಕೋವಿಡ್-19 ತಡೆಗಟ್ಟಲು ರಾಜ್ಯ ಸರ್ಕಾರ ಸಾಕಷ್ಟು ಸರ್ಕಸ್ ಮಾಡುತ್ತಿದ್ದು, ಲಾಕ್ಡೌನ್ ಕೂಡ ಮಾಡಿದೆ. ಆದರೆ ಜನ ಮಾತ್ರ ವೈರಸ್ ಭೀತಿ ಇಲ್ಲದೆ ಸಾಮಾಜಿಕ ಅಂತರ ಕಾಪಾಡದೆ ರೇಷನ್ಗಾಗಿ ಮುಗಿಬಿದ್ದಿದ್ದಾರೆ.
ಚಿತ್ರದುರ್ಗದ ತಾಲೂಕಿನ ಗುಡ್ಡದ ರಂಗವ್ವನಹಳ್ಳಿಯಲ್ಲಿ ಜನರು ಸಮಾಜಿಕ ಅಂತರ ಕಾಯ್ದುಕೊಳ್ಳದೆ ನ್ಯಾಯಬೆಲೆ ಅಂಗಡಿ ಮುಂದೆ ರೇಷನ್ ಖರೀದಿಸಲು ಮುಗಿಬಿದ್ದಿದ್ದರು. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಈಗಾಗಲೇ ಬಾಕ್ಸ್ಗಳನ್ನು ಹಾಕಲಾಗಿದ್ದರೂ ಕೂಡ ಅದರಲ್ಲಿ ನಿಲ್ಲದೆ ಖಾಲಿ ಚೀಲಗಳನ್ನು ಇರಿಸುವ ಮೂಲಕ ಕ್ಯೂ ನಿಂತಿಕೊಳ್ಳುತ್ತಿರುವ ಪರಿಸ್ಥಿತಿ ನಿರ್ಮಾಣ ಆಗಿದೆ.
ಈಗಾಗಲೇ ರಾಜ್ಯದಲ್ಲಿ ಕೊರೊನಾ ಸಂಖ್ಯೆ ಏರುತ್ತಲೇ ಇದ್ದರೂ ಕೂಡ ಜನ ಮಾತ್ರ ಬುದ್ಧಿ ಕಲಿಯದೆ ಇರುವುದು ಆತಂಕಕ್ಕೀಡು ಮಾಡಿದೆ.