ಚಿತ್ರದುರ್ಗ: ಹಿರಿಯೂರು ನಗರದಲ್ಲಿ ಕರುವನ್ನು ಕಡಿದು ಹಾಕಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಬ್ಬಿದ್ದ ಸುಳ್ಳು ಸುದ್ದಿಗೆ ಬ್ರೇಕ್ ಬಿದ್ದಿದೆ.
ನಗರದ ತೇರುಮಲ್ಲೇಶ್ವರ ದೇವಾಲಯದ ಬಳಿ ಈ ಘಟನೆ ನಡೆದಿದ್ದು, ದೇವಾಲಯದ ಬಳಿ ಕರುವಿನ ಅರ್ಧ ದೇಹ ಪತ್ತೆಯಾಗಿದ್ದು, ಕರುವಿನ ಫೋಟೊಗಳು ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಮೂಲಕ ಕಿಚ್ಚು ಹಬ್ಬಿಸಿತ್ತು. ಅದರೆ ಇದನ್ನೆ ಬಂಡವಾಳ ಮಾಡಿಕೊಂಡ ಕೆಲ ಕಿಡಿಗೇಡಿಗಳು ಹಿಂದೂ ಮುಸ್ಲಿಂರ ಮದ್ಯೆ ಕಿಚ್ಚು ಹಬ್ಬಿಸುವ ಪ್ರಯತ್ನಕ್ಕೆ ಮುಂದಾಗಿದ್ದರು.
ಮಧ್ಯ ಪ್ರವೇಶಿಸಿದ ಹಿರಿಯೂರಿನ ಪೋಲಿಸರು ಗೊಂದಲಗಳಿಗೆ ತೆರೆ ಎಳೆದಿದ್ದಾರೆ, ಸತ್ಯಂಶ ಕೊನೆಗೂ ಸಿಸಿ ಕ್ಯಾಮರಾದಿಂದ ಬಯಲಿಗೆ ಬಂದಿದ್ದು, ಬೀದಿ ನಾಯಿಗಳ ಹಾವಳಿಗೆ ಕರುವೊಂದು ಬಲಿಯಾಗಿರುವ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ. ಕಿಡಿಗೇಡಿಗಳು ನಗರದಲ್ಲಿ ಹಿಂದೂ ಮತ್ತು ಮುಸ್ಲಿಂರ ಮಧ್ಯೆ ಗಲಭೆ ಹಬ್ಬಿಸಲು ಸುಳ್ಳು ಸುದ್ದಿ ಹಬ್ಬಿಸುವ ಪ್ರಯತ್ನಕ್ಕೆ ಪೋಲಿಸರು ಸಿಸಿ ಕ್ಯಾಮರಾ ವಿಡಿಯೋ ಮೂಲಕ ಬ್ರೇಕ್ ಹಾಕಿದ್ದಾರೆ.