ETV Bharat / state

ಹೆರಿಗೆ ವೇಳೆ ಬಲಗೈ ಸ್ವಾಧೀನ ಕಳೆದುಕೊಂಡ ಹಸುಳೆ: ವೈದ್ಯರ ನಿರ್ಲಕ್ಷ್ಯ ಆರೋಪ - ವೈದ್ಯರ ಜವಾಬ್ದಾರಿ

ಹೆರಿಗೆ ವೇಳೆ ಹಸುಳೆಗೆ ಬಲಗೈ ಸ್ವಾಧೀನ ತಪ್ಪುವಂತೆ ಮಾಡಿದ್ದು, ಇದೀಗ ವೈದ್ಯರು ಜವಾಬ್ದಾರಿಯಿಂದ ಹಿಂದೆ ಸರಿಯುತ್ತಿದ್ದಾರೆ.

ಬಲಗೈ ಸ್ವಾಧೀನ ಕಳೆದುಕೊಂಡ ಹಸುಳೆ
author img

By

Published : Feb 20, 2019, 3:07 PM IST

ಚಿತ್ರದುರ್ಗ: ವೈದ್ಯರನ್ನು ಜನಸಾಮಾನ್ಯರು ವೈದ್ಯೋ ನಾರಾಯಾಣ ಹರಿ ಅಂತಾರೆ. ಅದರೆ ಚಿತ್ರದುರ್ಗದ ಖಾಸಗಿ ವೈದ್ಯರು ಮಾತ್ರ ಮಾಡಿದ್ದೇ ಸರಿ ಅನ್ನುವ ಹಾಗಿದೆ. ಹೆರಿಗೆ ವೇಳೆಹಸುಳೆಗೆ ಬಲಗೈ ಸ್ವಾಧೀನ ತಪ್ಪುವಂತೆ ಮಾಡಿದ್ದು, ಇದೀಗ ಈ ಮಗು ಜೀವನಪರ್ಯಂತ ವಿಕಲಾಂಗವಾಗಿ ಜೀವಿಸುವಂತಾಗಿದೆ.

ಚಿತ್ರದುರ್ಗದ ಚಳ್ಳಕೆರೆ ಟೋಲ್ ಗೇಟ್ ಬಳಿಯ ನಿವಾಸಿ ನಂದಿನಿ ಮಗುವಿನ ತಾಯಿ. ಈಕೆ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಪ್ರತಿ ತಿಂಗಳು ಚಿತ್ರದುರ್ಗದ ಪತಂಜಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ, ಪರೀಕ್ಷೆ ಮಾಡಿಸುತ್ತಿದ್ದರು. ಇನ್ನು ವೈದ್ಯರಾದ ಡಾ. ತೋಯಜಾಕ್ಷಿ ಬಾಯಿಯವರು ಈಕೆಗೆ ನಾರ್ಮಲ್ ಡಿಲವರಿ ಮಾಡಿಸಿದ್ರು. ಆದ್ರೆ ಹೆರಿಗೆ ಬಳಿಕ ಮಗುವಿನ ಬಲಗೈ ಸ್ವಲ್ಪ ಸಮಸ್ಯೆ ಇದೆ. ಕೆಲ ದಿನಗಳ ಬಳಿಕ ಸರಿಯಾಗುತ್ತದೆ ಎಂದಿದ್ದರು. ಆದ್ರೆ ಮೂರು ಕೆಜಿ ತೂಗೋ ಗಂಡು ಮಗುವಿಗೆ ಐದು ತಿಂಗಳು ತುಂಬಿದರೂ ಕೈಯಲ್ಲಿ ಸ್ವಾಧೀನವೇ ಇಲ್ಲವಗಿದೆ.

ಅಷ್ಟೇ ಅಲ್ಲದೆ ಕೈ ಚಿಕಿತ್ಸೆಗಾಗಿ ಈಗಾಗಲೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ರೂ ಕೂಡ ಮಗುವಿನ ಕೈ ಸರಿಯಾಗಿಲ್ಲ. ಈ ಹಿನ್ನೆಲೆ ನಂದಿನಿ ಸಂಬಂಧಿಕರು ಆಸ್ಪತ್ರೆಗೆ ಬಂದು ವೈದ್ಯರ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.ಇನ್ನು ಈ ಬಗ್ಗೆ ವೈದ್ಯೆ ತೋಯಜಾಕ್ಷಿ ಬಾಯಿಯವರನ್ನ ಕೇಳಿದ್ರೆ, ನಾವು ಸರಿಯಾಗಿಯೇ ಕರ್ತವ್ಯ ನಿರ್ವಹಿಸಿದ್ದೇವೆ. ನನಗೂ ಇದಕ್ಕೂ ಸಂಬಂಧವಿಲ್ಲ. ಇದು ಮೆಡಿಕಲ್ ಎಮರ್ಜೆನ್ಸಿ ಅಂತಾರೆ. ಅಗತ್ಯವಿದ್ದರೆ ಕಾನೂನು ಹೋರಾಟ ಮಾಡಲಿ ಎಂದಿದ್ದಾರೆ

.

Intro:Body:

1 doctr- Sheela.txt  

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.