ETV Bharat / state

ಜಮೀನಿನಲ್ಲಿ ಓಡಾಡಿದ ಎಂಬ ಕಾರಣಕ್ಕೆ ಅಣ್ಣನನ್ನೇ ಕೊಲೆಗೈದ ತಮ್ಮ - chitradurga crime news

ಜಮೀನಿನಲ್ಲಿ ಓಡಾಡಿದ ಎಂಬ ಒಂದೇ ಕಾರಣಕ್ಕೆ ಒಡಹುಟ್ಟಿದ ಅಣ್ಣನನ್ನೇ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಕುಂದಲಗುರ ತೊಟ್ಟಿ ಅಲಿಯಾಸ್ ಶಿವನಗರ ಗ್ರಾಮದಲ್ಲಿ ನಡೆದಿದೆ.

Elder brother killed his  brother in chitradurga
ಜಮೀನಿನಲ್ಲಿ ಓಡಾಡಿದ ಎಂಬ ಕಾರಣಕ್ಕೆ ಅಣ್ಣನನ್ನೇ ಕೊಲೆಗೈದ ತಮ್ಮ
author img

By

Published : Aug 1, 2020, 10:44 PM IST

ಚಿತ್ರದುರ್ಗ: ಹುಟ್ಟುತ್ತಾ ಅಣ್ಣ-ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಎಂಬ ಮಾತು ಇಲ್ಲಿ ಅಕ್ಷರಶಃ ಸತ್ಯವಾಗಿದೆ. ಜಮೀನಿನಲ್ಲಿ ಓಡಾಡಿದ ಎಂಬ ಒಂದೇ ಕಾರಣಕ್ಕೆ ಒಡಹುಟ್ಟಿದ ಅಣ್ಣನನ್ನೇ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಕುಂದಲಗುರ ತೊಟ್ಟಿ ಅಲಿಯಾಸ್ ಶಿವನಗರ ಗ್ರಾಮದಲ್ಲಿ ನಡೆದಿದೆ.

ಜಮೀನಿನಲ್ಲಿ ಓಡಾಡಿದ ಎಂಬ ಕಾರಣಕ್ಕೆ ಅಣ್ಣನನ್ನೇ ಕೊಲೆಗೈದ ತಮ್ಮ

ಶ್ರೀನಿವಾಸ್ (68) ಮೃತ ರ್ದುದೈವಿ. ಮೃತ ಶ್ರೀನಿವಾಸ್​ ಹಾಗೂ ಆತನ ತಮ್ಮ ಗುಂಡಪ್ಪನ ಜಮೀನುಗಳು ಒಂದೆಡೆಯಿದ್ದು, ಪ್ರತಿದಿನ ಅವರ ಜಮೀನಿನಲ್ಲಿ ಇವರು, ಇವರ ಜಮೀನಿನಲ್ಲಿ ಅವರು ಓಡಾಡಿಕೊಂಡೆ ತಮ್ಮ ಜಮೀನಿಗೆ ಹೋಗಬೇಕಾಗಿತ್ತು. ಇಂದು ಅಣ್ಣ ತನ್ನ ಜಮೀನಿನಲ್ಲಿ ಓಡಾಡಿದ ಎಂಬ ಕಾರಣಕ್ಕೆ ತಮ್ಮ ಗುಂಡಪ್ಪ ಹಾಗೂ ಆತನ ಮಗ ನಂದನ್ ಸೇರಿಕೊಂಡು ಶ್ರೀನಿವಾಸ್​ ತಲೆ ಹಾಗೂ ಕಿವಿಯ ಭಾಗಕ್ಕೆ ಬಲವಾಗಿ ಹೊಡೆದಿದ್ದಾರೆ. ಬಳಿಕ ತೀರ್ವ ಗಾಯಗೊಂಡಿದ್ದ ಶ್ರೀನಿವಾಸ್​ನನ್ನು ಹಿರಿಯೂರು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಈ ವೇಳೆಗಾಗಲೇ ಶ್ರೀನಿವಾಸ್ ಅತಿಯಾದ ರಸ್ತಸ್ರಾವದಿಂದ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ.

ಇನ್ನು, ಇವರಿಬ್ಬರ ಜಗಳ ಕಳೆದ ಒಂದು ವರ್ಷದಿಂದ ನಡೆದುಕೊಂಡೇ ಬಂದಿದ್ದು, ಗ್ರಾಮದಲ್ಲಿ ಹಲವು ಬಾರಿ ಪಂಚಾಯಿತಿ ನಡೆಸಿದರೂ ಸಮಸ್ಯೆ ಬಗೆಹರಿದಿರಲಿಲ್ಲ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.