ಚಿತ್ರದುರ್ಗ: ಭಾರೀ ಗಾಳಿ, ಮಳೆಯಿಂದಾಗಿ ಅಪಾರ ಪ್ರಮಾಣದ ಬಾಳೆ ಗಿಡಗಳು ನೆಲಕಚ್ಚಿದ್ದು, ರೈತರು ಕಂಗಾಲಾಗಿದ್ದಾರೆ.
ಮಳೆಯ ಅವಾಂತರಕ್ಕೆ ಜೆ.ಬಿ ಹಳ್ಳಿಯ ಸುಮಾರು 20ಕ್ಕೂ ಹೆಚ್ಚು ರೈತರ ಒಟ್ಟಾರೆ 200 ಎಕರೆ ಪ್ರದೇಶದಲ್ಲಿ ಬೆಳದ ಬಾಳೆ ತೋಟ ನಾಶವಾಗಿದೆ. ಈ ಹಿನ್ನೆಲೆ ರೈತರಿಗೆ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.
ಸುಮಾರು 20 ಸಾವಿರಕ್ಕೂ ಹೆಚ್ಚಿನ ಬಾಳೆ ಗಿಡಗಳು ನೆಲಕ್ಕುರುಳಿದ್ದು, ರೈತರ ಬದುಕು ಅತಂತ್ರವಾಗಿದೆ. ಮೊದಲೇ ಕೊರೊನಾದಿಂದ ಕಂಗೆಟ್ಟಿದ್ದ ರೈತರು ಇದೀಗ ಬೆಳೆ ನಾಶದಿಂದ ದಿಕ್ಕು ತೋಚದಂತಾಗಿದ್ದಾರೆ.