ETV Bharat / state

ಸ್ಯಾಂಟ್ರೋ ರವಿ ಯಾರೆಂದು ಗೊತ್ತಿಲ್ಲ: ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ

ಭಾರತೀಯ ಜನತಾ ಪಾರ್ಟಿ ಸುಸಂಸ್ಕೃತವಾದ ಪಕ್ಷ - ಕಾಂಗ್ರೆಸ್​ನವರು ತಮ್ಮ ಪೂರ್ವಾಶ್ರಮ ನೋಡಿಕೊಂಡು ಮಾತನಾಡಬೇಕು - ಕಾಂಗ್ರೆಸ್​ ಪಕ್ಷದಲ್ಲಿರುವವರು ಮೂಲ ಕಾಂಗ್ರೆಸ್ಸಿಗರಿಲ್ಲ.

dont-know-who-santro-ravi-is-union-minister-prahlad-joshi
ಸ್ಯಾಂಟ್ರೋ ರವಿ ಯಾರೆಂದು ಗೊತ್ತಿಲ್ಲ: ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ
author img

By

Published : Jan 7, 2023, 10:52 PM IST

Updated : Jan 8, 2023, 6:24 AM IST

ಸ್ಯಾಂಟ್ರೋ ರವಿ ಯಾರೆಂದು ಗೊತ್ತಿಲ್ಲ: ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ

ಚಿತ್ರದುರ್ಗ: ರಾಜ್ಯ ರಾಜಕೀಯದಲ್ಲಿ ಸ್ಯಾಂಟ್ರೋ ರವಿ ಎಂಬ ಹೆಸರು ಕೇಳಿ ಬರುತ್ತಿದ್ದು, ಸ್ಯಾಂಟ್ರೋ ರವಿ ನನಗೆ ಯಾರೆಂದು ಗೊತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಹೇಳಿದ್ದಾರೆ. ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್​ ಯಾರ್‍ಯಾರ ಶಿಷ್ಯಂದಿರು ಆಗಿದ್ದರು. ಯಾರ್‍ಯಾರಿಗೆ ಚಹಾ ಕೊಡುತ್ತಿದ್ದರು ಮೊದಲು ತಿಳಿದುಕೊಳ್ಳಬೇಕು ಹಾಗೂ ನೆನಪು ಇಟ್ಟುಕೊಂಡು ಮಾತನಾಡಬೇಕು.

ಭಾರತೀಯ ಜನತಾ ಪಾರ್ಟಿ ಒಂದು ಸುಸಂಸ್ಕೃತವಾದ ಪಕ್ಷವಾಗಿದೆ. ಹಾಗಾಗೀ ಕಾಂಗ್ರೆಸ್​ ಪಕ್ಷದವರು ತಮ್ಮ ಹಿನ್ನೆಲೆ ಮತ್ತು ಪೂರ್ವಾಶ್ರಮ ನೋಡಿಕೊಂಡು ಮಾತನಾಡಬೇಕು, ನಾನು ಮಾಧ್ಯಮಗಳಲ್ಲಿ ಗಮನಿಸಿದೆ ಹಾಗೆ ಅಮಿತ್ ಶಾ ಅವರಿಗೆ ಮಲ್ಲಿಕಾರ್ಜುನ್​ ಖರ್ಗೆ ಅವರು ನಿವೇನು ಮೇಸ್ತ್ರಿನಾ ಎಂದು ಪ್ರಶ್ನೆ ಮಾಡಿದ್ದಾರೆ, ಹಿಂದೂಗಳು ಕಂಡರೆ ಮತ್ತು ರಾಮ ಮಂದಿರದ ಬಗ್ಗೆ ಯಾಕೆ ನಿಮಗೆ ಹೊಟ್ಟೆ ಕಿಚ್ಚು, ಸಿಟ್ಟು ಮೊದಲು ಇದನ್ನು ಸ್ಪಷ್ಟ ಪಡಿಸಬೇಕು ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಪ್ರಹ್ಲಾದ್​ ಜೋಶಿ ಕಿಡಿಕಾರಿದರು.

ನಿಮ್ಮದು ಒರಿಜಿನಲ್ ಕಾಂಗ್ರೆಸ್ ಅಲ್ಲ: ಬೇರೆ ಬೇರೆ ಪಕ್ಷಗಳ ಹಾಗೆ ಕಾಂಗ್ರೆಸ್ ಕೂಡ ಒಂದಾಗಿದೆ. ಕಾಂಗ್ರೆಸ್​ ಪಕ್ಷದಲ್ಲಿ ಈಗ ಮೂಲ ಕಾಂಗ್ರೆಸ್ಸಿಗರು ಯಾರೂ ಇಲ್ಲ, ಕಾಂಗ್ರೆಸ್​ ಪಕ್ಷದವರು ಎಲ್ಲಾ ಕಡೆ ನೆಹರು, ಇಂದಿರಾ ಗಾಂಧಿ ಕುಟುಂಬದ ಹೆಸರನ್ನು ಇಡಲಾಗಿದೆ, ಆದರೆ ಸ್ವಾತಂತ್ರ್ಯ ಹೋರಾಟಗಾರರಾದ ಬಾಲಗಂಗಾಧರ ತಿಲಕ್​, ಅಂಬೇಡ್ಕರ್, ಸುಭಾಶ್ಚಂದ್ರ ಬೋಸ್​ ಅವರ ಹೆಸರು ಇಟ್ಟಿದ್ದೀರಾ ಎಂದು ಪ್ರಶ್ನಿಸಿದರು. ನಿಮಗೂ ಮತ್ತು ಹಳೆ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ನೀವು ಡ್ಯೂಪ್ಲಿಕೇಟ್ ಕಾಂಗ್ರೆಸ್​ನವರು ಖರ್ಗೆಯವರೇ ನೀವು ರಾಹುಲ್ ಗಾಂಧಿ ಹಿಂದೆ ಓಡಾಡುವವರು ಎಂದು ಕಾಂಗ್ರೆಸ್​ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್​ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಗಣರಾಜ್ಯೋತ್ಸವ ದಿನದಂದು ಕರ್ನಾಟಕ ಸ್ತಬ್ಧ ಚಿತ್ರಕ್ಕೆ ಅವಕಾಶ ಮಾಡಿಕೊಟ್ಟಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಂಸದೀಯ ಮತ್ತು ಕಲ್ಲಿದ್ದಲು ಖಾತೆಯ ಕೇಂದ್ರ ಸಚಿವ ಪ್ರಹ್ಲಾದ್​ ​ ಜೋಶಿ, ಪ್ರತಿ ವರ್ಷ ಎಲ್ಲಾ ರಾಜ್ಯಗಳದ್ದು ಆಯ್ಕೆ ಆಗುವುದಿಲ್ಲ, ಕಳೆದ ಬಾರಿ ಕೇರಳದವರಿಗೆ ಅವಕಾಶ ಸಿಗಲಿಲ್ಲ ಎಂದು ಗಲಾಟೆ ಮಾಡಿದ್ದರು. ಇದರಲ್ಲಿ ಆಯ್ಕೆ ಸಮಿತಿ ಇರುತ್ತದೆ, ರಾಜಕೀಯ ಇರೋದಿಲ್ಲ. ಒಟ್ಟು 12 ರಾಜ್ಯಗಳಿಗೆ ಅವಕಾಶ ಇರುತ್ತದೆ, ಯಾವ ರಾಜ್ಯ ಭಾಗವಹಿಸಬೇಕು ಎಂದು ಅಧಿಕಾರಿಗಳೇ ಆಯ್ಕೆ ಮಾಡುತ್ತಾರೆ, ಇದು ಪ್ರತಿವರ್ಷವೂ ನಡೆದುಕೊಂಡು ಬರುವ ಪದ್ಧತಿ, ಸುಖಾ ಸುಮ್ಮನೆ ವಿವಾದ ಎಬ್ಬಿಸುವುದು ಸರಿಯಲ್ಲ ಎಂದು ಹೇಳಿದರು.

ಕರ್ನಾಟಕದ ಹಿತ ಕಾಪಾಡುವ ಕೆಲಸವನ್ನು ಮಾಡಿದ್ದೇವೆ, ಕಳಸಾ ಬಂಡೂರಿ ಹಾಗು ಭದ್ರಾ ಯೋಜ‌ನೆ ಸೇರಿದಂತೆ ಕನ್ನಡ ನೆಲ‌ ಜಲ ಹಾಗೂ ಇನ್ನಿತರ ವಿಷಯ ಬಂದಾಗ ಯಾವಾಗಲೂ ಬೆಂಬಲವಾಗಿ ನಿ‌ಂತಿದ್ದೇವೆ. ಇದಲ್ಲದೆ ಮೀಸಲಾತಿಯ ಬಗ್ಗೆ ಸಿಎಂ ಒಂದು ಒಳ್ಳೆ ಹೆಜ್ಜೆ ಇಟ್ಟಿದ್ದಾರೆ ಸಮಯಾವಕಾಶ ಕೊಡಬೇಕು ಎಂದು ಸಚಿವರು ಇದೇ ವೇಳೆ ಹೇಳಿದರು.

ಇದನ್ನು ಓದಿ: ಪಿಎಸ್ಐ ಪರೀಕ್ಷಾ ಅಕ್ರಮ: ಜಾಮೀನಿನ ಮೇಲೆ ಹೊರಬಂದ ದಿವ್ಯಾ ಹಾಗರಗಿಗೆ ಭವ್ಯ ಸ್ವಾಗತ

Last Updated : Jan 8, 2023, 6:24 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.