ಚಿತ್ರದುರ್ಗ: ಕೊರೊನಾ ವೈರಸ್ ಪರಿಣಾಮ ಇದೀಗ ಮೀನು ಮಾರಾಟದ ಮೇಲೂ ಬೀರಿದ್ದು, ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಾಂಸ ಹಾಗೂ ಮೀನು ಮಾರಾಟ ನಿಷೇಧಿಸಲಾಗಿದೆ.
ಹೀಗಾಗಿ ಆರೋಗ್ಯ ಇಲಾಖೆ ಮತ್ತು ಪುರಸಭೆ ಅಧಿಕಾರಿಗಳು ಚಳ್ಳಕೆರೆ ಪಟ್ಟಣದ ಮೀನು ಮಾರುಕಟ್ಟೆಗೆ ಭೇಟಿ ನೀಡಿ ಮೀನು ಮಾರಾಟ ಬಂದ್ ಮಾಡಿಸಿದರು.
ಹಿರಿಯ ಆರೋಗ್ಯಧಿಕಾರಿಗಳಾದ ಮಹಾಲಿಂಗಪ್ಪ, ಮಂಜುನಾಥ್, ವಿಶ್ವನಾಥ್ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ, ಪರಿಸರ ಇಲಾಖೆ ಎಂಜಿನಿಯರ್ ನರೇಂದ್ರ ಬಾಬು, ನಗರಸಭೆ ಪೌರಾಯುಕ್ತ ಪಾಲಯ್ಯ ಅಧಿಕಾರಿಗಳ ತಂಡದಲ್ಲಿ ಇದ್ದರು.