ಚಿತ್ರದುರ್ಗ: ಕೊರೊನಾ ವೈರಸ್ನಿಂದಾಗಿ ದೇಶದಾದ್ಯಂತ ಸಂಪೂರ್ಣ ಲಾಕ್ಡೌನ್ ಜಾರಿ ಮಾಡಲಾಗಿದೆ. ಈ ಹಿನ್ನೆಲೆ ಚಿತ್ರದುರ್ಗದಲ್ಲಿ ರೈತರು ಬೆಳೆದಿದ್ದ ಕಲ್ಲಂಗಡಿ ಹಣ್ಣು ಮಾರುಕಟ್ಟೆಗೆ ತರಲಾಗದೆ ಜಮೀನಿನಲ್ಲಿಯೇ ಬಿಟ್ಟಿದ್ದಾರೆ.
ಸೂಕ್ತ ಮಾರುಕಟ್ಟೆ ಹಾಗೂ ವಾಹನ ಸಿಗದ ಹಿನ್ನೆಲೆ ಹೊಲದಲ್ಲಿಯೇ ಕಲ್ಲಂಗಡಿಯನ್ನು ಬಿಟ್ಟಿದ್ದಾರೆ. ಈ ಕಲ್ಲಂಗಡಿ ಕುರಿ, ಮೇಕೆಗಳ ಪಾಲಾಗಿದ್ದು, ರೈತರು ಕಂಗಾಲಾಗಿದ್ದಾರೆ. ಜಮೀನಿನಲ್ಲಿ ಬೆಳೆದಿದ್ದ ಕಲ್ಲಂಗಡಿ ಸಂಪೂರ್ಣ ನಾಶವಾಗಿದ್ದು, ಸರ್ಕಾರ ಪರಿಹಾರ ನೀಡಬೇಕು ಅಂತ ರೈತರು ಆಗ್ರಹಿಸಿದ್ದಾರೆ.