ಚಿತ್ರದುರ್ಗ: ಕೊರೊನಾ ವೈರಸ್ ಭೀತಿ ಪೊಲೀಸ್ ಸಿಬ್ಬಂದಿಗೂ ಕಾಡುತ್ತಿದ್ದು, ಭಯದ ವಾತಾವರಣದಲ್ಲೇ ಕಾರ್ಯನಿರ್ವಹಿಸುವ ಪರಿಸ್ಥಿತಿ ನಿರ್ಮಾಣ ಆಗಿದೆ.
ಸ್ವತಃ ಎಸ್ಪಿ ಜಿ.ರಾಧಿಕಾ ಚಿತ್ರದುರ್ಗ ಗ್ರಾಮೀಣ ಠಾಣೆಗೆ ಕೀಟಾನಾಶಕ ಔಷಧಿ ಸಿಂಪಡಿಸುವ ಮೂಲಕ ಜಿಲ್ಲೆಯ ಪ್ರತಿಯೊಂದು ಠಾಣೆಗೆ ಔಷಧಿ ಸಿಂಪಡಿಸುವಂತೆ ಸಿಬ್ಬಂದಿಗೆ ಸೂಚಿಸಿದ್ದಾರೆ.
ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಕೀಟನಾಶಕ ಸಿಂಪಡಿಸುವ ಕಾರ್ಯಕ್ರಮವನ್ನು ಎಸ್ಪಿ ಜಿ.ರಾಧಿಕಾ ಉದ್ಘಾಟಿಸಿದರು. ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ಯಾವ ರೀತಿಯ ತೊಂದರೆಯೂ ಆಗದಿರಲಿ ಎಂದು ಠಾಣೆಗೆ ಕೀಟನಾಶಕ ಸಿಂಪಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಇನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕೊರೊನಾ ಮಹಾಮಾರಿಯ ಮುಂಜಾಗ್ರತೆ ಕ್ರಮವನ್ನು ಹೇಗೆ ಮಾಡಿಕೊಳ್ಳಬೇಕೆಂದು ತಿಳಿಸಿದರು. ನಂತರ ಚಿತ್ರದುರ್ಗ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳು ಹಾಗೂ ಕ್ವಾಟ್ರಸ್ಗಳಿಗೆ ಕೀಟನಾಶಕ ಔಷಧಿ ಸಿಂಪಡಿಸಲು ತಿಳಿಸಿದರು.