ETV Bharat / state

ರೈತರ ಮುಖವಾಡ ಧರಿಸಿದವರು ರೈತರ ಕಾಯ್ದೆಗಳಿಗೆ ಅಡ್ಡಿ ; ಕೇಂದ್ರ ಸಚಿವ ಡಿವಿ ಸದಾನಂದಗೌಡ

ಕೇವಲ ಪಂಜಾಬ್ ಹಾಗೂ ಹರಿಯಾಣ ರೈತರು ಮಾತ್ರ ಜಾರಿ ಮಾಡಿದ ಕಾಯ್ದೆಗಳ ವಿರೋಧಿಸಿ ಪ್ರತಿಭಟನೆ ನಡೆಸುತ್ತಿವೆ. ಅಲ್ಲಿ ನಮ್ಮ ವಿರೋಧಿ ಬಣಗಳು ರೈತರನ್ನ ಸರ್ಜಾರದ ವಿರುದ್ಧ ಎತ್ತಿಕಟ್ಟು ಪ್ರಯತ್ನ ಮಾಡುತ್ತಿದ್ದಾರೆ..

DV Sadananda Gowda reaction about farmers protest
ಕೇಂದ್ರ ಸಚಿವ ಸದಾನಂದಗೌಡ
author img

By

Published : Jan 2, 2021, 6:13 PM IST

ಚಿತ್ರದುರ್ಗ : ಕೇಂದ್ರ ಸರ್ಕಾರ ರೈತರ ಹಿತದೃಷ್ಟಿಯಿಂದ ಎಪಿಎಂಸಿ ಕಾಯ್ದೆ, ಎಂಎಸ್​ಪಿ ಕಾನೂನು ಜಾರಿ ಮಾಡಿದೆ. ಮುಕ್ತ ಮಾರುಕಟ್ಟೆ ಜೊತೆಗೆ ಆದಾಯ ಹೆಚ್ಚಾಗಿಲಿದೆ. ಆದ್ರೆ, ರೈತ ಮುಖವಾಡ ಧರಿಸಿದ ರೈತರ ವಿರೋಧಿಗಳು ಈ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ ವಿ ಸದಾನಂದಗೌಡ ಕಿಡಿ ಕಾರಿದರು.

ಶಾಸಕ ಜಿ‌.ಹೆಚ್​ ತಿಪ್ಪಾರೆಡ್ಡಿ ಮನೆಗೆ ಭೇಟಿ ನೀಡಿ ಬಳಿಕ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ರೈತರಿಗಾಗಿ ಜಾರಿ ಮಾಡಿದ ಕಾನೂನುಗಳ ವಿರುದ್ಧ ರೈತರನ್ನ ಎತ್ತಿಕಟ್ಟುವ ಕಾರ್ಯಕ್ಕೆ ವಿರೋಧಿ ಬಣಗಳು ಮುಂದಾಗುತ್ತಿವೆ. ರೈತ ಬೆಳೆದ ಬೆಳೆ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿದ್ರೆ ನಷ್ಟವಾಗುತ್ತಿದೆ ಎಂದು ಕೆಲವರು ರೈತರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ ಎಂದು ಕೇಂದ್ರ ಸಚಿವರು ವಾಗ್ದಾಳಿ ನಡೆಸಿದರು.

ಕೋವಿಡ್ ಸಂದರ್ಭದಲ್ಲಿ ಶೇ.40ರಷ್ಟು ಹೆಚ್ಚಿಗೆ ರಾಸಾಯನಿಕ ಗೊಬ್ಬರ ಮಾರಾಟವಾಗಿದೆ‌. ರಾಸಾಯನಿಕ ಗೊಬ್ಬರ ಸಬ್ಸಿಡಿಗೆ ಪ್ರಧಾನಿಗಳು 65 ಸಾವಿರ ಕೋಟಿ ಹಣ ನೀಡಿದ್ದಾರೆ. ಬಿಜೆಪಿ ಸರ್ಕಾರ ಕೃಷಿಕರ ಪರವಾಗಿದೆ ಎನ್ನೋದಕ್ಕೆ ಇನ್ನೆಷ್ಟು ಪುರಾವೆಗಳು ಬೇಕು ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಸಚಿವ ಸಂಪುಟ ವಿಸ್ತರಣೆ ಸಿಎಂ ಪರಮಾಧಿಕಾರ; ಯತ್ನಾಳ್​ ಲಗಾಮಿಲ್ಲದ ನಾಲಿಗೆಗೆ ಡಿವಿ ಕಿಡಿ

ಇನ್ನು, ಕೇವಲ ಪಂಜಾಬ್ ಹಾಗೂ ಹರಿಯಾಣ ರೈತರು ಮಾತ್ರ ಜಾರಿ ಮಾಡಿದ ಕಾಯ್ದೆಗಳ ವಿರೋಧಿಸಿ ಪ್ರತಿಭಟನೆ ನಡೆಸುತ್ತಿವೆ. ಅಲ್ಲಿ ನಮ್ಮ ವಿರೋಧಿ ಬಣಗಳು ರೈತರನ್ನ ಸರ್ಜಾರದ ವಿರುದ್ಧ ಎತ್ತಿಕಟ್ಟು ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.‌

ಪರ್ಯಾಯ ಕಿಟನಾಶಕಗಳ ಬಳಕೆ : ಕೃಷಿ ಭೂಮಿಯ ಫಲವತ್ತತೆ ಮಾರಕವಾಗುವ ಕೆಲವು ಕೀಟನಾಶಕಗಳ ಬಳಕೆ ನಿಷೇಧ ಹೇರಲಾಗಿದೆ‌. ಪರ್ಯಾಯವಾಗಿ ಕೆಲವು ಕೀಟನಾಶಕಗಳ ಬಳಕೆಗೆ ಕೇಂದ್ರ ಸರ್ಕಾರ ರೈತರಿಗೆ ಸಲಹೆ ನೀಡಿದೆ. ರೈತರಿಗೆ ಫಲವತ್ತತೆಗೆ ಒತ್ತು ನೀಡುವ ಕೀಟನಾಶಗಳನ್ನ ಒದಗಿಸಲಾಗುವುದು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.