ಚಿತ್ರದುರ್ಗ: ವಿದ್ಯುತ್ ಅವಘಡಕ್ಕೆ ಬಾಲಕಿ ಬಲಿ ಆಗಿರುವ ಘಟನೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹೋಬಳಿಯ ಓಬಯ್ಯನಹಟ್ಟಿ ಗ್ರಾಮದಲ್ಲಿ ನಡೆದಿದೆ.
ಓಬಯ್ಯನಹಟ್ಟಿ ಗ್ರಾಮದ ಎಂ. ತಿಪ್ಪಿರಮ್ಮ (15) ಮೃತಪಟ್ಟ ಬಾಲಕಿ ಎಂದು ತಿಳಿದುಬಂದಿದೆ. ಗ್ರಾಮದ ಸಮೀಪ ತೋಟದ ಮನೆಯಲ್ಲಿ ವಿದ್ಯುತ್ ಅವಘಡ ನಡೆದು ಬಾಲಕಿ ಸಾವನಪ್ಪಿದ್ದಾಳೆ. ತಿಪ್ಪಿರಮ್ಮ ನೀರು ತರಲು ಬಾವಿ ಸಮೀಪ ಹೋದಾಗ ಪ್ಲಗ್ ಬಾಕ್ಸ್ ಮುಟ್ಟಿ ಈ ದುರ್ಘಟನೆ ಸಂಭವಿಸಿದೆ.
ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯ ಬಾಪೂಜಿ ಬಾಲಕಿಯರ ಪ್ರೌಢಶಾಲೆಯಲ್ಲಿ 8 ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ತಿಪ್ಪಿರಮ್ಮ ಇಂದು ವಿದ್ಯುತ್ ಸ್ಪರ್ಶಿಸಿ ಯಾರು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾಳೆ. ಇನ್ನೂ ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿದೆ. ಸದ್ಯ ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.