ಚಿತ್ರದುರ್ಗ: ರೈತರ ಅಳಲನ್ನು ಆಲಿಸಬೇಕಾದ ಸರ್ಕಾರ, ರೈತರ ಕಷ್ಟ ಸುಖ ಕೇಳದೆ ಸದ್ದಿಲ್ಲದೆ ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಲು ಹೊರಟಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.
ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಬೇಡಿ ಎಂದು ಅಪರ ಜಿಲ್ಲಾಧಿಕಾರಿ ಸಂಗಪ್ಪನವರಿಗೆ ಮನವಿ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಮಹಾಮಾರಿ ಕೊರೊನಾ ವೈರಸ್ ಅಟ್ಟಹಾಸದ ವೇಳೆ ರೈತರ ಕಷ್ಟವನ್ನು ಆಲಿಸಬೇಕಾದ ರಾಜ್ಯ ಸರ್ಕಾರ ಸದ್ದಿಲ್ಲದೆ ಅವರಲ್ಲೇ ಕಮಿಟಿ ಮಾಡಿಕೊಂಡು ಎಪಿಎಂಸಿ ಕಾಯ್ದೆಯನ್ನು ತಿದ್ದುಪಡಿ ಮಾಡಲು ಹೊರಟಿದೆ. ಸರ್ಕಾರ ಜಾರಿಗೆ ತರಲು ಹೊರಟಿರುವ ಕಾಯ್ದೆ ರೈತರ ವಿರೋಧಿ. ಇದನ್ನು ವಿರೋಧಿಸುವ ಸಲುವಾಗಿ ರಾಜ್ಯದಾದಂತ್ಯ ರೈತರು ಮನವಿ ಸಲ್ಲಿಸುತ್ತಿದ್ದಾರೆ ಎಂದರು.
ಇನ್ನು ಕೊರೊನಾ ಹಾವಳಿಯಿಂದ ಪ್ರತಿಭಟನೆ ಮಾಡುತ್ತಿಲ್ಲ. ಲಾಕ್ಡೌನ್ ಮುಗಿದ ಬಳಿಕ ರಸ್ತೆಗಿಳಿಯಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.