ಚಿತ್ರದುರ್ಗ: ಪ್ರಿಯಕರನ ಜೊತೆ ತೆರಳಿದ್ದ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಕೆಂಕೆರೆ ಗ್ರಾಮದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಆಕೆಯನ್ನು ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ದಿವ್ಯ (22) ಮೃತ ಮಹಿಳೆ. ಈಕೆ 3 ತಿಂಗಳ ಹಿಂದೆ ಪತಿ ಬಿಟ್ಟು ಪ್ರಿಯಕರ ಮಂಜುನಾಥ್ ಜತೆ ತೆರಳಿದ್ದಳು. ಮಂಜುನಾಥ್ ಜತೆ ದಿವ್ಯ ಹಿರಿಯೂರಲ್ಲಿ ವಾಸವಾಗಿದ್ದರು. ಜ್ವರ ಎಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ ದಿವ್ಯಾ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.
ಮಹಿಳೆಯ ಮೈಮೇಲೆ ಬರೆ ಮತ್ತು ಪರಚಿದ ಗಾಯಗಳಿವೆ. ಹೀಗಾಗಿ ಮಂಜುನಾಥ್, ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ ಎಂದು ಮೃತಳ ಪೋಷಕರು ಆರೋಪಿಸುತ್ತಿದ್ದಾರೆ. ಇನ್ನೊಂದೆಡೆ, ಪ್ರಿಯಕರ ಮಂಜುನಾಥ್ ಸಹ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದು, ದಿವ್ಯಾಳ ಸಾವಿನಿಂದ ನೊಂದು ವಿಷ ಸೇವಿಸಿದೆ ಎಂದು ಹೇಳುತ್ತಿದ್ದಾನೆ. ಈ ಕುರಿತು ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ