ETV Bharat / state

ಚಿತ್ರದುರ್ಗ ಡಿಸಿಸಿ ಬ್ಯಾಂಕ್​ನಲ್ಲಿ ಎಫ್​ಡಿಎ, ಎಸ್​ಡಿಎ ನೇಮಕಾತಿ; 68 ಹುದ್ದೆಗಳಿಗೆ ಅರ್ಜಿ ಆಹ್ವಾನ - ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ

ಚಿತ್ರದುರ್ಗ ಡಿಸಿಸಿ ಬ್ಯಾಂಕ್​ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

FDA and SDA job Recruitment in Chitrudurga DCC Bank

author img

By ETV Bharat Karnataka Team

Published : Sep 22, 2023, 2:15 PM IST

ಚಿತ್ರದುರ್ಗದ ಜಿಲ್ಲಾ ಸಹಕಾರ ಬ್ಯಾಂಕ್​ ನಿಯಮಿತದಿಂದ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಎಫ್​ಡಿಎ, ಎಸ್​ಡಿಎ ಸೇರಿದಂತೆ ಒಟ್ಟು 68 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಪದವಿ ಓದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅಧಿಸೂಚನೆ
ಅಧಿಸೂಚನೆ

ಹುದ್ದೆಗಳ ವಿವರ:

  • ಸಹಾಯಕ ಪ್ರಧಾನ ವ್ಯವಸ್ಥಾಪಕರು- 6
  • ಪ್ರಥಮ ದರ್ಜೆ ಗುಮಾಸ್ತರು - 9
  • ದ್ವಿತೀಯ ದರ್ಜೆ ಗುಮಾಸ್ತರು - 35
  • ಕಂಪ್ಯೂಟರ್​ ಇಂಜಿನಿಯರ್​ - 2
  • ವಾಹಜ ಚಾಲಕರು - 2
  • ಸಹಾಯಕರು - 12

ವಿದ್ಯಾರ್ಹತೆ:

  • ಸಹಾಯಕ ಪ್ರಧಾನ ವ್ಯವಸ್ಥಾಪಕರು: ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು
  • ಪ್ರಥಮ ದರ್ಜೆ ಗುಮಾಸ್ತರು : ಯಾವುದೇ ವಿಷಯದಲ್ಲಿ ಪದವಿ
  • ದ್ವಿತೀಯ ದರ್ಜೆ ಗುಮಾಸ್ತರು: ಯಾವುದೇ ವಿಷಯದಲ್ಲಿ ಪದವಿ
  • ಕಂಪ್ಯೂಟರ್​ ಇಂಜಿನಿಯರ್​ : ಬಿಎಸ್ಸಿ, ಬಿಇ, ಬಿಟೆಕ್​ ಪದವಿ
  • ವಾಹನ ಚಾಲಕರು :ಎಸ್​ಎಸ್​ಎಲ್​ಸಿ
  • ಸಹಾಯಕರು : ಎಸ್​ಎಸ್​​ಎಲ್​ಸಿ

ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಟ 18 ಮತ್ತು ಗರಿಷ್ಠ ವಯೋಮಿತಿ 35 ವರ್ಷ ಹೊಂದಿರಬೇಕು. ಪ್ರವರ್ಗ 2ಎ, 2ಬಿ, 3ಎ, 3 ಬಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪ. ಜಾ, ಪ.ಪಂ ಅಭ್ಯರ್ಥಿಗಳಿಗೆ 40 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಆಯ್ಕೆ ವಿಧಾನ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮೂಲಕ ಆಯ್ಕೆ ನಡೆಸಲಾಗುವುದು

ಅರ್ಜಿ ಸಲ್ಲಿಕೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಮಾತ್ರ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಸಾಮಾನ್ಯ, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 1500 ರೂ ಅರ್ಜಿ ಶುಲ್ಕ ಮತ್ತು ಪ.ಜಾ, ಪ.ಪಂ ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ 750 ರೂ ಅರ್ಜಿ ಶುಲ್ಕ ನಿಗದಿಸಲಾಗಿದೆ.

ಸೆಪ್ಟೆಂಬರ್​ 15ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಅಕ್ಟೋಬರ್​ 16 ಆಗಿದೆ. ಅರ್ಜಿ ಸಲ್ಲಿಕೆಯನ್ನು ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ವೆಬ್​ಸೈಟ್​ನಲ್ಲಿ ಸಿಗುವ ಲಿಂಕ್​ ಮೂಲಕ ನಡೆಸಬಹುದು.

ಈ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು chitradurgadccbank.com ಇಲ್ಲಿಗೆ ಭೇಟಿ ನೀಡಬಹುದಾಗಿದೆ.

ಇದನ್ನೂ ಓದಿ: Job Alert: ಕೊಪ್ಪಳ ಗ್ರಾಮ ಪಂಚಾಯಿತಿಯಲ್ಲಿದೆ 21 ಗ್ರಂಥಾಲಯ ಮೇಲ್ವಿಚಾರಕರ ಹುದ್ದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.