ಚಿತ್ರದುರ್ಗ: ಆರೋಗ್ಯ ಸಚಿವ ಶ್ರೀರಾಮುಲು ವಿರುದ್ಧ ಮೊಳಕಾಲ್ಮೂರು ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಮತ್ತೆ ಮಾತಿನ ಸಮರ ಸಾರಿದ್ದಾರೆ.
ಶ್ರೀರಾಮುಲು ಒಬ್ಬ ಬುಡುಬುಡುಕೆ ಮನುಷ್ಯ. ಹೊಟ್ಟೆಪಾಡಿಗಾಗಿ ಮೊಳಕಾಲ್ಮೂರು ಕ್ಷೇತ್ರಕ್ಕೆ ಬಂದಿದ್ದಾರೆ. ಇಪ್ಪತ್ತು ಮಂದಿ ಪಿಎಗಳನ್ನ ಇಟ್ಕೊಂಡು ಹಣ ವಸೂಲಿ ಮಾಡುತ್ತಿದ್ದಾರೆ. ನಾಚಿಕೆ ಇಲ್ಲದೆ ನಾನು ಶಾಸಕನಾಗಿದ್ದಾಗ ನಿರ್ಮಾಣ ಮಾಡಿಸಿದ್ದ ಕಟ್ಟಡಗಳ ಉದ್ಘಾಟನೆ ಮಾಡುತ್ತಾರೆ. ಅದು ಬಿಟ್ಟರೆ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಎಂದು ಹರಿಹಾಯ್ದರು.
ಜನರ ಕೈಗೆ ಸಿಗುತ್ತಿಲ್ಲ. ಕೇವಲ ಬೂಟಾಟಿಕೆ ಮಾತುಗಳನ್ನಾಡುವುದು ಬಿಟ್ಟರೆ ಅವರಿಗೆ ಅಭಿವೃದ್ಧಿ ಮಾಡುವುದು ಗೊತ್ತಿಲ್ಲ. ಮಂತ್ರಿ ಪದವಿಯನ್ನೂ ಮಾಡಲು ಬರುವುದಿಲ್ಲ. ಜನರ ಕಷ್ಟ ಕೇಳುವ ಮಾನವೀಯತೆಯೂ ಇಲ್ಲ ಎಂದು ಮಾಜಿ ಶಾಸಕ ತಿಪ್ಪೇಸ್ವಾಮಿ ಕಿಡಿಕಾರಿದ್ದಾರೆ.
ಅವರ ಮಾತು ಬಳ್ಳಾರಿಯಲ್ಲೇ ನಡೆಯುತ್ತಿಲ್ಲ ಎಂದು ಏಕವಚನದಲ್ಲೇ ಕುಟುಕಿದ ತಿಪ್ಪೇಸ್ವಾಮಿ, ನೀನು ಎಂತಹ ಬುಡುಬುಡುಕೆ ಅನ್ನೋದು ಜನರಿಗೆ ಗೊತ್ತಾಗಿದೆ. ನಿನ್ನ ಬುಡುಬುಡುಕೆ ಆಟವನ್ನ ಬಳ್ಳಾರಿಯಲ್ಲಿ ಇಟ್ಕೋ. ಇಲ್ಲಿ ಯಾರೂ ಹೆದರಲ್ಲ. ನಿನ್ನದು ನಾಚಿಕೆ ಇಲ್ಲದ ಜನ್ಮ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.