ಚಿತ್ರದುರ್ಗ: ಜಿಲ್ಲೆಯಲ್ಲಿಂದು ಇಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 59ಕ್ಕೆ ಏರಿಕೆಯಾಗಿದೆ.
ಹಿರಿಯೂರು ಪಟ್ಟಣದ ಸೋಂಕಿತ ವರ್ತಕನ ಸಂಪರ್ಕದಲ್ಲಿದ್ದ ಚಳ್ಳಕೆರೆ ಪಟ್ಟಣದ ನಿವಾಸಿ 65 ವರ್ಷದ ವೃದ್ಧೆಗೆ (ಪಿ-13217) ಸೋಂಕು ತಗುಲಿದೆ. ಇತ್ತ ಬೆಂಗಳೂರು ಪ್ರಯಾಣ ಹಿನ್ನೆಲೆ, ಬೆಂಗಳೂರಿನ ಸಾರಿಗೆ ಇಲಾಖೆಯಲ್ಲಿ ನಿರ್ವಾಹಕನಾಗಿರುವ ಹಿರಿಯೂರಿನ 33 ವರ್ಷದ ವ್ಯಕ್ತಿಗೆ (ಪಿ-13218) ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 59ಕ್ಕೆ ಏರಿಕೆಯಾಗಿದ್ದು, ಜಿಲ್ಲೆಯ ಜನರು ಆತಂಕದಲ್ಲಿದ್ದಾರೆ.